BBK 11 : ಡಬಲ್ ಎಲಿಮಿನೇಷನ್ ಶಾಕ್; ಜೊತೆಯಾಗಿ ಹೋದವ್ರು ಜೊತೆಯಲ್ಲೇ ಹೊರ ಬಂದ್ರಾ? ಇಲ್ಲಿದೆ ಸುದ್ದಿ

Written by Soma Shekar

Published on:

---Join Our Channel---

Bigg Boss Kannada : ನಿನ್ನೆ ಬಿಗ್ ಬಾಸ್ ನಲ್ಲಿ (Bigg Boss Kannada) ಚೈತ್ರಾ ಗೆ ಖಡಕ್ ಕ್ಲಾಸ್ ನ ನಂತರ ಕಿಚ್ಚ ಸುದೀಪ್ (Kichcha Sudeep) ಅವರು ಚೈತ್ರಾಗೆ ಸಮಾಧಾನದ ಮಾತುಗಳನ್ನು ಸಹಾ ಹೇಳಿದ್ದರು. ಅದರ ಬೆನ್ನಲ್ಲೇ ಮನೆ ಮಂದಿಗೆ ಒಂದು ದೊಡ್ಡ ಶಾಕ್ ಅನ್ನು ಸಹಾ ನೀಡಿದ್ದರು. ಅದೇನೆಂದರೆ ಈ ವಾರ ಡಬಲ್ ಎಲಿಮಿನೇಷನ್ ಇದೆ ಎನ್ನುವುದು. ಈ ವಾರವೆಲ್ಲಾ ಜೋಡಿ ಟಾಸ್ಕ್ ಗಳು ಇತ್ತು, ಅದೇ ಕಾರಣದಿಂದ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎನ್ನಲಾಗಿದೆ. ಅದೇ ವೇಳೆ ವೈಲ್ಡ್ ಕಾರ್ಡ್ ಎಂಟ್ರಿ ಸಹಾ ಈ ವಾರ ಆಗಲಿದೆ ಎನ್ನುವ ವಿಚಾರ ಕೂಡಾ ಈಗ ಸಖತ್ ಸುದ್ದಿಯಾಗಿದೆ.

ಬಿಗ್ ಬಾಸ್ (BBK 11) ಮನೆಯಿಂದ ಈಗಾಗಲೇ ಯಮುನಾ, ರಂಜಿತ್, ಜಗದೀಶ್ ಮತ್ತು ಮಾನಸ ಹೊರ ಬಂದಾಗಿದೆ. ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ ಮೊದಲ ಸ್ಪರ್ಧಿಯಾಗಿದ್ದಾರೆ. ಇನ್ನು ಈ ವಾರ ಹತ್ತು ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಅದರಲ್ಲಿ ನಿನ್ನೆ ಸುದೀಪ್ ಅವರು ಸುರೇಶ್, ಮೋಕ್ಷಿತಾ, ಧನರಾಜ್ ಅವರನ್ನು ಸೇಫ್ ಎಂದು ಘೋಷಣೆ ಮಾಡಿದ್ದಾರೆ.

ಇನ್ನುಳಿದವರಲ್ಲಿ ಮನೆಗೆ ಹೋಗೋರು ಯಾರು ಎನ್ನುವಾಗ್ಲೇ ಬಿಗ್ ಬಾಸ್ ಮನೆಯಿಂದ ಈ ವಾರ ಧರ್ಮ (Dharma Keerthiraj) ಮತ್ತು ಅನುಷಾ (Anusha Rai) ಇಬ್ಬರೂ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿಯೊಂದು ಈಗ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿಯಾಗಿ ವೈರಲ್ ಆಗ್ತಿದೆ. ಈ ಸುದ್ದಿಯನ್ನು ನೋಡಿದ ಬಹಳಷ್ಟು ಜನ ಅನುಷಾ ಹೊರಗೆ ಬಂದಿದ್ದಾರೆ ಎಂದರೆ ಅಚ್ಚರಿಯಾಗುತ್ತಿದೆ ಎಂದಿದ್ದಾರೆ.

ಈ ವಾರ ಡಬಲ್ ಎಲಿಮಿನೇಷನ್ ಆದಲ್ಲಿ ಖಂಡಿರ ವೈಲ್ಡ್ ಕಾರ್ಡ್ ಎಂಟ್ರಿ ಆಗುತ್ತೆ ಅಂತಾನೇ ಹೇಳಬಹುದು. ಹಾಗಾದ್ರೆ ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬರಲಿರುವ ಆ ಸ್ಪರ್ಧಿ ಯಾರು ಎನ್ನುವುದರ ಕಡೆಗೆ ಈಗ ಎಲ್ಲರ ಗಮನ ಹೊರಳಿದೆ. ಒಳ್ಳೆ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಗೆ ಬಂದು ಮನೆಗೆ ಸ್ವಲ್ಪ ಚೈತನ್ಯ ನೀಡಲಿ ಅಂತಿದ್ದಾರೆ ನೆಟ್ಟಿಗರು.

BBK 11 : ಚೈತ್ರಾ ಚೈತ್ರಾ ಅನ್ಕೊಂಡು ಮಂಜುನಾ ಮರೆತೇ ಬಿಟ್ರಾ? ನೆಟ್ಟಿಗರು ಈ ರೀತಿ ಪ್ರಶ್ನೆ ಕೇಳ್ತಿರೋದು ಯಾಕೆ

Leave a Comment