Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಉತ್ತಮ ಪಟ್ಟವನ್ನು ನೀಡುವ ವಿಚಾರದಲ್ಲಿ ಮನೆ ಮಂದಿಯ ನಡುವೆ ಗ್ರೂಪಿಸಂ ಮತ್ತು ಫಿಕ್ಸಿಂಗ್ ಗೇಮ್ ಶುರುವಾಯಿತಾ? ಎನ್ನುವ ಪ್ರಶ್ನೆ ಈಗ ವೀಕ್ಷಕರಲ್ಲಿ ಮೂಡಿದೆ. ನೆಟ್ಟಿಗರು ಕೂಡಾ ಸೋಶಿಯಲ್ ಮೀಡಿಯಾ ಗಳಲ್ಲಿ ಇದರ ಬಗ್ಗೆ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಬಿಗ್ ಬಾಸ್ (BBK 11) ಮನೆಯಲ್ಲಿ ಪಾಸಿಟಿವ್ ಬಗ್ಗೆ ಮಾತನಾಡುವ ಗೌತಮಿ, ಹ್ಯುಮಾನಿಟಿ ಎನ್ನುವ ಮೋಕ್ಷಿತ ಹಾಗೂ ಉಗ್ರಂ ಮಂಜುವ ಗುಂಪುಗಾರಿಕೆ ಮಾಡಿದ್ದಾರೆ ಎನ್ನುವ ಮಾತುಗಳು ನೆಟ್ಟಿಗರಿಂದ ಕೇಳಿ ಬರುತ್ತಿದೆ.
ಈ ವಾರದ ಟಾಸ್ಕ್ ಗಳು ನಡೆಯುವಾಗ ಉಗ್ರಂ ಮಂಜು (Ugram Manju) ಶಿಶಿರ್ ರವರ ತಂಡದ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಆಗ ಮಂಜು ವಿರುದ್ಧ ಮೋಕ್ಷಿತಾ ಮತ್ತು ಗೌತಮಿ ಸಿಟ್ಟಾಗಿದ್ದರು ಮತ್ತು ಕೋಪ, ಆದೇಶದಿಂದ ಮಾತನಾಡಿದರು. ಆದರೆ ಟಾಸ್ಕ್ ಗಳು ಮುಗಿದ ಕೂಡಲೇ ಇವರು ಮತ್ತೆ ಒಂದಾಗಿದ್ದಾರೆ. ಅಕ್ಷರಶಃ ಗುಂಪುಗಾರಿಕೆಯನ್ನು ಆರಂಭಿಸಿದ್ದಾರೆ. ಉತ್ತಮ ಮತ್ತು ಕಳಪೆ ಕೊಡುವಾಗ ಅವರ ಗ್ರೂಪಿಸಂ ಸ್ಪಷ್ಟವಾಗಿ ಕಂಡಿದೆ.
ಗೌತಮಿ, ಮೋಕ್ಷಿತ (Mokshitha Pai) ಮತ್ತು ಮಂಜು ಉತ್ತಮವನ್ನ ತಮ್ಮತಮ್ಮಲ್ಲೇ ಕೊಟ್ಟುಕೊಂಡಿರುವುದು ಕಂಡುಬಂದಿದೆ. ಗೌತಮಿ ಮತ್ತು ಮೋಕ್ಷಿತಾ ಉತ್ತಮವನ್ನು ಮಂಜಣ್ಣನಿಗೆ ಕೊಟ್ಟರೆ, ಮಂಜಣ್ಣ ಈ ವಾರದ ಉತ್ತಮವನ್ನು ಗೌತಮಿಗೆ ನೀಡಿದ್ದಾರೆ. ಅಲ್ಲದೇ ತಾವು ಉತ್ತಮ ನೀಡಿದ್ದು ಏಕೆ ಅನ್ನೋದನ್ನ ವಿವರಿಸಿ ಹೇಳಿದ್ದಾರೆ. ಆದರೂ ತಮ್ಮ ತಮ್ಮಲ್ಲೇ ಅವರು ಉತ್ತಮ ನೀಡಿರುವುದು ಮಾತ್ರ ಜನರಿಗೆ ಹಿಡಿಸಿಲ್ಲ.
ಮಂಜಣ್ಣನ ತಂಡದಲ್ಲಿ ಭವ್ಯ ಗೌಡ ಉತ್ತಮವಾದ ಆಟವನ್ನು ಆಡಿದರು. ಈ ವಿಚಾರವಾಗಿ ಮಂಜು ಭವ್ಯ ಗೌಡ ಅವರಿಗೆ ಥ್ಯಾಂಕ್ಸ್ ಹೇಳಿದರು. ಆದರೆ ಬೆಸ್ಟ್ ಪರ್ಫಾರ್ಮೆನ್ಸ್ ಪಟ್ಟವನ್ನು ಮಾತ್ರ ಗೌತಮಿಗೆ ನೀಡಿದ್ದಾರೆ. ಕೊನೆಗೆ ಈ ವಾರದ ಉತ್ತಮ ಎಂದು ಭವ್ಯ ಗೌಡ ಅವರಿಗೆ ಮೆಡಲ್ ಸಿಕ್ಕಿದಾಗ ಭವ್ಯ ಅವರಿಗೆ ವೋಟ್ ಮಾಡದವರು ಕನಿಷ್ಠ ಪಕ್ಷ ಚಪ್ಪಾಳೆಯನ್ನು ಕೂಡ ತಟ್ಟಲಿಲ್ಲ. ಇದನ್ನು ನೋಡಿ ಕ್ರೀಡಾಮನೋಭಾವ ಎಲ್ಲಿ ಹೋಯ್ತೆಂದು ಜನ ಪ್ರಶ್ನೆ ಮಾಡಿದ್ದಾರೆ.
Actor Suriya : ಕೆಜಿಎಫ್, ಕಾಂತಾರ ಕೊಡುಗೆ ಅಪಾರ ಎಂದು ಕನ್ನಡ ಸಿನಿಮಾಗಳನ್ನು ಹೊಗಳಿದ ನಟ ಸೂರ್ಯ