BBK 11 : ಬಿಗ್ ಬಾಸ್ ಮನೇಲಿ ಮತ್ತೆ ಮಿತಿ ಮೀರಿದ ಮಾತು; ಮೋಕ್ಷಿತಾ ಮೇಲೆ ರೊಚ್ಚಿಗೆದ್ದ ಉಗ್ರಂ ಮಂಜು

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆ ಈ ವಾರ ಬಿಗ್ ಬಾಸ್ (BBK 11) ರೆಸಾರ್ಟ್ ಆಗಿ ಬದಲಾಗಿದೆ. ಹೊಸ ಟಾಸ್ಕ್ ಗಾಗಿ ರೆಸಾರ್ಟ್ ಆಗಿ ಬದಲಾದ ಮನೆಯಲ್ಲಿ ಅತಿಥಿಗಳ ಆಗಮನ, ಅವರನ್ನ ಖುಷಿ ಪಡಿಸೋ ರೆಸಾರ್ಟ್ ಸ್ಟಾಫ್ ಹೀಗೆ ಟಾಸ್ಕ್ ಪ್ಲಾನ್ ಮಾಡಲಾಗಿದ್ದು, ವಾಹಿನಿ ಹೊಸ ಪ್ರೊಮೊ ಶೇರ್ ಮಾಡಿದೆ. ಟಾಸ್ಕ್ ನಲ್ಲಿ ಮಂಜು ರೌದ್ರವತಾರ ತಾಳಿದರೆ, ಚೈತ್ರ ತಮ್ಮದೇ ಸ್ಟೈಲ್ ನಲ್ಲಿ ಬೇಕಂತಲೇ ಲೈಮ್ ಸೋಡಾ ಚೆಲ್ಲಿದ್ದಾರೆ.

ರೆಸಾರ್ಟ್ ಸ್ಟಾಫ್ ಗೆ ಗೆಸ್ಟ್ ಗಳು ಟಾರ್ಚ್ ಕೊಡುತ್ತಿದ್ದು, ಈ ವೇಳೆ ಮೋಕ್ಷಿತಾ ಮೇಲೆ ಅರಚಾಡಿದ್ದಾರೆ ಮಂಜು (Ugram Manju), ತಾನು ಬೇಕಂತಲೇ ಸೋಡಾ ಚೆಲ್ಲಿ ರಜತ್ ಕೈಯಲ್ಲಿ ಕ್ಲೀನ್ ಮಾಡಿಸಿದ್ದಾರೆ ಚೈತ್ರಾ ಕುಂದಾಪುರ. ಮೋಕ್ಷಿತಾಗೆ ಬಟ್ಟೆ ವಾಶ್ ಮಾಡೋಕೆ ಮಂಜಣ್ಣ ಹೇಳಿದ್ದು ಮೋಕ್ಷಿತಾ ಅದನ್ನ ಆಗಲ್ಲ ಅಂದಿದ್ದಾರೆ.‌

ಮಂಜಣ್ಣ ಮಾತಾಡೋ ರಭಸಕ್ಕೆ ಅವರ ಬಾಯಿಂದ ಎಂಜಲು ಬೀಳ್ತಿದೆ ಅಂತ ಮೋಕ್ಷಿತಾ (Mokshitha) ಹೇಳಿದ್ದಾರೆ. ಮನೆಯಲ್ಲಿ ಒಂದು ಅರಚಾಟ ಮತ್ತು ಕಿರುಚಾಟದ ವಾತಾವರಣ ಕಂಡಿದೆ. ಈ ಸೀಸನ್ ನಲ್ಲಿ ಬಹುತೇಕ ಬಿಗ್ ಬಾಸ್ ಮನೆ ಮನರಂಜನೆಗಿಂತಲೂ ಕೂಗಾಟ, ಕಿತ್ತಾಟಗಳಿಂದಲೇ ಹೆಸರು ವಾಸಿಯಾಗಿದೆ.

ಟಾಸ್ಕ್ ನ ಮೊದಲ ಹಂತದಲ್ಲಿ ಒಂದು ತಂಡ ಈ ರೇಂಜ್ ಗೆ ಎದುರಾಳಿ ತಂಡಕ್ಕೆ ತೊಂದರೆ ಕೊಟ್ರೆ ಮುಂದೆ ಎದುರಾಳಿ ತಂಡ ಗೆಸ್ಟ್ ಆದಾಗ ತೊಂದರೆ ಡಬಲ್ ಆಗೋದು ಪಕ್ಕಾ.. ಈ ಟಾಸ್ಕ್ ನಲ್ಲಿ ಮನೆ ಮತ್ತೆ ಕದನ ರಂಗ ಆಗೋದು ಕೂಡಾ ಸತ್ಯ ಅನ್ನೋದು ಈಗ ಅನೇಕರ ಅಭಿಪ್ರಾಯ ಆಗಿದೆ.

Bigg Boss ಮನೆಯಲ್ಲಿ ದೇವಿಯ ಮೊರೆ ಹೋದ ಚೈತ್ರಾ; ದೇವಿ ಕೊಟ್ಟ ಪ್ರಸಾದ ಶಾಕಿಂಗ್, ಚೈತ್ರ ಮುಂದಿನ ನಿರ್ಧಾರ ಏನು

Leave a Comment