BBK 11 : ಹನುಮನ ಮುಂದೆ ಕಣ್ಣೀರು ಹಾಕಿದ ಗೌತಮಿಯನ್ನ ಕಾಡ್ತಿದೆ ಪಶ್ಚಾತ್ತಾಪ, ಆದ್ರೂ ಹನುಮನ ಮಾತು ಮೆಚ್ಚಲೇಬೇಕು

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯ ಆಟ ಮತ್ತೊಂದು ವಾರಾಂತ್ಯಕ್ಕೆ ಬಂದು ಸೇರುತ್ತಿದೆ. ಮನೆಯಲ್ಲಿ ಹದಿಮೂರು ಜನ ಸ್ಪರ್ಧಿಗಳು ಇದ್ದಾರೆ. ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿಗಾಗಿ ವೀಕ್ಷಕರು ಸಹಾ ಕಾಯ್ತಾ ಇದ್ದಾರೆ. ಈ ಬಾರಿ ಬಿಗ್ ಬಾಸ್ (BBK 11) ಆಟದ ಬಗ್ಗೆ ಪ್ರೇಕ್ಷಕರು ಸಹಾ ಬೇಸರವನ್ನು ಹೊರ ಹಾಕುತ್ತಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳ ಆಟದ ಬಗ್ಗೆಯೂ ಸೋಶಿಯಲ್ ಮೀಡಿಯಾಗಳಲ್ಲಿ ಅಸಮಾಧಾನವನ್ನು ಹೊರ ಹಾಕುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನು ಈ ವಾರ ಜೋಡಿ ಟಾಸ್ಕ್ ನ ನಡುವೆ ಬಿಗ್ ಬಾಸ್ ಟ್ರಂಪ್ ಕಾರ್ಡ್ ಪ್ಲೇಯರ್ ಅಂತ ತ್ರಿವಿಕ್ರಮ್ (Trivikram) ಜೊತೆ ಜೋಡಿ ಆಗೋಕೆ ಆಫರ್ ಕೊಟ್ಟ ಕೂಡಲೇ ಅದನ್ನ ತಮ್ಮದಾಗಿಸಿಕೊಳ್ಳೋಕೆ ಮನೆಯ ಮಹಿಳಾ ಸ್ಪರ್ಧಿಗಳು ಹಾತೊರೆದಿದ್ದರು. ಅದರಲ್ಲಿ ಪಾಸಿಟಿವಿಟಿ ಅಂತಾನೇ ಫೇಮಸ್ ಆಗಿರೋ ಗೌತಮಿ (Gautami) ಸಹಾ ಸೇರಿದ್ರು. ಹನುಮಂತನ ಜೋಡಿ ಮುರಿದು ತ್ರಿವಿಕ್ರಮ್ ಜೊತೆ ಜೋಡಿಯಾಗೋಕೆ ಗೌತಮಿ ಸಹಾ ಸಿದ್ಧ ಇದ್ರು.

ಆದರೆ ತ್ರಿವಿಕ್ರಮ್ ಭವ್ಯ ಅವರನ್ನ ಸೆಲೆಕ್ಟ್ ಮಾಡ್ಕೊಂಡ್ರು. ಆದರೆ ಅನಂತರ ಟಾಸ್ಕ್ ನಲ್ಲಿ ಗೌತಮಿ ಹನುಮಂತನ ಜೊತೆಗೆ ಆಡಿ ತ್ರಿವಿಕ್ರಮ್ ಭವ್ಯ ಜೋಡಿಯನ್ನು ಸೋಲಿಸಿದರು. ಈಗ ತ್ರಿವಿಕ್ರಮ್ ನ ಆಯ್ಕೆ ಮಾಡಿಕೊಳ್ಳೋದಕ್ಕೆ ತಾನು ಮುಂದಾಗಿದ್ದಕ್ಕೆ ಗೌತಮಿ ಹನುಮಂತ (Hanumantha) ಮತ್ತು ಮಂಜು ಮುಂದೆ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಗೌತಮಿ ಭಾವುಕರಾಗಿದ್ದು, ಕಣ್ಣೀರು ಹಾಕಿದ್ದಾರೆ. ಹನುಮಂತನ ಬಳಿ ಕ್ಷಮೆಯನ್ನು ಸಹಾ ಕೋರಿದ್ದಾರೆ. ಆಗ ಹನುಮಂತ ಗೌತಮಿಗೆ ಸಮಾಧಾನ ಮಾಡ್ತಾ ನೀನು ನನ್ನ ಅಕ್ಕ, ಅವರು ಹೇಳಿದ್ದನ್ನು ಸುಳ್ಳು ಮಾಡಿ ಗೆದ್ದಿದ್ದೀವಿ ಅಲ್ವಾ, ಅಳಬೇಡ ಅಕ್ಕ ಅಂತ ಸಮಾಧಾನವನ್ನು ಮಾಡಿದ್ದಾರೆ. ನಿನ್ನ ಅಕ್ಕಂದಿರ ಲಿಸ್ಟ್ ನಲ್ಲಿ ನನ್ನ ಸೇರಿಸಿಕೊಳ್ತೀಯಾ ಅಂತ ಗೌತಮಿ ಕೇಳಿದಾಗ ಹನುಮಂತ ನೀವು ನಮ್ಮ ಅಕ್ಕಾನೇ ಅಂದಿದ್ದಾನೆ. ಗೌತಮಿಗೆ ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಉಂಟಾಗಿರೋದು ಸ್ಪಷ್ಟವಾಗಿ ಕಂಡಿದೆ.

Allu Arjun : ಹೌದು ಅದು ನಾನೇ; ವೈನ್ ಶಾಪ್ ವೀಡಿಯೋ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಅಲ್ಲು ಅರ್ಜುನ್, ಫ್ಯಾನ್ಸ್ ಶಾಕ್

Leave a Comment