Bigg Boss 11: ಕಿರುತೆರೆಯಲ್ಲಿ ಸತ್ಯ ಸೀರಿಯಲ್ ನಲ್ಲಿ ರಫ್ ಅಂಡ್ ಟಫ್ ಪಾತ್ರದ ಮೂಲಕ ರಂಜಿಸಿದ್ದ ನಟಿ ಗೌತಮಿ ಜಾಧವ್ (Gauthami Jadav) ಬಿಗ್ ಬಾಸ್ ಮನೆಗೆ ಬಂದ ಮೇಲೆ ಅವರು ಎಷ್ಟು ಮೃದು ಸ್ವಭಾವದವರು, ಹೀಗಿದ್ರೆ ಗೌತಮಿ ಅವರು ಆ ಮನೆಯಲ್ಲಿ ಹೆಚ್ಚು ದಿನ ಉಳಿಯೋದು ಕಷ್ಟ ಅನ್ನೋದು ಅವರ ಅಭಿಮಾನಿಗಳು ಮತ್ತು ನೆಟ್ಟಿಗರ ಮಾತುಗಳಾಗಿದೆ.
ಬಿಗ್ ಬಾಸ್ (Bigg Boss 11) ಮನೆಯಲ್ಲಿ ಉಳಿಯೋಕೆ ನೀವು ಅರ್ಹರು ಅನ್ನೋದಕ್ಕೆ ಕಾರಣಗಳನ್ನ ನೀಡಿ ಅಂದಾಗ ರಂಜಿತ್ ಎದುರು ಗೌತಮಿ ತಾನೇಕೆ ಅರ್ಹಳು ಅನ್ನೋದಕ್ಕೆ ಒಂದಷ್ಟು ಕಾರಣಗಳನ್ನ ನೀಡಿದ್ದಾರೆ. ಈ ವೇಳೆ ನಟಿ ನಾನು ತುಂಬಾ ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ. ಈ ಮನೆಯಲ್ಲಿ ಇರುವ ಹದಿನಾರು ವ್ಯಕ್ತಿತ್ವಗಳಲ್ಲಿ ಪ್ಲಸ್ ಮತ್ತು ಮೈನಸ್ ಇರುತ್ತದೆ.
ಇಲ್ಲಿ ಇರೋರಲ್ಲಿ ನಾನು ಮೈನಸ್ ಅನ್ನೇ ನೋಡುತ್ತಾ ಕೂತರೇ ಬಹುಶಃ ನಾನು 100+ ದಿನಗಳು ಇಲ್ಲಿರೋದಕ್ಕೆ ಕಷ್ಟ ಆಗಬಹುದು. ನಾನು ಪಾಸಿಟಿವ್ ಅನ್ನ ನೋಡುತ್ತಾ ಹೋದ್ರೆ ನನಗೆ ಇಲ್ಲಿ ಇರೋದಕ್ಕೆ ಸುಲಭ ಆಗುತ್ತೆ ಮತ್ತು ಎಲ್ಲರನ್ನ ಅರ್ಥ ಮಾಡಿಕೊಳ್ಳೋಕೆ ಸುಲಭ ಆಗುತ್ತೆ ಎಂದು ಗೌತಮಿ ಹೇಳಿದ್ದಾರೆ.
ಗೌತಮಿ ಅವರು ಮನೆಯಲ್ಲಿ ತುಂಬಾ ದಿನ ಇರೋದಕ್ಕೆ ಎಲ್ಲರಲ್ಲೂ ಪಾಸಿಟಿವ್ ಏನಂತ ನೋಡಿ, ಅರ್ಥ ಮಾಡ್ಕೊಂಡ್ರೆ ಸಾಕು ಅಂತ ನಂಬಿರೋದು ಎಷ್ಟು ಸರಿ ಅನ್ನೋದು ಅವರಿಗೆ ಗೊತ್ತಿರಬೇಕು. ಆದ್ರೆ ಹೊರಗಿನಿಂದ ಬಿಗ್ ಬಾಸ್ ನೋಡೋರು ಮಾತ್ರ ಗೌತಮಿ ಅವರ ಇಂತಹ ಒಂದು ಆಲೋಚನೆ ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವ್ ರಿಸಲ್ಟ್ ನೀಡೋದು ಕಷ್ಟ ಅಂತಿದ್ದಾರೆ.
Nayanthara ಮಕ್ಕಳ ದಾದಿಯರ ಜವಾಬ್ದಾರಿ ನಿರ್ಮಾಪಕರಿಗೆ ಯಾಕೆ; ನಯನತಾರಾ ಮೇಲೆ ಸಿಡಿದೆದ್ದ ನಿರ್ಮಾಪಕ