Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಟಾಸ್ಕ್ ಗಳನ್ನು ಮನರಂಜನೆ ಉದ್ದೇಶಕ್ಕಾಗಿ ನೀಡಲಾಗುತ್ತದೆ ಅಂತ ಹೇಳಿದರೂ ಕೂಡಾ ಅನೇಕ ಸಂದರ್ಭಗಳಲ್ಲಿ ಅದು ಮನರಂಜನೆಗಿಂತ ವೈಯಕ್ತಿಕ ಕಿತ್ತಾಟ, ಕಾದಾಟಗಳಿಗೆ ಕಾರಣವಾಗುತ್ತದೆ ಎನ್ನುವುದು ಸತ್ಯ. ಸೀಸನ್ ಹನ್ನೊಂದರಲ್ಲಿ (Bigg Boss Kannada 11) ಪ್ರತಿ ಟಾಸ್ಕ್ ನಲ್ಲೂ ಜಗಳ ನಡೆಯುತ್ತಲೇ ಇದೆ.
ಈಗಲೂ ಮನೆಯಲ್ಲಿ ಟಾಸ್ಕ್ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ನಡೆದಿದೆ ಮಾರಾಮಾರಿ. ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಎರಡು ಪಕ್ಷಗಳಾಗಿ ವಿಭಜಿಸಿ ರಾಜಕೀಯದ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಪಕ್ಷ ರಾಜಕೀಯದ ಜಿದ್ದಾಜಿದ್ದಿ ಜೋರಾಗಿ ನಡೆದಿದ್ದು ಉಗ್ರಂ ಮಂಜು (Ugram Manju) ಉಗ್ರವಾಗಿಯೇ ಟಾಸ್ಕ್ ಅನ್ನು ಆಡಿದಂತೆ ಕಂಡಿದೆ.
ಟಾಸ್ಕ್ ವೇಳೆ ಉಗ್ರಂ ಮಂಜು ಅವರು ಮಾನಸ ಅವರನ್ನು ತಳ್ಳಿರುವ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲೀಗ ವೈರಲ್ ಆಗಿದೆ. ಆಟದ ವೇಳೆಯಲ್ಲಿ ಉಗ್ರಂ ಮಂಜು ತಮ್ಮ ಮುಂದಿದ್ದ ಎದುರು ಪಾರ್ಟಿ ವಿರುದ್ಧ ಅರಚುತ್ತಾ, ಹಿಂದಿನಿಂದ ಬಂದ ಮಾನಸ ಅವರನ್ನು ತಳ್ಳಿದ್ದಾರೆ.
ಮಾನಸ (Manasa) ಅವರ ಕಿಬ್ಬೊಟ್ಟೆಗೆ ಮಂಜು ಅವರ ಮೊಣಕೈ ತಾಗಿದ್ದು ಮಾನಸ ನೋವಿನಿಂದ ಕಣ್ಣೀರು ಹಾಕಿದ್ದಾರೆ. ವೀಡಿಯೋ ನೋಡಿದ ನಂತರ ಕೆಲವರು ಉಗ್ರಂ ಮಂಜು ಬೇಕಂತ ಹೀಗೆ ಮಾಡಿಲ್ಲ, ಅದು ಟಾಸ್ಕ್ ವೇಳೆ ಕಣ್ತಪ್ಪಿ ಆಗಿದೆ ಎಂದು ಉಗ್ರಂ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಆದರೆ ಇನ್ನೂ ಕೆಲವರು ಉಗ್ರಂ ಮಂಜು ಅವರು ದೈಹಿಕ ಹಲ್ಲೆ ನಡೆಸಿದ್ದಾರೆ. ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಬೇಕೆಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಒಟ್ನಲ್ಲಿ ರಾಜಕೀಯದ ಟಾಸ್ಕ್ ಬಿಗ್ ಬಾಸ್ ಮನೆಯನ್ನ ಯುದ್ಧ ಭೂಮಿಯಾಗಿ ಬದಲಿಸಿದೆ.
Bigg Boss ಮನೆಗೆ ಲಾಯರ್ ಜಗದೀಶ್ ರೀ ಎಂಟ್ರಿ? ಯಾರನ್ನೆಲ್ಲಾ ಟಾರ್ಗೆಟ್ ಇಟ್ಕೊಂಡು ಕೊಡ್ತಿದ್ದಾರೆ ಎಂಟ್ರಿ