Bigg Boss Kannada : ಬಿಗ್ ಬಾಸ್ ಮನೆಗೆ (Bigg Boss Kannada) ಒಂದು ಡಬಲ್ ವೈಲ್ಡ್ ಕಾರ್ಡ್ ಎಂಟ್ರಿ ಬಹಳ ಜೋರಾಗಿಯೇ ಆಗಿದೆ. ಇವತ್ತು ಕಲರ್ಸ್ ಕನ್ನಡ ವಾಹಿನಿ ಸಹಾ ಸಾಮಾನ್ಯಕ್ಕಿಂತ ಹೆಚ್ಚು ಪ್ರೊಮೊಗಳನ್ನು ಶೇರ್ ಮಾಡಿ ಭಾರೀ ಕುತೂಹಲವನ್ನು ಕೆರಳಿಸಿದೆ. ವೈಲ್ಡ್ ಕಾರ್ಡ್ ಎಂಟ್ರಿ ಆದ್ಮೇಲೆ ಮನೆಯಲ್ಲಿ ಕೆಲವು ಸ್ಪರ್ಧಿಗಳು ಮಂಕಾದಂತೆ ಕಂಡಿದೆ. ಇನ್ನೂ ಕೆಲವರು ಬಂದವರನ್ನು ಹೇಗೆ ಹೊರಗೆ ಕಳಿಸೋದು ಅಂತ ಪ್ಲಾನ್ ಮಾಡೋದಕ್ಕೆ ಒಗ್ಗಟ್ಟಾಗಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿರುವ ಕೆಲವರ ನೆಮ್ಮದಿಗೆ ಕೊಳ್ಳಿ ಇಟ್ಟಂತೆ ಕಾಣುತ್ತಿದೆ.
ಬಿಗ್ ಬಾಸ್ ನಲ್ಲಿ (BBK 11) ಈಗ ವೈಲ್ಡ್ ಕಾರ್ಡ್ ಎಂಟ್ರಿಯಿಂದ ಧನರಾಜ್ ಮತ್ತು ಹನುಮಂತ ಯಾವುದೇ ರೀತಿಯಲ್ಲೂ ವಿಚಲಿತರಾಗದೇ ಆರಾಮಾಗಿ ಕೂತ್ಕೊಂಡು ಚಿಂತೆ ಮಾಡ್ತಾ ಇರೋರನ್ನ ನೋಡಿ ತಮ್ಮತಮ್ಮಲ್ಲೇ ಮಾತಾಡಿಕೊಂಡು ನಕ್ಕಿದ್ದಾರೆ. ಹೌದು ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೊದಲ್ಲಿ ಮನೆಯ ಹೊರಗೆ ತ್ರಿವಿಕ್ರಿಮ್, ಐಶ್ವರ್ಯ, ಭವ್ಯ, ಶಿಶಿರ್ ಮತ್ತು ಮೋಕ್ಷಿತಾ ಕುಳಿತಿದ್ದಾರೆ.
ಈ ವೇಳೆ ಐಶ್ವರ್ಯ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಮಾತಾಡ್ತಾ ರಜತ್ ಬಂದಿದ್ದು ಖುಷಿಯಾಯ್ತು ಅಂತ ಹೇಳ್ತಾ ಮೌನಕ್ಕೆ ಜಾರಿದ್ದಾರೆ. ಇದನ್ನ ನೋಡಿದ ಧನರಾಜ್, ಐಶ್ವರ್ಯಕ್ಕ ತಲೆ ಆಫ್ ಆಯ್ತು. ಯೋಚನೆ ಮಾಡಕ್ ಹತ್ತಾರ, ಹೆಂಗ್ ತೆಗಿಲಿ ಶೋಭಾ ಶೆಟ್ಟಿನ, ಹೆಂಗ್ ತೆಗಿಲಿ ರಜತ್ ಅವರನ್ನು ಅಂತ. ಯಾರ್ದು ಏನ್ ಆಟ ನಡಿಯಲ್ಲ ಅನ್ಸುತ್ತಾ ಯೋಚನೆ ಮಾಡಕ್ ಹತ್ತಾರ.
ಎಲ್ಲರೂ ಯೋಚನೆ ಮಾಡಕ್ ಹತ್ತಾರ. ಕ್ಯಾಪ್ಟನ್ ಫುಲ್ ಹೋಗ್ಯಾರ ಅಂತ ಹೇಳಿ ಕ್ಯಾಪ್ಟನ್ ಕ್ವೀನ್ ಅಂತ ಕರೆದಿದ್ದಾರೆ. ನಂತರ ಹನುಮಂತ ಮತ್ತು ಧನರಾಜ್ ಇಬ್ಬರೂ ನಕ್ಕಿದ್ದಾರೆ. ಒಟ್ಟಾರೆ ಇವತ್ತಿನ ಎಪಿಸೋಡ್ ನೋಡೋಕು ಪ್ರೇಕ್ಷಕರು ಕಾಯುವಂತೆ ಮಾಡಿವೆ ಹೊಸ ಪ್ರೊಮೊಗಳು. ಈ ಸೀಸನ್ ಆರಂಭ ಆದಾಗಿನಿಂದ ಇವತ್ತೇ ಮೊದಲ ಸಲ ವಾಹಿನಿ ಹೆಚ್ಚು ಪ್ರೊಮೊ ಗಳನ್ನ ಶೇರ್ ಮಾಡಿದೆ.
Pushpa 2 : ಅಲ್ಲು ಅರ್ಜುನ್ ಪಾತ್ರಕ್ಕೆ ದಿ ಎಂಡ್; ಪುಷ್ಪ 2 ಸಿನಿಮಾದಲ್ಲಿನ ಹೊಸ ಟ್ವಿಸ್ಟ್, ಶುರುವಾಯ್ತು ಹೊಸ ಚರ್ಚೆ