Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada) ನಂತರ ತಾನು ಈ ಕಾರ್ಯಕ್ರಮ ನಿರೂಪಣೆ ಮಾಡೋದಿಲ್ಲ ಎಂದು ನಟ ಕಿಚ್ಚ ಸುದೀಪ್ ಅಧಿಕೃತವಾಗಿ ಘೋಷಣೆ ಮಾಡಿಯಾಗಿದೆ. ಅದರ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ಒಂದು ಮಹತ್ವದ ಬದಲಾವಣೆ ಆಗಿರೋದು ನಿನ್ನೆಯ ಎಪಿಸೋಡ್ ನಲ್ಲಿ ಪ್ರೇಕ್ಷಕರ ಗಮನಕ್ಕೆ ಬಂದಿದೆ. ಅಲ್ಲದೇ ಇದು ಅನೇಕರಿಗೆ ಖುಷಿಯನ್ನು ನೀಡಿದೆ.
ಹೌದು, ಈ ಬಾರಿ ಬಿಗ್ ಬಾಸ್ ಆರಂಭ ಆದಾಗಿನಿಂದಲೂ ಮನೆಯಲ್ಲಿ ಹೆಚ್ಚಾಗಿ ಇಂಗ್ಲೀಷ್ ಪದಗಳ ಬಳಕೆ ಮಾಡ್ತಾ ಇದ್ರು. ಅದರಲ್ಲೂ ಕೆಲವು ಸ್ಪರ್ಧಿಗಳಂತೂ ಬಾಯಿ ಬಿಟ್ರೆ ಇಂಗ್ಲಿಷ್ ಎನ್ನುವ ಹಾಗೆ ಸದಾ ಇಂಗ್ಲಿಷ್ ನಲ್ಲೇ ಮಾತುಕತೆ ನಡೆಸಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಇದಕ್ಕೆ ಸಾಕಷ್ಟು ಆಕ್ರೋಶ ಹೊರ ಬಿದ್ದಿತ್ತು.
ನೆಟ್ಟಿಗರು ಮನೆ ಮಂದಿಗೆ ಕನ್ನಡ ಬರಲ್ವಾ, ಇವರಿಗೆ ಕನ್ನಡ ಮಾತಾಡೋಕೆ ಏನು ಕಷ್ಟ ಎಂದೆಲ್ಲಾ ಟೀಕೆ ಮಾಡುತ್ತಿದ್ದರು. ಕೊನೆಗೂ ಬಿಗ್ ಬಾಸ್ ಈ ವಿಚಾರಕ್ಕೆ ಮೂರನೇ ವಾರದಲ್ಲಿ ಎಚ್ಚೆತ್ತುಕೊಂಡು, ಮನೆಯ ಕ್ಯಾಪ್ಟನ್ ಶಿಶಿರ್ (Shishir) ಅವರಿಗೆ ಬಿಗ್ ಬಾಸ್ ಕನ್ನಡದ ವಿಚಾರವಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಶೋ, ಕರ್ನಾಟಕದಲ್ಲಿ ಪ್ರಸಾರ ಆಗೋ ಕಾರ್ಯಕ್ರಮ ಆದ್ದರಿಂದ ಮನೆಯಲ್ಲಿ ಇರೋರು ಕನ್ನಡದಲ್ಲಿ ಮಾತನಾಡಬೇಕು. ಮಾತಿನ ಮಧ್ಯೆ ಮಧ್ಯೆ ಒಂದೊಂದು ಪದ ಇಂಗ್ಲಿಷ್ ಬಂದರೆ ತೊಂದರೆ ಅಲ್ಲ. ಆದರೆ ಅದೇ ಮಾತಿನ ಭಾಷೆ ಆಗಬಾರದು ಎಂದು ಸೂಚನೆ ನೀಡಿದ್ದಾರೆ.
ಶಿಶಿರ್ ಈ ವಿಚಾರವನ್ನು ಮನೆ ಮಂದಿಗೆ ತಿಳಿಸಿದ್ದಾರೆ. ಈ ಸೂಚನೆ ನಂತರ ಇನ್ಮೇಲಾದ್ರು ಬಿಗ್ ಬಾಸ್ ಮನೆ ಮಂದಿ ಕನ್ನಡ ಭಾಷೆಗೆ ಒತ್ತು ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಏಕೆಂದರೆ ಅನೇಕರಿಗೆ ಬಾಯಿ ಬಿಟ್ಟರೆ ಬರೋದೇ ಇಂಗ್ಲಿಷ್ ಆಗಿರೋದ್ರಿಂದ ಕನ್ನಡ ಮಾತಾಡೋದು ಅವರಿಗೆ ಕಷ್ಟ ಆಗಬಹುದು.
Puttakkana Makkalu ಸ್ನೇಹಾ ಪಾತ್ರಕ್ಕೆ ನಟಿ ಸಂಜನಾ ಗುಡ್ ಬೈ ಹೇಳ್ತಾ ಇರೋದ್ಯಾಕೆ? ಸಂಜನಾ ಸೀರಿಯಲ್ ನಿಂದ ಔಟ್