Bigg Boss Kannada : ಬಿಗ್ ಬಾಸ್ ಕನ್ನಡ 11ನೇ (Bigg Boss Kannada) ಸೀಸನ್ ನ ಎಂಟನೇ ವಾರ ನಡೆಯುತ್ತಿದ್ದು, ಮನೆಯಲ್ಲಿ ರಾಜ ಮತ್ತು ಪ್ರಜೆಗಳ ಟಾಸ್ಕ್ ಅನ್ನು ನೀಡಲಾಗಿದೆ. ನಿನ್ನೆಯ ಸಂಚಿಕೆಯಲ್ಲಿ ಕೇವಲ ನಾಮಿನೇಷನ್ ಪ್ರಕ್ರಿಯೆಯನ್ನು ಮಾತ್ರ ಪ್ರಸಾರ ಮಾಡಲಾಗಿತ್ತು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯಲ್ಲಿ ಸದ್ಯಕ್ಕೆ ರಾಜನ ಪದವಿಯಲ್ಲಿ ಇರುವ ಉಗ್ರ ಮಂಜು (Ugram Manju) ಅವರಿಗೆ ಬಿಗ್ ಬಾಸ್ ಕಡೆಯಿಂದ ವಿಶೇಷ ಅಧಿಕಾರವನ್ನು ನೀಡಲಾಗಿತ್ತು. ಮಂಜು ಕ್ಯಾಪ್ಟನ್ ಆದ ಮೇಲೆ ರಾಜ ಮತ್ತು ಪ್ರಜೆಗಳ ಟಾಸ್ಕ್ ಶುರುವಾಗಿದ್ದು, ರಾಜನ ಸ್ಥಾನದಲ್ಲಿರುವ ಮಂಜುಗೆ ಒಂದಷ್ಟು ವಿಶೇಷ ಅಧಿಕಾರಗಳನ್ನು ಬಿಗ್ ಬಾಸ್ (BBK 11) ನೀಡುತ್ತಿದ್ದಾರೆ.
ಅದರಲ್ಲಿ ನಾಮಿನೇಷನ್ ಪ್ರಕ್ರಿಯೆ ವೇಳೆ ಒಬ್ಬ ಸ್ಪರ್ಧಿ ಇಬ್ಬರ ಹೆಸರನ್ನು ನಾಮಿನೇಷನ್ ಗೆ ಸೂಚಿಸಬೇಕು ಮತ್ತು ಅದಕ್ಕೆ ಸರಿಯಾದ ಕಾರಣಗಳನ್ನು ಹೇಳಬೇಕು. ಮಹಾರಾಜ ಮಂಜು ಅವರಿಗೆ ಆ ಕಾರಣಗಳು ಇಷ್ಟವಾದರೆ ಸ್ಪರ್ಧಿ ಹೇಳಿದ ಇಬ್ಬರು ವ್ಯಕ್ತಿಗಳನ್ನು ನಾಮಿನೇಟ್ ಮಾಡಬಹುದು. ಒಂದು ವೇಳೆ ಮಹಾರಾಜ ಮಂಜುಗೆ ಕಾರಣಗಳು ಹಿಡಿಸದೇ ಇದ್ದಲ್ಲಿ ಹೆಸರು ಸೂಚಿಸಿದ ವ್ಯಕ್ತಿಯನ್ನೇ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದರು.
ಈ ನಾಮಿನೇಷನ್ ಪ್ರಕ್ರಿಯೆ ವೇಳೆ ಮಂಜು ತಮ್ಮ ಗೆಳತಿ ಗೌತಮಿ (Gouthami Jadav) ಅವರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಅವರನ್ನು ಸೇವ್ ಮಾಡಿದ್ರು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲೂ ಅನೇಕರು ಈ ವಿಚಾರವಾಗಿ ಕಾಮೆಂಟ್ ಗಳನ್ನು ಮಾಡುತ್ತಾ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಂಜು ಅವರು ಗೌತಮಿ ಅವರನ್ನ ಸೇವ್ ಮಾಡಿ ಬೆಂಬಲಕ್ಕೆ ನಿಂತರು ಅನ್ನುವುದಕ್ಕೆ ಪುಷ್ಟಿ ನೀಡುವಂತೆ ಅಲ್ಲಿ ನಡೆದ ಘಟನೆಗಳು ಎಲ್ಲರಿಗೂ ಕಂಡಿದೆ.
ಗೌತಮಿಯವರು ಸೂಚಿಸಿದ ಹೆಸರುಗಳನ್ನು ಹಾಗೂ ಅವರು ನೀಡಿದ ಕಾರಣಗಳನ್ನು ಒಪ್ಪಿಕೊಂಡು ಆ ಸ್ಪರ್ಧಿಗಳನ್ನು ಮಂಜು ನಾಮಿನೇಟ್ ಮಾಡಿದ್ರು. ಆದರೆ ಅನ್ಯ ಸ್ಪರ್ಧಿಗಳು ಗೌತಮಿ ಅವರ ಹೆಸರನ್ನು ಹೇಳಿ ಅವರನ್ನ ನಾಮಿನೇಟ್ ಮಾಡಿದಾಗ ಕಾರಣಗಳು ತೃಪ್ತಿಯಾಗಿಲ್ಲ ಎನ್ನುವ ಕಾರಣಕ್ಕೆ ಮಹಾರಾಜ ಮಂಜು ಅವರು ಗೌತಮಿಯವರನ್ನ ಸೇವ್ ಮಾಡಿ ಅವರ ಹೆಸರನ್ನ ತೆಗೆದುಕೊಂಡವರನ್ನೇ ನಾಮಿನೇಟ್ ಮಾಡಿದರು. ಇದನ್ನು ನೋಡಿ ನೆಟ್ಟಿಗರು ಮಂಜು ಬುದ್ಧಿವಂತಿಕೆ ತೋರಿಸಿ ತಮ್ಮ ಗೆಳತಿಯನ್ನು ಸೇವ್ ಮಾಡಿಕೊಂಡ್ರು ಅಂತ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
Mohini Dey : ಅವರೊಡನೆ ಎಂಟು ವರ್ಷ ಇದ್ದೆ, ಅವರು ನನಗೆ ; ರೆಹಮಾನ್ ಬಗ್ಗೆ ಮೌನ ಮುರಿದ ಮೋಹಿನಿ ಡೇ