Bigg Boss Kannada: ಬಿಗ್ ಬಾಸ್ (Bigg Boss Kannada) ಮತ್ತೊಂದು ವೀಕೆಂಡ್ ಪಂಚಾಯ್ತಿಗೆ ಸಜ್ಜಾಗಿದೆ. ಈ ವಾರ ಬಿಗ್ ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ ಗಳಲ್ಲಿ ಸಾಕಷ್ಟು ಮಾತುಗಳು ವಿನಿಮಯವಾಗಿದೆ. ಒಂದು ಟಾಸ್ಕ್ ಕೂಡಾ ರದ್ದಾಗಿದೆ. ಈಗ ವಾಹಿನಿ ವೀಕೆಂಡ್ ಎಪಿಸೋಡ್ ನ ಹೊಸ ಪ್ರೊಮೊ ಶೇರ್ ಮಾಡಿದೆ. ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ವಿಷಯದ ಬಗ್ಗೆ ದೊಡ್ಡ ಚರ್ಚೆ ನಡೆಯಲಿದೆ ಎನ್ನುವುದರ ಸುಳಿವನ್ನು ಸಹಾ ನೀಡಿದೆ ಈ ಹೊಸ ಪ್ರೊಮೊ.
ಹೊಸ ಪ್ರೊಮೊದಲ್ಲಿ ವೇದಿಕೆಗೆ ಬಂದ ಕಿಚ್ಚು ಸುದೀಪ್ (Kichcha Sudeep) ಅವರು, ಉಸ್ತವಾರಿಗಳು ಜವಾಬ್ದಾರಿಗಳನ್ನ ಮರೆತ್ರು, ಆಟದ ದಾರಿಯನ್ನು ತಪ್ಪಿಸ್ತಾ ಇದ್ದಾರೆ. ಮಾತಿನ ಮಿತಿಗಳು ಮೀರ್ತಾ ಹೋಗ್ತಿವೆ ಅಂತ ಹೇಳಿದ್ದಾರೆ. ಈ ವಾರ ಉಸ್ತುವಾರಿಯಲ್ಲಿ ಚೈತ್ರ ಕುಂದಾಪುರ ಅವರ ವರ್ತನೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆ ನಡೆದಿದೆ.
ಬಹುಶಃ ಅದನ್ನೇ ಸುದೀಪ್ ಅವರು ಈ ರೀತಿ ಹೇಳಿರಬಹುದು. ಅಲ್ಲದೇ ಪ್ರೊಮೊದಲ್ಲಿ ಚೈತ್ರ (Chaithra Kundapura) ಅವರ ಉಸ್ತವಾರಿ, ರಜತ್ (Rajath) ಅಡಿದ ಮಾತುಗಳ ದೃಶ್ಯಗಳನ್ನು ಹೈಲೈಟ್ ಆಗಿ ತೋರಿಸಲಾಗಿದೆ. ಅಂದ ಮೇಲೆ ಈ ವಾರದ ಪಂಚಾಯ್ತಿಯಲ್ಲಿ ಚೈತ್ರ ಮತ್ತು ರಜತ್ ಗೆ ಸರಿಯಾಗಿ ಕ್ಲಾಸ್ ತಗೊಳ್ತಾರಾ ಕಿಚ್ಚ.. ಕಾದು ನೋಡಬೇಕಾಗಿದೆ.
ರಜತ್ ಅವರು ಆಡಿದ ಮಾತುಗಳ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೊಮೊ ನೋಡಿದ ಮೇಲೆ ಈ ವೀಕೆಂಡ್ ಎಪಿಸೋಡ್ ನಲ್ಲಿ ಹೆಚ್ಚು ಚೈತ್ರ ಕುಂದಾಪುರ ಮತ್ತು ರಜತ್ ವಿಚಾರವೇ ಮುಖ್ಯ ಚರ್ಚೆಯ ವಿಷಯವಾಗಬಹುದು ಎನಿಸುತ್ತಿದೆ.