Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಹನ್ನೊಂದರಲ್ಲಿ ಇಡೀ ಮನೆಯ ಕಥೆ ಒಂದಾದರೆ ಹನುಮಂತ (Hanumantha) ಮತ್ತು ಧನರಾಜ್ (Dhanraj) ಅವರ ಕಥೆ ಮತ್ತೊಂದಾಗಿದೆ. ಮನೆಯಲ್ಲಿ ಈಗಾಗಲೇ ಸ್ನೇಹಿತರಾಗಿರುವವರ ನಡುವೆ ಅವರ ಸ್ನೇಹದಲ್ಲಿ ಆಗಾಗ ಏರಿಳಿತಗಳು ಕಂಡು ಬರ್ತಾನೆ ಇದೆ. ಆದರೆ ಧನರಾಜ್ ಮತ್ತು ಹನುಮಂತನ ಸ್ನೇಹ ಮಾತ್ರ ಮೊದಲ ದಿನದಿಂದ ಹೇಗಿದ್ಯೋ ಹಾಗೆ ಇದೆ ಮತ್ತೆ ಈಗ ಇನ್ನಷ್ಟು ಈ ಸ್ನೇಹ ಗಾಢವಾಗ್ತಾ ಇದೆ. ಇವರ ನಡುವೆ ವೈಮನಸ್ಸು, ಹಿಂದೆ ಮಾತನಾಡಿಕೊಳ್ಳೋದು ಇಂತದ್ದೆಲ್ಲಾ ಖಂಡಿತ ಇಲ್ಲ ಅಂತಾನೇ ಹೇಳಬಹುದು.
ಹನುಮಂತ ಧನರಾಜ್ ಅವರನ್ನ ನಾಮಿನೇಟ್ ಮಾಡಿದಾಗಲೂ ಅವರು ಅದರ ಬಗ್ಗೆ ಮಾತಿಗೆ ಮಾತು ಬೆಳೆಸಲಿಲ್ಲ ಅನ್ನೋದು ಈಗಾಗಲೇ ಎಲ್ಲರೂ ನೋಡಿದ್ದಾರೆ. ಇಬ್ಬರೂ ಜೊತೆಯಾಗಿದ್ದುಕೊಂಡು ಒಂದಷ್ಟು ಹಾಸ್ಯ ಮಾಡ್ಕೊಂಡು ಎಂಟರ್ಟೈನ್ಮೆಂಟ್ ಸಹಾ ಇವರು ನೀಡ್ತಾ ಇದ್ದಾರೆ. ಈಗ ಬಿಗ್ ಬಾಸ್ (BBK 11) ಇತಿಹಾಸದಲ್ಲಿ ಇಬ್ಬರೂ ಸೇರಿ ಒಂದು ಇತಿಹಾಸವನ್ನು ಬರೆಯೋಕೆ ಮುಂದಾಗಿದ್ದಾರೆ.
ಹೌದು, ಹನುಮಂತ ಮತ್ತು ಧನರಾಜ್ ಇಬ್ಬರೂ ಒಂದೇ ಸಲ ಜೊತೆಯಾಗಿ ಸ್ನಾನ ಮಾಡ್ತೀವಿ ಅಂತ ಬಾತ್ರೂಮ್ ಗೆ ಹೋಗಿದ್ದಾರೆ. ಕ್ಯಾಪ್ಟನ್ ಭವ್ಯಗೆ (Bhavya Gowda) ಹನುಮಂತು ಜೊತೇಲಿ ಸ್ನಾನ ಮಾಡಬಾರದು ಅಂತ ರೂಲ್ ಏನಿಲ್ಲ, ನೋಡು ಸ್ನಾನ ಮಾಡ್ತೀವಿ ಅಂದಿದ್ದಾರೆ. ಆಗ ರಜತ್ ನಾನು ಬರ್ತೀನಿ ಅಂದ್ರೆ ಬಾ ಅಂದ್ರು ಅಂತ ಹೇಳಿದ್ದಾರೆ. ಭವ್ಯ ಈ ವಿಷಯ ಕೇಳಿ ಶಾಕ್ ಆದ್ರು. ನಂತರ ಧನ್ಯೋಸ್ಮಿ ಅನ್ಕೊಂಡು ಅಲ್ಲಿಂದ ಹೋಗಿದ್ದಾರೆ.
ಧನು ಮತ್ತು ಹನುಮಂತ ಸ್ನಾನ ಮಾಡುವಾಗ ಬಂದ ಸುರೇಶ್ (Gold Suresh) ಅವರು ಹಾಸ್ಯ ಮಾಡಿದ್ದಾರೆ. ಶೋಭಾ ಗೌಡ ಅವರು ಅಲ್ಲಿಗೆ ಬಂದಿದ್ದು ಸುರೇಶ್ ಇಬ್ಬರೂ ಒಬ್ಬರ ಬೆನ್ನು ಇನ್ನೊಬ್ಬರು ಉಜ್ಜುತಾ ಇದ್ದಾರೆ ಎಂದಿದ್ದು, ಶೋಭಾ ಕೂಡಾ ಜೋರಾಗಿ ನಗಾಡಿದ್ದಾರೆ. ಹನುಮಂತ ಮತ್ತು ಧನರಾಜ್ ಅವರ ಈ ಹಾಸ್ಯ ಸನ್ನಿವೇಶವನ್ನು ಪ್ರೊಮೊದಲ್ಲಿ ನೋಡಿದ ನೆಟ್ಟಿಗರು ಅವರ ಸ್ನೇಹಕ್ಕೆ ಮೆಚ್ಚುಗೆಗಳನ್ನು ನೀಡಿದ್ದಾರೆ.
Amruthadhaare : ಅತ್ತಿಗೆಗೆ ಕೈ ತುತ್ತು ಕೊಟ್ಟ ಸುಧಾ; ಗೌತಮ್ ನಿರ್ಧಾರಕ್ಕೆ ಶಕುಂತಲಾ ಅಸಮಾಧಾನ