Bigg Boss Kannada 11: ನೀನು ಯಾವನೋ ಅಂತ ಜಗದೀಶ್ ಅವ್ರ ಮೇಲೆ ಫೈರ್ ಆದ ಕ್ಯಾಪ್ಟನ್ ಹಂಸ; ದೊಡ್ಮನೆಯಲ್ಲಿ ಮಾತಿನ ಕಾಳಗ

Written by Soma Shekar

Published on:

---Join Our Channel---

Bigg Boss Kannada 11 : ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11)ಎರಡನೇ ಭರ್ಜರಿ ವಾರ ಆರಂಭವಾಗಿದೆ. ವಾರದ ಆರಂಭದ ದಿನದ ಕೆಲವು ಪ್ರೊಮೊಗಳನ್ನ ವಾಹಿನಿ ಶೇರ್ ಮಾಡಿದ್ದು ಈಗಾಗಲೇ ಅವು ವೈರಲ್ ಆಗಿದೆ. ಪ್ರೊಮೊದಲ್ಲಿನ ವೀಡಿಯೊಗಳನ್ನ ನೋಡಿದಾಗ ಜಗದೀಶ್ ಅವರು ಮತ್ತು ಕ್ಯಾಪ್ಟನ್ ಆಗಿರೋ ಹಂಸ ಅವರ ನಡುವೆ ಬೆಂಕಿ ಹೊತ್ತಿಕೊಂಡಿರುವುದು ಸ್ಪಷ್ಟವಾಗಿದೆ.

ಈಗ ಮತ್ತೊಂದು ಪ್ರೊಮೋದಲ್ಲಿ ಹಂಸ ಜಗದೀಶ್ ಅವರ ಮೇಲೆ ಸಿಟ್ಟಾಗಿದ್ದಾರೆ. ಜಗದೀಶ್ (Jagadish) ಅವರು ಸುರೇಶ್ ಮಾತಾಡುವಾಗ ಸುರೇಶ್ ಅವರು ಜಗದೀಶ್ ಅವ್ರಿಗೆ ಸ್ಟಾರ್ಟ್ ಮಾಡ್ಕೊಳ್ಳಿ ನಿಮ್ಮ ಆಟ ಬಿಡಬೇಡಿ ಎಂದಿದ್ದಾರೆ. ಜಗದೀಶ್ ಅವರು ಕ್ಯಾಪ್ಟನ್ ಹಂಸ (Hamsa) ಅವರನ್ನ ಕರೆದು ತಲೆನೋವಿಗೆ ಮಾತ್ರೆಯನ್ನು ಕೇಳಿದ್ದಾರೆ.

ಆಗ ಹಂಸ ಅವರು ಮೆಡಿಸನ್ ಬೇಕಾದ್ರೆ ಬಿಗ್ ಬಾಸ್ ನ ಕೇಳಿ ಅಂದಿದ್ದಾರೆ. ಅದಕ್ಕೆ ಜಗದೀಶ್ ಅವರು ಹಾಗಾದ್ರೆ ಕ್ಯಾಪ್ಟನ್ ಯಾಕೆ ಆಗಿದ್ದೀರಾ, ಆಗಲ್ಲ ಅಂತ ಬರ್ಕೊಂಡು ಹೋಗಿ ಅಂದಿದ್ದಾರೆ. ಹಂಸ ಕೈತೋರಿಸಿದ್ದಕ್ಕೆ ಆತರ ಕೈ ತೋರಿಸಬೇಡ ನೀನು ಡಾನ್ ಅಲ್ಲ, ನಾನು ಕೂಡಾ ಡಾನ್ ಅಂದಿದ್ದಾರೆ ಜಗದೀಶ್.

ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗದೀಶ್ ಅವರು ಕೆಪಾಸಿಟಿ ಇಲ್ಲ ಅಂದ್ರೆ ರಿಸೈನ್ ಮಾಡಿ ಹೋಗು ಅಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಂಸ ನೀನು ಯಾವನೋ ನನಗೆ ಹೋಗು ಅಂತ ಹೇಳೋಕೆ ಎಂದು ಫೈರ್ ಆಗಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು ಮುಂದೇನಾಗುತ್ತೆ ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

Chanakya Niti ಈ ಸಂದರ್ಭಗಳಲ್ಲಿ ಮಾತಿಗಿಂತ ಮೌನಕ್ಕೆ ಹೆಚ್ಚು ಶಕ್ತಿ; ಚಾಣಾಕ್ಯ ಹೇಳಿದ ಮಾತುಗಳು ಅದ್ಭುತ

Leave a Comment