Bigg Boss : ಬೆಚ್ಚನೆಯ ಬಿಸಿ ಅಪ್ಪುಗೆಯಲ್ಲಿ ಶಿಶಿರ್, ಐಶ್ವರ್ಯ; ಸಿಹಿ ಮುತ್ತಿಗೆ ನಾಚಿ ನೀರಾದ ಐಶ್ವರ್ಯ

Written by Soma Shekar

Published on:

---Join Our Channel---

Bigg Boss : ಬಿಗ್‌ ಬಾಸ್‌ (Bigg Boss) ಮನೆಯಿದ ಜಗದೀಶ್‌ ಹಾಗೂ ರಂಜಿತ್‌ ಹೊರಗೆ ಬಂದಾಗಿದೆ. ಮತ್ತೊಂದು ಕಡೆ ಮನೆಯೊಳಗೆ ಹೊಸ ಪ್ರೇಮ ಕಥೆಯೊಂದು ಆರಂಭವಾಗುವ ಸೂಚನೆ ಸಿಕ್ಕಿದೆ. ಇಷ್ಟು ದಿನ ಬಿಗ್ ಮನೆಯಲ್ಲಿ ಧನು, ಕೀರ್ತಿ ಮತ್ತು ಐಶ್ವರ್ಯಾ ಅವರು ಕ್ಲೋಸ್‌ ಆಗಿರುತ್ತಾ ಇದ್ದರು.

ಈಗ ಐಶ್ವರ್ಯ (Aishwarya) ಅವರು ಮನೆಯ ಕ್ಯಾಪ್ಟನ್ ಶಿಶಿರ್ (Shishir) ಜೊತೆಗೆ ಆತ್ಮೀಯರಾದಂತೆ ಕಾಣ್ತಿದೆ. ಶಿಶಿರ್‌ ಅವರ ಬೆಚ್ಚನೆಯ ಅಪ್ಪುಗೆಯಲ್ಲಿ ಐಶು ಬಂಧಿಯಾಗಿದ್ದಾರೆ ಇಬ್ಬರೂ ಒಂದು ರೋಮ್ಯಾಂಟಿಕ್ ದೃಶ್ಯವನ್ನು ಸೃಷ್ಟಿಸಿದ್ದಾರೆ. ಈ ವೇಳೆ ಐಶ್ವರ್ಯ ನಾಚಿ ನೀರಾಗಿದ್ದಾರೆ.

ಈ ಇಬ್ಬರ ಜೋಡಿಯ ತಮಾಷೆಯನ್ನು ಮನೆ ಮಂದಿ ಸಹಾ ಎಂಜಾಯ್ ಮಾಡಿದ್ದಾರೆ.‌ ಶಿಶಿರ್ ಬೆಚ್ಚನೆಯ ಹೊದಿಕೆ ಹೊದ್ದು ಐಶ್ವರ್ಯನ ಅದರಲ್ಲಿ ಸೇರಿಸಿಕೊಂಡಿದ್ದಾರೆ. ಐಶ್ವರ್ಯ ಶಿಶಿರ್ ಗೆ ಕಾಫಿಯನ್ನ ಕುಡಿಸಿದ್ದಾರೆ. ಉಗ್ರಂ ಮಂಜು ಅವರಿಗೆ ಇನ್ನೊಂದಷ್ಟು ಸಲಹೆ ನೀಡಿದ್ದಾರೆ.

ಒಟ್ನಲ್ಲಿ ಆ ಇಡೀ ದೃಶ್ಯ ಸಿನಿಮೀಯವಾಗಿತ್ತು. ಇನ್ನು ಈ ವೀಕೆಂಡ್ ಬಂದಾಗಿದೆ. ಇವತ್ತಿನ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಯಾವುದೆಲ್ಲಾ ವಿಚಾರಗಳನ್ನು ಮಾತನಾಡಲಿದ್ದಾರೆ ಎನ್ನುವ ನಿರೀಕ್ಷೆಗಳು ದುಪ್ಪಟ್ಟಾಗಿದೆ.

Leave a Comment