BBK 11 : ಬಿಗ್ ಬಾಸ್ ಮನೆಯ ಜಡ್ಜ್ ಗಳು ಅಂತ ಸಿಟ್ಟಾದ ಕಿಚ್ಚ, ಮನೆಯಿಂದ ಹೊರಗೆ ಹೋಗ್ತೀನಿ ಎಂದ ತ್ರಿವಿಕ್ರಮ್

Written by Soma Shekar

Published on:

---Join Our Channel---

Bigg Boss Kannada ::ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಶೋಭಾ ಶೆಟ್ಟಿ ಅವರ ಎಲಿಮಿನೇಷನ್ ವಿಚಾರವಾಗಿ ತ್ರಿವಿಕ್ರಮ್ ಮತ್ತು ಗೌತಮಿ ಅವರು ಮಾತನಾಡಿಕೊಂಡಿದ್ದರು. ಈ ವಿಚಾರವಾಗಿ ಈಗ ವೀಕೆಂಡ್ ಪಂಚಾಯತಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಮಾತನಾಡಿರುವುದು ಕಂಡಿದೆ. ಅಲ್ಲದೇ ಬಿಗ್ ಬಾಸ್ (BBK 11) ನಿರ್ಧಾರಗಳ ಬಗ್ಗೆ ಅವರಿಗೆ ಗೌರವ ಅನ್ನೋದಿಲ್ಲ ಎನ್ನುವ ಮಾತನ್ನು ಸಹಾ ಸುದೀಪ್ ಅವರು ಹೇಳಿದ್ದಾರೆ.

ಪ್ರೊಮೊದಲ್ಲಿ ಕಿಚ್ಚ ತ್ರಿವಿಕ್ರಮ್ (Trivikram) ಮತ್ತು ಗೌತಮಿಯನ್ನ (Gouthami) ಬಿಗ್ ಬಾಸ್ ಮನೆಯ ಜಡ್ಜ್ ಗಳು ಎಂದು ಕರೆದಿದ್ದಾರೆ. ‌ಶೋಭಾ ಅವರು ಮಾಡಿದ್ದು, ಶೋಭಾ ಅವರು ಯಾಕೆ ಹೋದ್ರು ಅನ್ನೋ ವಿಚಾರ ಕೇಳಿದಾಗ ತ್ರಿವಿಕ್ರಮ್‌ ನಾನು ಕನ್‌ ಫ್ಯೂಷನ್‌ ನಲ್ಲಿದ್ದೆ ಎಂದು ಹೇಳಿದ್ದು,ಇದಕ್ಕೆ ಸುದೀಪ್‌ ಯಾಕೆ ಕನ್‌ ಫ್ಯೂಷನ್‌ ನಿಮ್ಮ ಎದುರಲ್ಲೇ ತಾನೇ ಆದದ್ದು ಅಂತ ಹೇಳಿದ್ದಾರೆ.‌

ನೀವು ಕೋಪ ಮಾಡಿಕೊಳ್ಳಲ್ಲ ಅಂದ್ರೆ ಎರಡು ನಿಮಿಷ ಮಾತನಾಡ್ತೀನಿ ಅಣ್ಣಾ ಎಂದಿದ್ದಾರೆ ತ್ರಿವಿಕ್ರಮ್. ‌ಅಲ್ಲದೇ ನಿಮ್ಮ ಮುಂದೆ ತಲೆತಗ್ಗಿಸೋದ್ರಲ್ಲಿ ನನ್ನಗೇನು ಇಲ್ಲ ಅಣ್ಣಾ. ನಾನು ಬಿಗ್‌ ಬಾಸ್‌ ಗೆ ಅಗೌರವ ಕೊಟ್ಟಿದ್ದೇನೆ ಅನ್ನೋದಾದ್ರೆ ಈಗಲೂ ನಾನು ಆಚೆ ಹೋಗಲು ರೆಡಿ ಎಂದಿದ್ದಾರೆ ತ್ರಿವಿಕ್ರಮ್.

ಸುದೀಪ್ ಅವ್ರು ನಾನು ಏನು ಮಾಡಬೇಕು ಅದನ್ನು ನನಗೆ ಬಿಡಿ, ನಿಮ್ಮನ್ನ ಕೇಳಿ ಮಾಡ್ಕೋಬೇಕಾ, ನನ್ನ ಮುಂದೆ ಯಾರಾದ್ರೂ ತಲೆ ತಗ್ಗಿಸಬೇಕು ಅನ್ನೋದು ನನ್ ಮಗಂದ್ ನನ್ನ ಜೀವನದಲ್ಲಿ ಇಲ್ಲ ಸರ್ ಎಂದ ಕಿಚ್ಚ, ಆ ತರಾ ಆಗಿದ್ರೆ ಅಂಥ ಹೇಳಬೇಡಿ. ಆ ತರಾ ಆಗಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Leave a Comment