Bigg Boss: ಟೇಕಾಫ್ ಆಗಿದೆ, ಕೆಳಗಿಳಿಯಲ್ಲ; ಮಂಜುಗೆ ಮತ್ತೊಂದು ಎಚ್ಚರಿಕೆ ಕೊಟ್ಟ ಗೌತಮಿ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಗೌತಮಿ ತಮ್ಮ ಗೆಳೆಯನ ಮೇಲೆ ಸಿಟ್ಟಾಗಿದ್ದಾರೆ. ಬಿಗ್ ಬಾಸ್ (BBK 11) ಮನೆಯಲ್ಲಿ ಉಗ್ರಂ ಮಂಜು (Ugram Manju) ಮತ್ತು ಗೌತಮಿ (Gouthami ) ಸ್ನೇಹ ಎಂತದ್ದು ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರಿಬ್ಬರಿಂದ ಮೋಕ್ಷಿತಾ ದೂರಾದರೂ ಮಂಜು ಮತ್ತು ಗೌತಮಿ ಮಾತ್ರ ಸ್ನೇಹವನ್ನು ಮುಂದುವರೆಸಿದ್ದು ಮಾತ್ರವೇ ಅಲ್ಲದೇ ಒಂದು ಉದಾಹರಣೆ ಎನ್ನುವ ಹಾಗಿದ್ದರು.

ಆದರೆ ಈಗ ಈ ಸ್ನೇಹದಲ್ಲಿ ಬಿರುಕು ಮೂಡಲಿದ್ಯಾ ಎನ್ನುವ ಅನುಮಾನ ಮೂಡಿದೆ. ಹೌದು, ಗೌತಮಿ ಅವರು ಮಂಜು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಜು ಹತ್ರಾನೇ ಅವರು ನೇರವಾಗಿ ಮೋಕ್ಷಿತಾ ಹೇಳಿದ್ದು ಸರಿ ಇದೆ ಅಂತ ನನಗೆ ಅನಿಸ್ತಿದೆ ಎಂದಿದ್ದಾರೆ.

ಉಗ್ರಂ ಮಂಜು ಅವರನ್ನ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗೆ ಹಾಕಿದ್ದಾರೆ ಗೌತಮಿ. ಮನೆಯ ಕ್ಯಾಪ್ಟನ್ ಆಗಿರೋ ಗೌತಮಿ ಮಂಜು ವಿಚಾರವಾಗಿ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ನನ್ನ ಕ್ಯಾಪ್ಟನ್ಸಿ ನಲ್ಲಿ ನನ್ನ ಲೀಡ್ ಮಾಡಬೇಡಿ, ‌ನಿಮ್ಮ ವಾಯ್ಸ್ ನಲ್ಲಿ ನನ್ನ ವಾಯ್ಸ್ ಕೆಳಗೆ ಹೋಗ್ತಿದೆ ಎಂದಿದ್ದಾರೆ. ಅಲ್ಲದೇ ಮಧ್ಯೆ ಮಾತಾಡಿದ ಮಂಜುಗೆ ಇಪ್ಪತ್ತು ಸಲ ಹೇಳೋಕಾಗಲ್ಲ ಸೈಲೆಂಟ್ ಆಗಿರಿ ಅಂತ ಎಚ್ಚರಿಕೆ ಕೊಟ್ಟಿರೋ ಗೌತಮಿ.

ಅಲ್ಲದೇ ನೀವು ಹೇಳೋ ತರ ಇಲ್ಲ, ಮೋಕ್ಷಿತಾ ಹೇಳಿದ ಲೈನ್ಸ್ ಸರಿ ಇದೆ, ನಾವಿಬ್ಬರೇ ಇದ್ದಾಗಲೂ ನಿಮ್ಮ ವಾಯ್ಸ್ ಕೇಳ್ಸುತ್ತೆ ಎಂದಿದ್ದಾರೆ. ನೀವು ನನ್ನ ಮಾತಲ್ಲೂ ನಿಮ್ಮ ಮಾತನ್ನ ಸೇರಿಸಿ ಹೇಳ್ತೀರಾ.. ಟೇಕಾಫ್ ಆಗಿದೆ, ಇನ್ನಂತು ನಾನು ಕೆಳಗಿಳಿಯಲ್ಲ, ಮಾಡ್ತೀನಿ ನಾನು ಎಂದಿದ್ದು ಇನ್ಮುಂದೆ ಗೆಳೆಯ ಗೆಳತಿ ಗೆಳತನ ಇರಲ್ಲ ಅಂತ ಹೇಳಿದ್ದಾರೆ.

Leave a Comment