Bigg Boss Kannada 11: ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಮೊದಲ ದಿನವೇ ಕಣ್ಣೀರು ಹಾಕಿದ ನಟಿ ಗೌತಮಿ ಜಾಧವ್. ಗೌತಮಿ ಅವರು ಕನ್ನಡ ಕಿರುತೆರೆಯಲ್ಲಿ ಸತ್ಯ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ಈ ಸೀರಿಯಲ್ ನಲ್ಲಿ ಅವರ ಲುಕ್ ಮತ್ತು ಖಡಕ್ ಸ್ಟೈಲ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಕಾರಣದಿಂದಲೇ ನಟಿ ಬಿಗ್ ಬಾಸ್ ಮನೆಗೂ ಸಹಾ ಅದೇ ಡ್ರೆಸ್ ನಲ್ಲಿ ಖಡಕ್ ಎಂಟ್ರಿಯನ್ನು ನೀಡಿದ್ದರು.
ಆದರೆ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಗೌತಮಿ (Gautami Jadhav) ಭಾವುಕರಾಗಿದ್ದಾರೆ. ನಟಿ ಗೌತಮಿ ಅವರು ಧರಿಸಿದ್ದ ವಿಗ್ ವಿಚಾರವಾಗಿ ಮನೆಯಲ್ಲಿ ಇರುವ ಸ್ಪರ್ಧಿಗಳಾದ ತ್ರಿವಿಕ್ರಮ್ (Trivikram) ಮತ್ತು ರಂಜಿತ್ (Ranjith) ಅವರು ಮಾತನಾಡಿಕೊಂಡಿದ್ದು, ಇವರು ವಿಗ್ ಹಾಕ್ಕೊಂಡೇ ಇರಬೇಕಾ? ಟಾಸ್ಕ್ ವೇಳೆ ಬಿದ್ದು ಹೋದ್ರೆ ಹೇಗೆ ಅಂತ ಮಾತನಾಡಿಕೊಂಡಿದ್ದಾರೆ.
ನಂತರ ಗೌತಮಿ ಅವರು ಪೌಡರ್ ರೂಮ್ ನಲ್ಲಿ ಕ್ಯಾಮೆರಾ ಮುಂದೆ ಮಾತನಾಡ್ತಾ, ಜನರು ಇದೇ ರೀತಿ ನನ್ನ ನೋಡಿ ಪ್ರೀತಿಸಿ ಇಲ್ಲಿವರೆಗೆ ಬರೋ ವರೆಗೂ ನನ್ನ ಜೊತೆ ಇದ್ದಾರೆ. ನಾನು ಈ ಶೋಗೆ ಈ ಡ್ರೆಸ್ ನಲ್ಲಿ ಬಂದಿದ್ದೀನಿ ಅಂದ್ರೆ ಅದು ಜನಕ್ಕೋಸ್ಕರ ಅಂತ ಹೇಳ್ತಾ ಈಗ ವಿಗ್ ತೆಗಿತೀನಿ ಅಂತ ಹೇಳ್ತಾ ಭಾವುಕರಾಗಿ ಕಣ್ಣೀರನ್ನು ಹಾಕಿದ್ದಾರೆ. ನಂತರ ತಮ್ಮ ವಿಗ್ ಅನ್ನು ತೆಗೆದಿದ್ದಾರೆ..
ಅಲ್ಲದೇ ಇಲ್ಲಿಂದ ನಾನು ನಾನಾಗಿ ಬದಲಾಗ್ತೀನಿ ಅಂತ ಅನ್ಸುತ್ತೆ. ಗೌತಮಿಯ ಹೊಸ ಅಧ್ಯಾಯ ಇಲ್ಲಿ ಶುರುವಾಗ್ತಿದೆ ಎಂದು ಹೇಳಿದ್ದಾರೆ. ಇಷ್ಟು ದಿನ ಸತ್ಯ ಪಾತ್ರದ ಲುಕ್ ನಲ್ಲೇ ಜನರ ಮುಂದೆ ಕಾಣ್ತಿದ್ದ ಗೌತಮಿ ಅವರು ಇನ್ಮುಂದೆ ಬಿಗ್ ಬಾಸ್ ನಲ್ಲಿ ಹೇಗಿರ್ತಾರೆ ಅನ್ನೋದನ್ನ ನೋಡೋಕೆ ಅವರ ಅಭಿಮಾನಿಗಳು ಸಹಾ ಕಾಯ್ತಾ ಇದ್ದಾರೆ.