BBK 11 : ಚೈತ್ರಾ ಚೈತ್ರಾ ಅನ್ಕೊಂಡು ಮಂಜುನಾ ಮರೆತೇ ಬಿಟ್ರಾ? ನೆಟ್ಟಿಗರು ಈ ರೀತಿ ಪ್ರಶ್ನೆ ಕೇಳ್ತಿರೋದು ಯಾಕೆ

Written by Soma Shekar

Published on:

---Join Our Channel---

Bigg Boss Kannada : ನಿನ್ನೆ ಬಿಗ್ ಬಾಸ್ ಕನ್ನಡದ (Bigg Boss Kannada) ವೀಕೆಂಡ್ ಎಪಿಸೋಡ್ ನಲ್ಲಿ ಸಕತ್ ಸದ್ದು ಮಾಡಿದ ವಿಚಾರ ಚೈತ್ರಾ ಕುಂದಾಪುರ (Chaithra Kundapura) ಅವರದ್ದು. ಆಸ್ಪತ್ರೆಗೆ ಹೋಗಿ ಬಂದ ಚೈತ್ರ ಅವರು ಹೊರಗಿನ. ವಿಷಯಗಳನ್ನು ಮನೆಯಲ್ಲಿ ಮಾತನಾಡಿದ್ದು ನಿಯಮ ಉಲ್ಲಂಘನೆ ಎನ್ನುವ ಕಾರಣಕ್ಕೆ ಕಿಚ್ಚ ಸುದೀಪ್ (Kichcha Sudeep) ಅವರು ಚೈತ್ರಾ ಅವರಿಗೆ ಕ್ಲಾಸ್ ತಗೊಂಡ್ರು. ಚೈತ್ರಾ ಅವರ ಎಡಬಿಡದ ಮಾತುಗಳು, ಮಾತಿನ ಮಧ್ಯೆ ಮಾತು ಇದೆಲ್ಲಾ ನೋಡಿ ಒಂದು ಹಂತದಲ್ಲಿ ಕಿಚ್ಚ ಸಿಟ್ಟಾದರು, ರೇಗಾಡಿದರು ಮತ್ತು ಅನಂತರ ಕ್ಷಮೆ ಕೂಡಾ ಕೇಳಿದರು. ಅಲ್ಲದೇ ಚೈತ್ರಾಗೆ ವರ್ತೂರು ಸಂತೋಷ್ ಅವರ ಉದಾಹರಣೆ ಕೂಡಾ ಕೊಟ್ಟರು.

ಆದರೆ ಇವೆಲ್ಲವುಗಳ ನಡುವೆ ಒಂದು ವಿಷಯವನ್ನ ಸುದೀಪ್ ಅವರು ಮರೆತೇ ಬಿಟ್ಟರು ಎನ್ನುವುದು ಈಗ ನೆಟ್ಟಿಗರ ಅಭಿಪ್ರಾಯ ಆಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಇದರ ಬಗ್ವೆ ಚರ್ಚೆಯನ್ನು ನಡೆಸುತ್ತಿದ್ದಾರೆ. ಏನದು ವಿಷಯ ಅನ್ನೋದಾದ್ರೆ ಅದು ಉಗ್ರಂ ಮಂಜು ಅವರ ವಿಚಾರವೇ ಆಗಿದೆ. ಹೌದು, ಹೊರಗಿಂದ ಬಂದ ಮೇಲೆ ಚೈತ್ರಾ ಅವರ ಜೊತೆಗೆ ಮಂಜು (Ugram Manju) ನಡೆಸಿದ ಮಾತುಕತೆ.

ಬಿಗ್ ಬಾಸ್ (BBK 11) ಮನೆಯಲ್ಲಿ ಚೈತ್ರಾ ಪಕ್ಕದಲ್ಲಿ ಕುಳಿತಿದ್ದ ಮಂಜು ಹೊರಗಿನ ವಿಚಾರಗಳನ್ನ ತಿಳಿಯೋದಕ್ಕೆ ಬೇರೆಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚು ಆಸಕ್ತಿಯನ್ನ ತೋರಿಸಿದರು. ಪದೇ ಪದೇ ಅದೇ ವಿಚಾರವನ್ನು ಮಾತನಾಡಿದ್ದರು. ಚೈತ್ರಾ ಜೊತೆಗೆ ಮಾತನ್ನು ಸೇರಿಸಿದರು. ತಾವು ಚೈತ್ರ ಹೇಳುವ ಕಥೆಗೆ ಸಾಥ್ ನೀಡಿದರು. ಒಂದು ರೀತಿಯಲ್ಲಿ ಚೈತ್ರಾಗೆ ಪ್ರೋತ್ಸಾಹ ನೀಡುವಂತೆ ಇತ್ತು ಅವರ ನಡವಳಿಕೆ..

ಮಂಜು ಚೈತ್ರಾ ಜೊತೆಗೆ ಸೇರಿ ಇಷ್ಟೆಲ್ಲಾ ಮಾತನಾಡಿದ್ರು ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಚೈತ್ರಾ ಅವರಿಗೆ ಕ್ಲಾಸ್ ತಗೊಂಡ್ರು, ಆದ್ರೆ ಮಂಜು ಅವರನ್ನ ಮಾತ್ರ ಒಂದೇ ಮಾತು ಕೇಳಲಿಲ್ಲ, ಮಂಜು ಏನು ಮಾತನಾಡಿದ್ರು ಕಿಚ್ಚ ಯಾಕೆ ಮೌನ ವಹಿಸ್ತಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಉಗ್ರಂ ಮಂಜುಗೆ ಇದುವರೆಗೂ ಸುದೀಪ್ ಅವರು ಯಾಕೆ ಏನೂ ಹೇಳಿಲ್ಲ ಅಂತ ಕೂಡಾ ಕೆಲವರು ಪ್ರಶ್ನೆ ಮಾಡ್ತಿದ್ದಾರೆ.

Leave a Comment