BBK 11 : ಬೆಂಕಿ ಬಿರುಗಾಳಿಯ ಸುಳಿವು, ಕಿಚ್ಚನ ನಿರೂಪಣೆ ಪಕ್ಕಾ, ಬಿಡುಗಡೆ ಆಯ್ತು ಬಿಗ್ ಬಾಸ್ 11ರ ಪ್ರೊಮೋ

Written by Soma Shekar

Published on:

---Join Our Channel---

BBK 11 : ಕನ್ನಡದ ಬಹುನಿರೀಕ್ಷಿತ ಹಾಗೂ ಕಿರುತೆರೆಯ ಬಹುದೊಡ್ಡ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ನ ಹೊಸ ಸೀಸನ್ ಅಂದರೆ ಸೀಸನ್ ಹನ್ನೊಂದರ (BBK 11) ಮೊದಲ ಪ್ರೊಮೊವನ್ನು ವಾಹಿನಿ ನಿನ್ನೆ ಬಿಡುಗಡೆ ಮಾಡಿದೆ. ಕಣ್ಣಿನ ಲೋಗೋ ಇರುವ ಮೊದಲ ಪ್ರೋಮೋದಲ್ಲಿ ಬೆಂಕಿ, ಬಿಳುಗಾಳಿ ಮಿಂಚು ಗುಡುಗಿನ ಸದ್ದು ಅಬ್ಬರಿಸಿರುವುದು ಕಂಡಿದೆ.

ಲೊಗೊ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಬೆಂಕಿ ಮತ್ತು ನೀರಿನ ಸಮ್ಮಿಲಿನದ ನಡುವೆ ಬಿಗ್ ಬಾಸ್ (Bigg Boss) ಕಣ್ಣು ಮಿಂಚಿದೆ. ಪ್ರೊಮೊ ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆಗಳು ಹರಿದು ಬರುತ್ತಿದೆ. ಕಾಮೆಂಟ್ ಗಳ ಮಳೆ ಸುರಿಯುತ್ತಿದ್ದು, ಬಿಗ್ ಬಾಸ್ ಕ್ರೇಜ್ ಹೇಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.‌

ಬೆಂಕಿ ನೀರಿನ ಸಮ್ಮಿಲನವಾದಾಗ ಗುಡುಗು ಮಿಂಚಿನ ಅಬ್ಬರ ನೋಡಿದಾಗ ಈ ಸಲ ಬಿಗ್ ಬಾಸ್ ದೊಡ್ಡ ಸದ್ದು ಮಾಡಲಿದೆ ಎನ್ನುವುದರ ಸುಳಿವನ್ನು ವಾಹಿನಿ ಈ ಪ್ರೊಮೊ ಮೂಲಕ ತಿಳಿಸಿದೆ ಎನ್ನುವುದಂತೂ ಸ್ಪಷ್ಟವಾಗಿದ್ದು, ಅಭಿಮಾ‌ನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಇನ್ನು ಈ ಬಾರಿ ಬಿಗ್ ಬಾಸ್ ಯಾರು ನಡೆಸಿಕೊಡ್ತಾರೆ, ಸುದೀಪ್ (Kichcha Sudeep) ಅವರು ಇರಲ್ವ ಅನ್ನೋ ಅನುಮಾನಗಳಿಗೆ ತೆರೆ‌ ಬಿದ್ದಾಗಿದೆ. ವಾಹಿನಿ ಶೇರ್ ಮಾಡಿದ ಪ್ರೊಮೊದ ಹ್ಯಾಷ್ ಟ್ಯಾಗ್ ನಲ್ಲಿ ಕಿಚ್ಚ ಸುದೀಪ್ ಎಂದೂ ಇದೆ. ಅಲ್ಲಿಗೆ ಸುದೀಪ್ ಅವರದ್ದೇ ನಿರೂಪಣೆ ಎನ್ನುವುದೀಗ ಪಕ್ಕಾ ಆಗಿದೆ.

Leave a Comment