Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada) ವೀಕೆಂಡ್ ಗೆ ಕಿಚ್ಚ ಕಮ್ ಬ್ಯಾಕ್ ಮಾಡಿದ್ದಾರೆ. ಇದು ಬಿಗ್ ಬಾಸ್ ಪ್ರೇಕ್ಷಕರಿಗೆ ಖುಷಿಯನ್ನು ನೀಡಿದೆ. ಬಿಗ್ ಬಾಸ್ ವೇದಿಕೆಗೆ ಆಗಮಿಸಿದ ಕಿಚ್ಚ (Kichcha Sudeep) ಆರಂಭದಲ್ಲೇ ಕ್ಲಾಸ್ ತಗೊಂಡಿದ್ದಾರೆ. ಮೋಕ್ಷಿತಾ ಅವರಿಗೆ ಒಂದಷ್ಟು ವಿಚಾರಗಳನ್ನು ಅರ್ಥವಾಗುವಂತೆ ವಿವರಿಸಿ ಹೇಳಿದ್ದಾರೆ. ಬಿಗ್ ಬಾಸ್ ಒಂದು ಡ್ರೈವ್ ಕಳಿಸ್ತಾರೆ ಹೋಗುವಾಗ ಇದ್ದ ಮೋಕ್ಷಿತಾನೇ ಬೇರೆ ಬಂದಾಗ ಇದ್ದ ಮೋಕ್ಷಿತಾನೇ ಬೇರೆ ಏನಿದರ ಕಾರಣ ಅಂತ ಕಿಚ್ಚ ಪ್ರಶ್ನೆ ಕೇಳಿದ್ದಾರೆ.
ಮೋಕ್ಷಿತಾ (Mokshitha Pai) ಕೂಡಾ ಉತ್ತರ ನೀಡುತ್ತಾ ಒಂದು ವಾರದಿಂದ ಮನಸ್ಸಿಲ್ಲದ್ದ ಮಾತು ಹೊರಗಡೆ ಬಂತು. ಎಲ್ಲಿ ಹೇಳದೇ ಹೋಗಿಬಿಡ್ತೀನೋ ಅಂತ ಅನಿಸಿತ್ತು. ಅದಕ್ಕೆ ಮತ್ತೆ ಮನೆಗೆ ಬಂದ ಕೂಡಲೇ ಮಾತಾಡಿದೆ.. ಒಂದು ವಾರ ಮಂಜಣ್ಣ ಅದರ ಬಗ್ಗೆ ಕೇಳುವುದು ಬೇಡ ಅಂತ ಹೇಳಿದ್ದರಿಂದ ಮಾತಾಡ್ಲಿಲ್ಲ ಎಂದು ಹೇಳಿದರು. ಇದಕ್ಕೆ ಕಿಚ್ಚ ಸುದೀಪ್ ಅವರು ಮೋಕ್ಷಿತಾಗೆ ಒಂದಷ್ಟು ವಿಚಾರ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರು, ಮಂಜಣ್ಣ ಅವರು ನಿಮ್ಮ ಮೌತ್ ಪೀಸ್ ಅಲ್ಲ. ಯುದ್ಧ ನಿಮ್ಮದು. ಮಂಜು, ಸ್ನೇಹಿತರಿಗೆ ನೀವು ಅಡ್ವೈಸ್ ಮಾಡುವಾಗ ಕೇಳಬೇಡ ಅಂತ ಯಾವುತ್ತು ಹೇಳಬೇಡಿ. ಕೇಳಿ ನಾನು ಇದ್ದಿನಿ ಅಂತ ಹೇಳಿ ಎನ್ನುವ ಬುದ್ಧಿ ಮಾತನ್ನು ಮೋಕ್ಷಿತಾ ಅವರಿಗೆ ಹೇಳಿದ್ದಾರೆ. ಪರೋಕ್ಷವಾಗಿ ಕಿಚ್ಚ ಮೋಕ್ಷಿತಾಗೆ ನೇರವಾಗಿ ಮಾತನಾಡಿ ವಿಷಯ ಬಗೆ ಹರಿಸಿಕೊಳ್ಳಿ ಎನ್ನುವ ಸಲಹೆ ಯನ್ನು ನೀಡಿದ್ದಾರೆ.
ತ್ರಿವಿಕ್ರಮ್ ಗೇಮ್ ಪ್ಲಾನ್ ಬಗ್ಗೆ ಅಸಮಾಧಾನಗೊಂಡ ಮೋಕ್ಷಿತಾ ಸಿಡಿದೆದ್ದಿದ್ದರು. ಈಗ ಸುದೀಪ್ ಅವರು ಹೇಳಿರುವ ವಿಚಾರಗಳನ್ನು ಅರ್ಥ ಮಾಡಿಕೊಂಡು ಮೋಕ್ಷಿತಾ ತಮ್ಮ ಆಟದ ದಿಕ್ಕನ್ನು ಬದಲಿಸಿಕೊಳ್ತಾರಾ ಅಥವಾ ಮತ್ತೆ ಗುಂಪಿನಲ್ಲೇ ಕಳೆದು ಹೋಗ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ. ನಿನ್ನೆ ಎಪಿಸೋಡ್ ನಲ್ಲಿ ಮೋಕ್ಷಿತಾ ನಾಮಿನೇಷನ್ ನಿಂದಲೂ ಸೇಫ್ ಆಗಿದ್ದಾರೆ.