Bigg Boss : ನಿನ್ನೆಯಿಂದ ಲಾಯರ್ ಜಗದೀಶ್ (Lawyer Jagadish) ಅವರು ಬಿಗ್ ಬಾಸ್ (Bigg Boss) ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಅವರ ಜೊತೆಗೆ ಮತ್ತೊಬ್ಬ ಸ್ಪರ್ಧಿ ರಂಜಿತ್ ಕೂಡಾ ಹೊರಗೆ ಬಂದಿದ್ದಾರೆ ಎನ್ನುವ ವಿಷಯಗಳು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿವೆ. ಇವೆಲ್ಲವುಗಳ ನಡುವೆಯೇ ಜಗದೀಶ್ ಅವರ ಪತ್ನಿ ಮಾದ್ಯಮವೊಂದರ ಕುರಿತಾಗಿ ಈ ವಿಚಾರವನ್ನು ಮಾತನಾಡಿದ್ದಾರೆ ಎನ್ನಲಾಗಿದೆ.
ಜೀ ಕನ್ನಡ ನ್ಯೂಸ್ ಜೊತೆಗೆ ಸೌಮ್ಯ ಜಗದೀಶ್ (Sowmya Jagadish) ಅವರು ಮಾತನಾಡಿದ್ದಾರೆನ್ನಲಾಗಿದ್ದು, ಜಗದೀಶ್ ಹೊರಗೆ ಬಂದಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಜಗದೀಶ್ ಮನೆಗೆ ಬಂದಿಲ್ಲ. ಅವರು ಹೊರ ಬಂದಿದ್ದಾರೋ ಇನ್ನೂ ಅಲ್ಲೆಯೇ ಇದ್ದಾರೆಯೋ ಎನ್ನುವ ಬಗ್ಗೆಯೂ ತಿಳಿದಿಲ್ಲ. ಅಲ್ಲದೇ ಬಿಗ್ ಬಾಸ್ ಟೀಮ್ ಕಡೆಯಿಂದಲೂ ಇದುವರೆಗೆ ಯಾವುದೇ ಕರೆ ಬಂದಿಲ್ಲ.
ಅವರು ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿಯನ್ನು ನಾನು ಕೂಡಾ ಮಾದ್ಯಮಗಳ ಸುದ್ದಿ ಮತ್ತು ಸೋಷಿಯಲ್ ಮೀಡಿಯಾ ಮೂಲಕವೇ ತಿಳಿದುಕೊಂಡಿದ್ದು ಎಂಬುದಾಗಿ ಸೌಮ್ಯ ಜಗದೀಶ್ ಅವರು ಹೇಳಿದ್ದಾರೆ. ಅಲ್ಲದೇ ಅವರು ಮನೆ ಮಂದಿ ತಮ್ಮ ಪತಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಹಾ ಹೇಳಿದ್ದಾರೆ.
ಒಟ್ನಲ್ಲಿ ಜಗದೀಶ್ ಅವರು ಹೊರಗೆ ಬಂದಿದ್ದಾರೆ ಅನ್ನೋದಾದ್ರೆ ಅವರು ಇನ್ನೂ ಮನೆಗೆ ತಲುಪಿಲ್ಲ ಎಂದು ಅವರ ಪತ್ನಿಯ ಮಾತಿಂದ ತಿಳಿಯುತ್ತಿದೆ. ಮತ್ತೆ ಅವರನ್ನು ಬಿಗ್ ಬಾಸ್ ಮನೆಯೊಳಗೆ ಹೋಗ್ತಾರಾ? ಅಥವಾ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರ ಪಂಚಾಯ್ತಿ ವರೆಗೆ ಅವರು ಅಲ್ಲೇ ಇರ್ತಾರಾ? ಎನ್ನುವ ಪ್ರಶ್ನೆ ಮೂಡಿದೆ.
Bigg Boss ಗಂಡನಿಗೆ ಮರ್ಯಾದೆ ಕೊಡಲ್ಲ, ಬೇರೆ ಗಂಡಸರಿಗೆ ಕೊಡ್ತಾರಾ? ಮಾನಸ ಮೇಲೆ ನೆಟ್ಟಿಗರಿಗೆ ಯಾಕೆ ಕೋಪ