Bigg Boss Kannada: ಸೀಸನ್ 11 ಬರ್ತಿದೆ, ಸೀಸನ್ 10 ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸ್ಪರ್ಧಿಗಳೆಲ್ಲಾ ಏನ್ಮಾಡ್ತಾ ಇದ್ದಾರೆ

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ ಹತ್ತು (Bigg Boss Kannada) ಹಿಂದಿನ ಎಲ್ಲಾ ಸೀಸನ್ ಗಳಿಗಿಂತಲೂ ಸಿಕ್ಕಾಪಟ್ಟೆ ಸದ್ದು ಮತ್ತು ಸುದ್ದಿಯನ್ನು ಮಾಡಿದ ಸೀಸನ್ ಆಗಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕನ್ನಡ ಬಿಗ್ ಬಾಸ್ ನಲ್ಲಿ ಹಿಂದಿನ ಯಾವುದೇ ಸೀಸನ್ ಸಹಾ ಅಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳಿಗೆ ಕಾರಣವಾಗಿತ್ತು. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಸಾಕಷ್ಟು ಕೆಲಸಗಳಲ್ಲಿ ಬ್ಯುಸಿಯಾಗುತ್ತಾರೆ.

ಸಿನಿಮಾ, ಸೀರಿಯಲ್, ಜಾಹೀರಾತು, ಹೊಸ ಶೋ ಗಳ ನಿರೂಪಣೆ ಹೀಗೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಈ ಹತ್ತನೇ ಸೀಸನ್ ನಲ್ಲಿ ಮನೆಯೊಳಗೆ ಬಹಳಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿದ್ದ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಒಂದೆರಡು ದಿನ ಪ್ರಮುಖ ಸುದ್ದಿಗಳಲ್ಲಿ ಮಿಂಚಿ ಅನಂತರ ಎಲ್ಲೂ ಅಷ್ಟಾಗಿ ಕಾಣುತ್ತಿಲ್ಲ ಎನ್ನುವುದು ವಾಸ್ತವ.

ಬಿಗ್ ಬಾಸ್ ನಂತರ ನಟಿ ನಮ್ರತಾ ಗೌಡ (Namratha Gowda) ಅವರು ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಇನ್ಸ್ಟಾಗ್ರಾಂ ರೀಲ್ಸ್ ವೀಡಿಯೋಗಳಲ್ಲಿ ವೈರಲ್ ಆಗಿದ್ದಾರೆ. ನಟಿಯ ಯಾವುದೇ ಹೊಸ ಪ್ರಾಜೆಕ್ಟ್ ಗಳ ಅಪ್ಡೇಟ್ ಬಂದಿಲ್ಲ. ಬಿಗ್ ಬಾಸ್ ನಲ್ಲಿ ಅಬ್ಬರಿಸಿದ ಸಂಗೀತಾ ಶೃಂಗೇರಿ (Sangeeta Sringeri) ಅವರ ಯಾವುದೇ ಹೊಸ ಸಿನಿಮಾದ ಅಪ್ಡೇಟ್ ಇನ್ನೂ ಹೊರ ಬಂದಿಲ್ಲ.

ಕಾರ್ತಿಕ್ ಮಹೇಶ್ ಮತ್ತು ವಿನಯ್ ಗೌಡ ಅವರು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆನ್ನುವ ಸುದ್ದಿಗಳಾಗಿದೆ. ಇನ್ನು ರಕ್ಷಕ್ ಬುಲೆಟ್ ಅವರ ಹೊಸ ಸಿನಿಮಾದ ಅಪ್ಡೇಟ್ ಒಂದು ಹೊರ ಬಂದು ಕೆಲವು ದಿನಗಳಾಗಿದೆ. ಮೈಕಲ್ ತಮ್ಮ ಬ್ಯುಸಿನೆಸ್ ಅಂತ ಸಕ್ರಿಯರಾಗಿದ್ದಾರೆ. ‌ಇಶಾನಿ ಬಗ್ಗೆ ಹೊಸ ಅಪ್ಡೇಟ್ ಗಳು ಖಂಡಿತ ಇಲ್ಲ. ಡ್ರೋನ್ ಪ್ರತಾಪ್ ಜನರಿಗೆ ಸಹಾಯ ಮಾಡುತ್ತಾ ಸುದ್ದಿಯಾಗಿದ್ದಾರೆ.

ಇನ್ನುಳಿದಂತೆ ಬಹಳಷ್ಟು ಜನ ಸ್ಪರ್ಧಿಗಳು ಸಹಾ ಇನ್ನೂ ಯಾವುದೇ ಟಿವಿ ಶೋ, ಸಿನಿಮಾ ಅಥವಾ ತಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಇನ್ನೂ ಅಪ್ಡೇಟ್ ಕೊಡದೇ ಇರೋದು ಸಹಾ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ಬಿಗ್ ಬಾಸ್ ನಂತರ ಎಲ್ಲರೂ ಏನು ಮಾಡ್ತಿದ್ದಾರೆ ಎನ್ನುವ ನಿರೀಕ್ಷೆಯ ನಡುವೆಯೇ ಈಗ ಹೊಸ ಸೀಸನ್ ಆರಂಭಕ್ಕೆ ಸಮಯ ಬಂದಾಗಿದೆ.

Leave a Comment