BBK 11 : ಮೋಕ್ಷಿತಾ ಮತ್ತು ತ್ರಿವಿಕ್ರಮ್ ಗೆ ಕಿಚ್ಚನ ಕ್ಲಾಸ್ ಪಕ್ಕಾ; ಬಿಗ್ ಬಾಸ್ ನಿರ್ಧಾರಗಳ ಬಗ್ಗೆ ಗೌರವ ಇಲ್ಲ ಎಂದ ಕಿಚ್ಚ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಹನ್ನೊಂದರ ಮತ್ತೊಂದು ವೀಕೆಂಡ್ ಬಂದಿದೆ. ವಾಹಿನಿ ಹೊಸ ಪ್ರೊಮೊವನ್ನು ಬಿಡುಗಡೆ ಮಾಡಿದೆ. ಪ್ರೊಮೊದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಹೇಳಿದ ಮಾತನ್ನ ಕೇಳಿದ ಮೇಲೆ ವೀಕ್ಷಕರಿಗೆ ಈಗಾಗಲೇ ಈ ವೀಕೆಂಡ್ ಎಪಿಸೋಡ್ ಬಗ್ಗೆ ಒಂದು ಸುಳಿವು ಖಂಡಿತ ಸಿಕ್ಕಿದೆ ಮತ್ತು ಯಾರ ವಿಚಾರವನ್ನು ಸುದೀಪ್ ಮಾತನಾಡಲಿದ್ದಾರೆ ಅನ್ನೋದ್ರ ಬಗ್ಗೆ ಕೂಡಾ ಅರ್ಥ ಆಗಿದೆ.

ಪ್ರೊಮೊದಲ್ಲಿ ಕಿಚ್ಚ ಸುದೀಪ್ ಅವರು, ಅರ್ಥ ಆಯ್ತಾ, ಅರ್ಥ ಆಯ್ತಾ ಅಂತ ಊರಿಗೆಲ್ಲಾ ಕೇಳ್ತಾರೆ..‌ ಇವರಿಗೆ ಬಿಗ್ ಬಾಸ್ (BBK 11) ಅನ್ನೋ ರಿಯಲ್ ಗೇಮ್ ಅರ್ಥಾನೇ ಆಗಿಲ್ಲ ಅನ್ನೋ ಮಾತನ್ನ ಹೇಳಿದ್ದಾರೆ. ಅರ್ಥ ಆಯ್ತಾ ಅನ್ನೋ ಡೈಲಾಗ್ ಮೋಕ್ಷಿತಾ (Mokshitha) ಅವರದ್ದಾಗಿದೆ. ಹಾಗಾದ್ರೆ ಮೋಕ್ಷಿತಾ ಅವರಿಗೆ ಕಿಚ್ಚ ಕ್ಲಾಸ್ ಪಕ್ಕಾ ಅನಿಸ್ತಿದೆ.‌

ಇದೇ ವೇಳೆ ಮತ್ತೊಂದು ಡೈಲಾಗ್ ನಲ್ಲಿ ಅವರು, ಈ ಗೇಮ್ ನ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದೀನಿ ಅನ್ನೋ ಭ್ರಮೇಲಿ ಇರೋ ಇನ್ನೊಬ್ಬರಿಗೆ ಬಿಗ್ ಬಾಸ್ ನಿರ್ಧಾರಗಳ ಮೇಲೆ ಗೌರವ ಇಲ್ಲ ಅಂತ ಹೇಳಿದ್ದಾರೆ. ಕಳೆದ ವಾರದ ಶೋಭಾ ಶೆಟ್ಟಿ ಎಲಿಮಿನೇಷನ್ ಕುರಿತು ಗೌತಮಿ ಹತ್ರ ಡಿಸ್ಕಸ್ ಮಾಡಿದ್ರು ತ್ರಿವಿಕ್ರಮ್ (Trivikram). ಅದಕ್ಕೆ ಕಿಚ್ಚ ಕ್ಲಾಸ್ ಮಾಡೋದು ಪಕ್ಕಾ ಅನಿಸ್ತಿದೆ.

ಹೊಸ ಪ್ರೊಮೋ ಈಗ ಎಲ್ಲರ ಗಮನ ಸೆಳೆದಿದೆ. ಅಲ್ಲದೇ ಬಹಳಷ್ಟು ಜನ ಕಾಮೆಂಟ್ ಗಳನ್ನು ಮಾಡಿ ಇದು ಯಾರ ಬಗ್ಗೆ ಹೇಳಿರೋದು ಅನ್ನೋದನ್ನ ಸಹಾ ಊಹೆ ಮಾಡ್ತಾ ಇದ್ದಾರೆ. ಇದೇ ವೇಳೆ ಕೆಲವರು ಮೋಕ್ಷಿತಾ ನಿರ್ಧಾರ ಸರಿ ಇದೆ ಎಂದು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Comment