Bigg Boss Kannada 11: ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋದು ಇವರೇ? ವೈರಲ್ ಆಯ್ತು ಸಂಭಾವ್ಯ ಸ್ಪರ್ಧಿಗಳ ಪಟ್ಟಿ

Written by Soma Shekar

Published on:

---Join Our Channel---

ಕಿರುತರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬಿಗ್ ಬಾಸ್ ಅಭಿಮಾನಿಗಳಂತೂ ಹೊಸ ಸೀಸನ್ ಗೆ ಕಾಯುತ್ತಿದ್ದಾರೆ. ಕಿಚ್ಚ ಸುದೀಪ್ (Sudeep) ನಿರೂಪಣೆಯ ಭರ್ಜರಿ ಪ್ರೊಮೋ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿದೆ.

ಇವೆಲ್ಲವುಗಳ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ಈ ಬಾರಿ ಕಾಲಿಡುವ ಸ್ಪರ್ಧಿಗಳು ಯಾರೆನ್ನುವ ಸಂಭಾವ್ಯ ಪಟ್ಟಿಯೊಂದು ವೈರಲ್ ಆಗಿ ಗಮನ ಸೆಳೆಯುತ್ತಿದೆ. ಗಿಚ್ಚಿ ಗಿಲಿ ಗಿಲಿ ವಿನ್ನರ್ ಹುಲಿ ಕಾರ್ತಿಕ್ ಮತ್ತು ರನ್ನರ್ ಅಪ್ ಮಾನಸ ಸಂತೋಷ್ ಹೆಸರು ದೊಡ್ಮನೆಗೆ ಎಂಟ್ರಿ ಕೊಡೋ ಸ್ಪರ್ಧಿಗಳ ಹೆಸರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ.

ಇವರಲ್ಲದೇ ಬೃಂದಾವನ’ ಸೀರಿಯಲ್ ನಟಿ ಅಮೂಲ್ಯ ಭಾರದ್ವಾಜ್ (Amulya Bharadwaj), ಒಲವಿನ ನಿಲ್ದಾಣ’ ಸೀರಿಯಲ್‌ ನಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಕ್ಷಯ್ ಕುಮಾರ್, ಗೀತಾ ಸೀರಿಯಲ್ ನಲ್ಲಿ ನಟಿಸಿದ್ದ ಭವ್ಯ ಗೌಡ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವುದಾಗಿ ಸುದ್ದಿಗಳು ಹರಿದಾಡುತ್ತಿವೆ.

ಇವರಷ್ಟೇ ಅಲ್ಲದೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಹಾಡಿ ಜನಪ್ರಿಯತೆ ಪಡೆದಿರುವ ಗಾಯಕಿ ಐಶ್ವರ್ಯಾ ರಂಗರಾಜನ್, ಗೌರವ್ ಶೆಟ್ಟಿ, ದೀಪಕ್ ಗೌಡ, ವರುಣ್ ಆರಾಧ್ಯ ಸೇರಿದಂತೆ ಬಹಳಷ್ಟು ಸೆಲೆಬ್ರಿಟಿಗಳ ಹೆಸರುಗಳು ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಕೇಳಿ ಬಂದಿದ್ದು, ಇದು ಅಧಿಕೃತವೋ ಅಲ್ಲವೋ ಅನ್ನೋದಕ್ಕೆ ಶೋ ಆರಂಭಕ್ಕೆ ಕಾಯಬೇಕಾಗಿದೆ.

Lakshmi Nivasa: ಮನೆಯಲ್ಲಿ ರಾದ್ದಾಂತವೇ ನಡೆದು ಹೋದ್ರು ಲಕ್ಷ್ಮಿಯ ಸುಳಿವು ಸಹಾ ಇಲ್ಲ; ಪ್ರೇಕ್ಷಕರ ಅಸಮಾಧಾನ

Leave a Comment