Bigg Boss Kannada: ನಿನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಚೈತ್ರ ಕುಂದಾಪುರ (Chaithra Kundapura) ಅವರು ಕುಸಿದು ಬಿದ್ದಿದ್ದರು. ಅನಂತರ ಮನೆ ಮಂದಿಯ ನೆರವಿನೊಂದಿಗೆ ಅವರನ್ನು ಕನ್ಫೆಷನ್ ರೂಮಿಗೆ ತರಲಾಗಿತ್ತು. ಅಲ್ಲಿಂದ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಪಡೆದು ಬಿಗ್ ಬಾಸ್ ಮನೆಗೆ ವಾಪಸಾದ ಮೇಲೆ ಚೈತ್ರ ಕುಂದಾಪುರ ಅವರು ಮಾಡಿರುವ ಕೆಲಸಕ್ಕೆ ಬಿಗ್ ಬಾಸ್ ವಾರ್ನಿಂಗ್ ಕೊಟ್ಟಿದ್ದಾರೆ. ಇಷ್ಟಕ್ಕೂ ಚೈತ್ರ ಅಂತದ್ದೇನು ಮಾಡಿದರು ಅನ್ನೋದಾದ್ರೆ ಇಲ್ಲಿದೆ ಅದಕ್ಕೆ ಉತ್ತರ.
ವಾಹಿನಿ ಶೇರ್ ಮಾಡಿರೋ ಹೊಸ ಪ್ರೊಮೊದಲ್ಲಿ ಜೈಲಿನ ಹೊರಗೆ ಕುಳಿತಿರುವ ಸಮಯದಲ್ಲಿ ಮಂಜು (Ugram Manju) ಜೊತೆ ಮಾತನಾಡ್ತಾ ಚೈತ್ರ ಮೂರು ದಿನದಿಂದ ವೆದರ್ ಕಂಪ್ಲೀಟ್ ಚೇಂಜ್ ಇದೆ ಅಂತ ಹೇಳುವಾಗ್ಲೇ ಮಂಜು ರೆಕ್ಕೆ ಜಾಸ್ತಿ ಅಗಲ ಇದ್ಯಾ? ಮುಚ್ಚಿಕೊಂಡು ಬಿಟ್ಟಿದ್ಯಾ? ಎಂದು ಪರೋಕ್ಷವಾಗಿ ಹೊರಗಿನ ವಿಚಾರಗಳ ಕುರಿತಾಗಿ ಕೇಳುವ ಪ್ರಯತ್ನವನ್ನು ಮಾಡಲು ಮುಂದಾಗಿದ್ದಾರೆ.
ಇದಕ್ಕೆ ಚೈತ್ರ ಮುರಿದು ಹೋಗಿದೆ ಅಂತ ಹೇಳಿದ್ದಾರೆ. ನಂತರ ಅವರು ಮೈಕ್ ಅನ್ನು ಪಕ್ಕಕ್ಕೆ ಸರಿಸಿ ಅಲ್ಲಲ್ಲಿ ಗುಸು ಗುಸು ಅಂತ ಮಾತನಾಡಿದ್ದಾರೆ. ಕೆಲವರು ಮಂಜು ಅವರಿಗೆ ಹೊರಗಿನ ವಿಚಾರ ಕೇಳುವಂತಿಲ್ಲ ಅಂದ್ರೂ ಮಂಜು ಅವರ ಮಾತನ್ನ ಕಿವಿಗೆ ಹಾಕಿಕೊಂಡಿಲ್ಲ. ಈ ವೇಳೆ ಬಿಗ್ ಬಾಸ್ (BBK 11) ದ್ವನಿ ಮೊಳಗಿದೆ, ಚೈತ್ರ ಪಿಸು ಮಾತಿನಲ್ಲಿ ಮಾತನಾಡುವಂತಿಲ್ಲ ಎಂದು ವಾರ್ನ್ ಮಾಡಿದ್ದಾರೆ ಬಿಗ್ ಬಾಸ್.
ಈ ಪ್ರೊಮೊ ನೋಡಿದ ಮೇಲೆ ನೆಟ್ಟಿಗರು ಚೈತ್ರ ಹೊರಗಿನ ವಿಚಾರಗಳನ್ನು ನೋಡಿ, ತಿಳಿದು ಬಂದಿದ್ದಾರೆ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ವಿಚಾರವಾಗಿ ಇಂದಿನ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಮಾತನಾಡ್ತಾರಾ? ಮಂಜು ಮತ್ತು ಚೈತ್ರಾಗೆ ಕ್ಲಾಸ್ ತಗೊಳ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.
Lawyer Jagadish ಹಿಂದಿ ಬಿಗ್ ಬಾಸ್ ಗೆ ಲಾಯರ್ ಜಗದೀಶ್ ; ವಿಷಯ ಕೇಳಿ ಥ್ರಿಲ್ ಆದ ಫ್ಯಾನ್ಸ್