Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ವೈಲ್ಡ್ ಕಾರ್ಡ್ ಎಂಟ್ರಿ ನಂತರ ಸಾಕಷ್ಟು ರೋಚಕತೆಯನ್ನು ಮೂಡಿಸಿದೆ. ಅಲ್ಲದೇ ಮನೆಯಲ್ಲಿ ಕೆಲವರು ತಮ್ಮ ಆಟದ ವೈಖರಿಯನ್ನು ಸಹಾ ಬದಲಾಯಿಸಿಕೊಂಡಿದ್ದಾರೆ. ಇದರಿಂದಾಗಿ ಮೊದಲಿಗಿಂತ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲವುಗಳ ನಡುವೆ ಈ ವಾರ ಬಿಗ್ ಬಾಸ್ (BBK 11) ಮನೆಯಿಂದ ಒಬ್ಬ ಸ್ಪರ್ಧಿ ಹೊರಗೆ ಬಂದಿದ್ದಾರೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಇದ್ದು ಈಗ ಹೊಸಬರ ಎಂಟ್ರಿ ನಂತರ ಮೊದಲಿಂದ ಇದ್ದವರು ಹೊರಗೆ ಬರುವುದು ಖಂಡಿತ ಬೇಸರದ ವಿಚಾರವಾಗಿದೆ.
ಹಾಗಾದರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದವರು ಯಾರು ? ನಿನ್ನೆ ವಾರಾಂತ್ಯದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಮೋಕ್ಷಿತಾ, ಹನುಮಂತ ಇಬ್ಬರನ್ನೂ ಸೇವ್ ಮಾಡಿದ್ದರು. ಇನ್ನು ಉಳಿದ ಐವರಲ್ಲಿ ಈಗ ಧರ್ಮ ಕೀರ್ತಿರಾಜ್ (Dharma Kirtiraj) ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ವಿಚಾರವು ಚರ್ಚೆಯಾಗುತ್ತಿದೆ.
ಎಪಿಸೋಡ್ ಪ್ರಸಾರಕ್ಕೆ ಮೊದಲೇ ಸುದ್ದಿ ಹರಿದಾಡಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಧರ್ಮ ಅವರು ತಮ್ಮದೇ ರೀತಿಯಲ್ಲಿ ಆಟ ಆಡಿಕೊಂಡು ಬರ್ತಿದ್ದಾರೆ. ಅನಾವಶ್ಯಕವಾಗಿ ಜಗಳ, ಮಾತಿನ ಚಕಮಕಿ ನಡೆಸದೇ ಇರುವ ಧರ್ಮ ಅವರು ತಾವು ತಮ್ಮ ಟಾಸ್ಕ್ ಎನ್ನುವ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಾ ಬಂದಿದ್ದಾರೆ.
ಮನೆಯಲ್ಲಿ ಜಗಳ ನಡೆದಾಗ ಅವರು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತಾವು ಮಾತ್ರ ಯಾರ ಮೇಲೂ ಜಗಳ ಮಾಡಿಕೊಂಡಿಲ್ಲ. ಕಳೆದ ವಾರ ಧರ್ಮ ಅವರ ಸ್ನೇಹಿತೆ ಅನುಷಾ ರೈ ಎಲಿಮಿನೇಟ್ ಆದ ಬೆನ್ನಲ್ಲೇ ಈ ವಾರ ಧರ್ಮ ಅವರು ಸಹಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದು, ಅನೇಕರು ಇದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
Vijay Rashmika : ಗಾಸಿಪ್ ಎಷ್ಟೇ ಆದ್ರೂ ಚಿಂತೆ ಇಲ್ಲ, ಯಾಕಂದ್ರೆ ನಿಜ ಬೇರೇನೇ ಇದೆ; ವಿಜಯ್ ರಶ್ಮಿಕಾ ಔಟಿಂಗ್