Bigg Boss Kannada 11 : ಬಿಗ್ ಬಾಸ್ ಕನ್ನಡ -11 (Bigg Boss Kannada-11) ಗ್ರ್ಯಾಂಡ್ ಪ್ರೀಮಿಯರ್ ನಲ್ಲಿ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿರುವ ಎಲ್ಲಾ ಸ್ಪರ್ಧಿಗಳ ಪರಿಚಯವನ್ನು ನೀಡಲಾಗಿದ್ದು, ಈಗಾಗಲೇ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟವನ್ನು ಆರಂಭಿಸಿದ್ದಾರೆ. ಒಟ್ಟು 17 ಜನ ಸ್ಪರ್ಧಿಗಳು ದೊಡ್ಮನೆಯೊಳಕ್ಕೆ ಪ್ರವೇಶವನ್ನ ಪಡೆದಿದ್ದಾರೆ.
ಹದಿನೇಳು ಮಂದಿಯಲ್ಲಿ ಒಂದಷ್ಟು ಜನ ಬಿಗ್ ಬಾಸ್ ಮನೆಯ ಸ್ವರ್ಗಕ್ಕೆ ಎಂಟ್ರಿ ಕೊಟ್ರೆ, ಉಳಿದವರು ನರಕದ ಮನೆಯಲ್ಲಿ ಜಾಗವನ್ನು ಪಡೆದುಕೊಂಡಿದ್ದಾರೆ. ಹೊರ ಜಗತ್ತಿನಲ್ಲಿ ತಮ್ಮಿಷ್ಟದ ಹಾಗೆ ಜೀವನ ನಡೆಸುತ್ತಿದ್ದವರು ಈಗ ವಿಭಿನ್ನ ವ್ಯಕ್ತಿತ್ವದ ಜನರ ಜೊತೆ ಬೆರೆಯುವ, ಹೊಂದಿಕೊಳ್ಳುವ ಪ್ರಯತ್ನವನ್ನು ಆರಂಭಿಸಿದ್ದಾರೆ.
ಈ ಬಾರಿ ತಾವು ತೊಟ್ಟ ಆಭರಣಗಳಿಂದಲೇ ಗಂ ಸೆಳೆದವರು ಗೋಲ್ಡ್ ಸುರೇಶ್ (Gold Suresh). ಅವರು ಬಂಗಾರದ ಒಡವೆಗಳನ್ನು ತೊಟ್ಟು ಒಳಗೆ ಬಂದಾಗ ಎಲ್ಲರೂ ಅಚ್ಚರಿ ಪಟ್ಟರು. ಯಮುನಾ ಅವರು ಸುರೇಶ್ ಗೆ ಸರಳತೆಯ ಪಾಠವನ್ನು ಸಹಾ ಮಾಡಿದರು.
ಇವೆಲ್ಲವುಗಳ ನಡುವೆ ಮೊದಲ ದಿನವೇ ಗೋಲ್ಡ್ ಸುರೇಶ್ ಅವರು ತಮ್ಮೆಲ್ಲಾ ಆಭರಣಗಳನ್ನು ಮೈಮೇಲಿಂದ ಕಳಚಿದ್ದಾರೆ. ಪ್ರೊಮೊದಲ್ಲಿ ಸುರೇಶ್ ಅವರು ಆಭರಣಗಳನ್ನು ತೆಗೆದಿಡುತ್ತಿರುವ ದೃಶ್ಯವನ್ನು ತೋರಿಸಲಾಗಿದ್ದು, ವೀಕೆಂಡ್ ಗಳಲ್ಲಿ ಅವರು ಒಡವೆ ಧರಿಸಬಹುದೇನೋ ನೋಡಬೇಕು.
Bigg Boss Kannada 11 ರಲ್ಲಿ ಇವರೇ ಸಿಂಹಿಣಿ, ಸಂಗೀತಾ ಶೃಂಗೇರಿಗೆ ಈ ಸ್ಪರ್ಧಿಯನ್ನ ಹೋಲಿಸಿದ ನೆಟ್ಟಿಗರು