Bigg Boss Telugu : ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡ, ತೆಲುಗು ಗ್ರೂಪ್, ಫೈಟ್ ? ಶುರುವಾಯ್ತು ಹೊಸ ಚರ್ಚೆ

Written by Soma Shekar

Published on:

---Join Our Channel---

Bigg Boss Telugu : ಬಿಗ್ ಬಾಸ್ ತೆಲುಗು (Bigg Boss Telugu) ಸೀಸನ್ 8 ಹಿಂದಿನ ಎಲ್ಲಾ ಸೀಸನ್ ಗಳಿಗಿಂತ ಸಿಕ್ಕಾಪಟ್ಟೆ ಸದ್ದು ಮತ್ತು ಸುದ್ದಿಯನ್ನ ಮಾಡ್ತಿದೆ. ಮನೆಯಲ್ಲಿ ಸ್ಪರ್ಧಿಗಳ ಆಟ, ಮಾತು, ಜಗಳ, ಗಲಾಟೆ ಮತ್ತು ಅಬ್ಭರ ಎಲ್ಲವೂ ಸಹಾ ಸುದ್ದಿಯಾಗಿದೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಂತೂ ಈ ವಿಚಾರವಾಗಿ ದೊಡ್ಡ ಚರ್ಚೆಗಳೇ ನಡೆಯುತ್ತಿದೆ.

ಇದೆಲ್ಲಕ್ಕಿಂತ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಎರಡು ಗ್ರೂಪ್ ಗಳ ನಡುವೆ ಜಿದ್ದಾಜಿದ್ದಿ ನಡೀತಾ ಇರೋದು ಸ್ಪಷ್ಟವಾಗಿ ಕಂಡಿದೆ. ಅದು ಕನ್ನಡ ಮತ್ತು ತೆಲುಗು ಗ್ರೂಪ್ (Kannada & Telugu Group) ಅಂತಾನೇ ಕರೆಲಾಗಿದೆ. ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡದಿಂದ ಹೋಗಿ ತೆಲುಗಿನಲ್ಲಿ ಹೆಸರಾದ ಸೆಲೆಬ್ರಿಟಿಗಳನ್ನು ಸ್ಪರ್ಧಿಗಳಾಗಿ ಕಳಿಸಲಾಗುತ್ತದೆ.

ಈ ಬಾರಿ ಕನ್ನಡದವರ ಸಂಖ್ಯೆ ಸ್ವಲ್ಪ ಹೆಚ್ಚಾಗಿಯೇ ಇದೆ. ಅದರಲ್ಲಿ ಕೆಲವು ಸ್ಪರ್ಧಿಗಳು ಈಗಾಗಲೇ ಫಿನಾಲೆಗೆ ಪಕ್ಕಾ ಅನ್ನುವಾಗ್ಲೇ ಕನ್ನಡದ ನಿಖಿಲ್ (Nikhil) ಗೆಲ್ಲುವ ಸ್ಪರ್ಧಿ ಅಂತಾನೇ ಊಹೆ ಮಾಡಲಾಗಿತ್ತು. ಆದೆ ವೈಲ್ಡ್ ಕಾರ್ಡ್ ಮೂಲಕ ಗೌತಮ್ ಕೃಷ್ಣ (Goutham Krishna) ಮನೆಯೊಳಕ್ಕೆ ಎಂಟ್ರಿ ಕೊಟ್ಟ ಮೇಲೆ ಪರಿಸ್ಥಿತಿಗಳು ಉಲ್ಟಾ ಹೊಡೆದಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಕನ್ನಡ ಮತ್ತು ತೆಲುಗು ಗ್ರೂಪ್ ನಡುವೆ ಫೈಟ್ ನಡೀತಿದೆ ಎನ್ನುತ್ತಿದ್ದಾರೆ ವೀಕ್ಷಕರು. ಅಲ್ಲದೇ ಗೌತಮ್ ಕೃಷ್ಣ ಮಾತು, ಆಟ ಎಲ್ಲವೂ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈಗ ಅನೇಕರು ಗೌತಮ್ ಈ ಸಲ ವಿನ್ನರ್ ಅಂತಿದ್ದಾರೆ. ತೆಲುಗು ಬಿಗ್ ಬಾಸ್ ಮಾತ್ರ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ.

BBK 11 : ಶೋ ಅರ್ಧಕ್ಕೆ ಬೇಡ ಅಂತ ಹೊರ ಬಂದ ಶೋಭಾ, ದೊಡ್ಡ ಡ್ರಾಮಾ ಎಂದು ಗರಂ ಆದ ಕಿಚ್ಚ ಸುದೀಪ್

Leave a Comment