Bigg Boss Kannada : ಬಿಗ್ ಬಾಸ್ ಕನ್ನಡ 11 ರಲ್ಲಿ (Bigg Boss Kannada) ಪಾಸಿಟಿವ್ ಅಂತ ಹೇಳಿದಾಗ ಕೂಡಲೇ ಎಲ್ಲರಿಗೂ ನೆನಪಾಗೋದು ನಟಿ ಗೌತಮಿ ಜಾಧವ್ (Gauthami Jadhav). ಬಿಗ್ ಬಾಸ್ (BBK 11) ಮನೆಯಲ್ಲಿ ನಾನು ಪಾಸಿಟಿವಿಟಿ ಯನ್ನೇ ನೋಡ್ತೀನಿ ಅಂತಾನೇ ಸುದ್ದಿಯಾದವರು ಗೌತಮಿ. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿ ತಾನು ಗೌತಮಿ ಅವರ ಪಾಸಿಟಿವ್ ಮುಖವಾಡವನ್ನು ಕಳಚೋದಾಗಿ ಹೇಳಿದ್ರು. ಅದೇ ವಿಚಾರವಾಗಿ ನಿನ್ನೆ ಬಿಗ್ ಬಾಸ್ ಮನೆ ಮಂದಿಗೆ ನೀಡಿದ್ದ ಚಟುವಟಿಕೆಯೊಂದರಲ್ಲಿ ಗೌತಮಿ ಮತ್ತು ಶೋಭಾ ಅವರ ನಡುವೆ ಒಂದಷ್ಟು ಮಾತುಗಳ ವಿನಿಮಯ ಕೂಡಾ ಆಗಿದೆ.
ಬಿಗ್ ಬಾಸ್ ಹೊಸ ಟಾಸ್ಕ್ ಗಳಿಗಾಗಿ ಭವ್ಯ ಅವರನ್ನು ಒಂದು ಟೀಮ್ ಗೆ ನಾಯಕಿಯನ್ನಾಗಿ ಮಾಡಿ ಇನ್ನೊಂದು ಟೀಮ್ ಗೆ ನಾಯಕರಾಗಲು ರಜತ್ ಮತ್ತು ಶೋಭಾ ಅವರಲ್ಲಿ ಯಾರು ಅರ್ಹ, ಯಾರು ಅನರ್ಹ ಎಂದು ನಿರ್ಧರಿಸಿ ಆಯ್ಕೆ ಮಾಡಿ ಎನ್ನುವ ಅವಕಾಶವನ್ನು ಮನೆ ಮಂದಿಗೆ ನೀಡಿದ್ದರು. ಈ ವೇಳೆ ಗೌತಮಿ ಶೋಭಾ (Shobha Shetty) ಅವರು ತಂಡದ ನಾಯಕಿ ಆಗಲು ಅನರ್ಹ ಅಂತ ಹೇಳಿ ತಮ್ಮ ಕಾರಣವನ್ನು ನೀಡಿದ್ರು.
ಗೌತಮಿ ಅವರು ಶೋಭಾ ಅನರ್ಹ ಯಾಕೆ ಅಂದ್ರೆ ಅವರ ಮೊದಲ ಮಾತೇ ಮುಖವಾಡ ಕಳಚೋದು, ಅವರ ಟೀಮ್ ಗೆ ಬಂದ್ರೆ ನನ್ನ ಪಾಸಿಟಿವ್ ನೋಡಲ್ಲ, ನೆಗೆಟಿವ್ ನ ಮಾತ್ರ ನೋಡ್ತಾರೆ. ಅದು ಒಬ್ಬ ನಾಯಕನ ಗುಣ ಅಲ್ಲ ಎಂದಾಗ ಶೋಭಾ ಅವರು ನಿಮಗೆ ಹಾಗಾದ್ರೆ ಭಯ ಇದ್ಯಾ ನಿಮ್ಮ ಮುಖವಾಡ ಕಳಚ್ತೀನಿ ಅಂದಿದ್ದು ಗೌತಮಿ ಅದಕ್ಕೆ ನೂರಲ್ಲ ಇನ್ನೂರು ದಿನ ಇದ್ದರೂ ಅದು ಸಾಧ್ಯ ಇಲ್ಲ ಎಂದಿದ್ದಾರೆ.
ಶೋಭಾ ಆಗ, ಹಾಗಾದ್ರೆ ಬರಬಹುದಲ್ವಾ, ನೀವು ಪಾಸಿಟಿವ್ ಆಗಿದ್ರೆ, ನಿಮಗೆ ನೀವು genuine ಅಂತ ಇದ್ರೆ ಬರೋದಕ್ಕೆ ಯಾಕೆ ಭಯ, ನಾನು ನಿಮ್ಮನ್ನ ಫೇಕ್ ಅಂತ ಪ್ರೂವ್ ಮಾಡ್ತೀನಿ ಅಂತ ಭಯಾನಾ? ಎಂದು ಕೇಳಿದ್ದಾರೆ. ಗೌತಮಿ ನಾನು ಪಾಸಿಟಿವ್ ವಾತಾವರಣದಲ್ಲಿ ಇರೋಕೆ ಭಯಸ್ತೀನಿ ಎಂದಾಗ ಶೋಭಾ ಅವರು ನೀವು ಪಾಸಿಟಿವ್ ಅಂತೀರಾ ಆದ್ರೆ ನಿಮ್ಮ ಬಳಿ ಇರೋದೆಲ್ಲಾ ನೆಗೆಟಿವ್, ನಾನು ಹೊರಗಡೆ ಆಡಿಯನ್ಸ್ ಆಗಿ ನೋಡಿ ಹೇಳ್ತಾ ಇದ್ದೀನಿ, ನಿಮ್ಮಲ್ಲಿ ಪಾಸಿಟಿವ್ ಇಲ್ಲವೇ ಇಲ್ಲ ಎಂದಿದ್ದಾರೆ.
Namratha Gowda : ಸಿನಿಮಾ ಯಾಕೆ ಮಾಡ್ತಿಲ್ಲ? ಕಾರಣ ಕೊಟ್ಟ ನಮ್ರತಾ; ಇದನ್ನ ನಂಬಬೇಕಾ ಅಂದ್ರು ನೆಟ್ಟಿಗರು