Bigg Boss Kannada 11 ಈ ಬಾರಿ ಬಿಗ್ ಬಾಸ್ ನಲ್ಲಿ (Bigg Boss Kannada 11) ಸ್ವರ್ಗ ಮತ್ತು ನರಕ ಅನ್ನೋ ಕಾನ್ಸೆಪ್ಟ್ ಇದೆ. ಆದ್ರೆ ಇಲ್ಲಿ ನರಕಕ್ಕೆ ಕಳುಹಿಸುವ ಸ್ಪರ್ಧಿಗಳನ್ನು ಮೊದಲು ಎಂಟ್ರಿ ಕೊಟ್ಟ ಸ್ಪರ್ಧಿಗಳಾದ ಭವ್ಯ ಗೌಡ (Bhavya Gowda) ಮತ್ತು ಯಮುನಾ (Yamuna) ಅವರಿಗೆ ನೀಡಲಾಗಿತ್ತು. ಆದ್ರೆ ಇಲ್ಲಿ ಉದ್ಭವಿಸುವ ಪ್ರಶ್ನೆ ಯಾವ ಆಧಾರ ಅಥವಾ ಮಾನದಂಡದ ಮೇಲೆ ಇವರಿಗೆ ಇಂತಹ ಅವಕಾಶವನ್ನು ನೀಡಲಾಯಿತು. ಇವರನ್ನ ಮಾತ್ರ ನೇರವಾಗಿ ಸ್ವರ್ಗಕ್ಕೆ ಹೇಗೆ ಕಳಿಸಲಾಯಿತು? ಎನ್ನುವುದು ಪ್ರಶ್ನೆ.
ನಂತರ ಜಗದೀಶ್ ಮತ್ತು ಗೌತಮಿ ಅವರಿಗೆ ಅದಶ ಅಧಿಕಾರ ನೀಡಲಾಗಿತ್ತು. ಇನ್ನು ನರಕದಲ್ಲಿ ಇರೋರಿಗೆ ಗಂಜಿ ಊಟ, ಸ್ವರ್ಗದಲ್ಲಿ ಇರೋರಿಗೆ ಸಕಲ ಸವಲತ್ತು. ಸ್ವರ್ಗದಲ್ಲಿರೋರು ಕ್ಯಾಪ್ಟನ್ ಆಗೋಕೆ ನರಕದಲ್ಲಿ ಇರೋರು ಶ್ರಮ ಪಡೋದು ಇದೆಲ್ಲಾ ನೋಡಿದಾಗ ಸ್ಪರ್ಧಿಗಳಲ್ಲಿ ಇಂತಹ ತಾರತಮ್ಯ ಏಕೆ ಎನ್ನುವ ಅನುಮಾನ ಖಂಡಿತ ಮೂಡೋದು ಸಹಜ.
ಇಲ್ಲಿ ಮನೆಯೊಳಗೆ ಈಗ ನರಕದಲ್ಲಿ ಇರೋರನ್ನ ಮುಂದೆ ಸ್ವರ್ಗಕ್ಕೆ ಕಳಿಸಿ, ನಂತರ ಸ್ವರ್ಗದಲ್ಲಿ ಇರೋರನ್ನ ನರಕಕ್ಕೆ ಕಳಿಸಿದರೆ ಖಂಡಿತ ಆಗ ಒಂದು ರೀತಿಯಲ್ಲಿ ಆಟಕ್ಕೆ ನಿಜವಾದ ಅರ್ಥ ಸಿಗುತ್ತೆ. ಇಲ್ಲದೇ ಹೋದರೆ ನೇರವಾಗಿ ಸ್ವರ್ಗಕ್ಕೆ ಬಂದ ಒಂದಿಬ್ಬರು ಸದಸ್ಯರಿಗೆ ಇಂತಹ ಸವಲತ್ತು ಶೋನಲ್ಲಿ ಸಿಕ್ಕಿದ್ಯಾಕೆ ಅನ್ನೋದು ಉತ್ತರ ಇಲ್ಲದ ಪ್ರಶ್ನೆಯಾಗುತ್ತೆ.
ಸ್ವರ್ಗದಲ್ಲಿ ಇರೋರಿಗೆ ನರಕದ ಅನುಭವ ನೀಡದೇ ಹೋದರೆ ಇಲ್ಲಿ ತಾರತಮ್ಯ ನಡೆದಿದೆ ಅನ್ನೋದನ್ನ ಸ್ಪಷ್ಟವಾಗಿ ತಿಳಿಯಬಹುದು. ಗೇಮ್ ನಲ್ಲಿ ಒಂದು ಪಾರದರ್ಶಕತೆ ಮೂಡಬೇಕಾದರೆ ಖಂಡಿತ ಸ್ವರ್ಗವಾಸಿಗಳನ್ನ ಮುಂದಿನ ದಿನಗಳಲ್ಲಿ ನರಕದಲ್ಲಿ ಇರಿಸಿದರೆ ಖಂಡಿತ ಆಟದಲ್ಲಿ ಒಂದು ಆಸಕ್ತಿ ಇರುತ್ತದೆ.
Rajendra Prasad ಅವಳು ನನ್ನ ಮಗಳಲ್ಲ ಅಂದಿದ್ದ ನಟ ಇಂದು ಮಗಳಿಗಾಗಿ ಕಣ್ಣೀರು, ಎಲ್ಲಾ ವಿಧಿಯಾಟ