Bigg Boss : ಬಿಗ್ ಬಾಸ್ (Bigg Boss) ಓಟಿಟಿ ಸೀಸನ್ ಮೂರು ಈಗಾಗಲೇ ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದೆ. ಈ ಸೀಸನ್ ನಲ್ಲಿ ಸ್ಪರ್ಧಿಯಾಗಿರುವ ಅರ್ಮಾನ್ ಮಲಿಕ್ (Arman Malik) ಅವರಿಗೆ ಅವರ ಮೊದಲ ಪತ್ನಿ ಪಾಯಲ್ (Payal) ವಿಚ್ಚೇದನ ನೀಡೋದಾಗಿ ಹೇಳಿದ್ದಾರೆ. ಈ ವಿಷಯವನ್ನು ಕೇಳಿ ಅರ್ಮಾನ್ ಹಾಗೂ ಅವರ ಎರಡನೇ ಪತ್ನಿ ಕೃತಿಕಾ (Kritika) ಅವರು ಬಹಳ ಬೇಸರಗೊಂಡಿದ್ದಾರೆ. ಅರ್ಮಾನ್ ಮಲಿಕ್ ತಮ್ಮ ಇಬ್ಬರೂ ಹೆಂಡತಿಯರ ಜೊತೆಗೆ ಯೂಟ್ಯೂಬ್ ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರೋ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪಡೆದ ಜನಪ್ರಿಯತೆ ಅವರನ್ನು ಪತ್ನಿಯರ ಸಮೇತ ಬಿಗ್ ಬಾಸ್ ಗೆ ಬರುವಂತೆ ಮಾಡಿತ್ತು. ಆದರೆ ಅವರ ಮೊದಲ ಪತ್ನಿ ಪಾಯಲ್ ಈಗಾಗಲೇ ಎಲಿಮಿನೇಟ್ ಆಗಿದ್ದಾರೆ. ಇದೆ ವೇಳೆ ಹೊರಗೆ ಅರ್ಮಾನ್ ಬಹುಪತ್ನಿತ್ವಕ್ಕೆ ಬೆಂಬಲ ನೀಡುತ್ತಿದ್ದಾರೆ ಅಂತ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಅರ್ಮಾನ್ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಾರೆ ಅಂತ ಟೀಕೆ ಮಾಡಿದ್ದಾರೆ.
ಪಾಯಲ್ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿ ಹೊರಬಂದಿದ್ದು, ಹೊರಗೆ ಸಾಕಷ್ಟು ನೆಗೆಟಿವ್ ಮಾತುಗಳು ಮತ್ತು ನೆಗೆಟಿವ್ ಕಾಮೆಂಟ್ ಗಳು ಹರಿದು ಬರುತ್ತಿರುವುದನ್ನು ನೋಡಿ ಬೇಸರ ಪಟ್ಟು ಕೊಂಡಿದ್ದಾರೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬಗ್ಗೆ ಕೇಳಿ ಬರುತ್ತಿರುವ ಮಾತುಗಳಿಂದ ಬೇಸರಗೊಂಡು ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ.
ಮಾದ್ಯಮದವರು ಬಿಗ್ ಬಾಸ್ ಮನೆಗೆ ಬಂದಾಗ ಎಲ್ಲರ ಮುಂದೆ ಪಾಯಲ್ ಡಿವೋರ್ಸ್ ಕೊಡಲು ನಿರ್ಧಾರ ಮಾಡಿದ್ದಾರೆ ಎನ್ನುವ ವಿಚಾರ ಬಹಿರಂಗಪಡಿಸಿದ್ದು, ಅದನ್ನ ಕೇಳಿ ಅರ್ಮಾನ್ ಅವರ ಎರಡನೇ ಪತ್ನಿ ಕೃತಿಕಾ ಶಾಕ್ ಆಗಿದ್ದಾರೆ ಮತ್ತು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಆದರೆ ಅರ್ಮಾನ್ ಮಲಿಕ್ ಈ ವಿಚಾರವಾಗಿ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ ಎನ್ನುವಂತೆ ಕಂಡಿದೆ.
Asim Riaz ಬಿಗ್ ಬಾಸ್ ಸ್ಪರ್ಧಿಯ ದುರಹಂಕಾರ, ರೋಹಿತ್ ಶೆಟ್ಟಿ ಶೋನಿಂದ ಹೊರ ಹಾಕಿದ ತಂಡ; ಫ್ಯಾನ್ಸ್ ಶಾಕ್