Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಅರ್ಧ ಜರ್ನಿ ಮುಗಿದಾಗಿದೆ. ನಿನ್ನೆ ಬಿಗ್ ಬಾಸ್ ಮನೆಯಿಂದ ನಟಿ ಅನುಷಾ ರೈ (Anusha Rai) ಹೊರಗೆ ಬಂದಿದ್ದಾರೆ. ಅವರು ಹೊರಗೆ ಬಂದ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ, ತೆಲುಗು ಬಿಗ್ ಬಾಸ್ ಸೀಸನ್ ಏಳರಲ್ಲಿ ಸಖತ್ ಸದ್ದು ಮಾಡಿದ್ದ ಶೋಭಾ ಶೆಟ್ಟಿ (Shobha Shetty) ಮತ್ತು ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ರಜತ್ ಕಿಶನ್ (Rajath Kishan) ವೈಲ್ಡ್ ಕಾರ್ಡ್ ಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬೆಳಗ್ಗೆ ಮನೆ ಮಂದಿ ನಿದ್ದೆಯಿಂದ ಮೇಲೇಳುವ ಸಮಯದಲ್ಲೇ ಅವರನ್ನು ಆಟದ ಬಗ್ಗೆ ಕೂಡಾ ಎಚ್ಚರ ಮಾಡೋ ಹಾಗೆ ಭರ್ಜರಿ ಎಂಟ್ರಿಯನ್ನು ಕೊಟ್ಟಿದ್ದಾರೆ ರಜತ್ ಮತ್ತು ಶೋಭಾ. ತೆಂಗಿನ ಕಾಯಿ ಒಡೆದು ಮನೆ ಮಂದಿ ಬಗ್ಗೆ ಇಬ್ಬರೂ ಮಾತನಾಡಿರೋ ಪ್ರೊಮೋವನ್ನ ವಾಹಿನಿ ಶೇರ್ ಮಾಡಿದ್ದು, ಇದನ್ನ ನೋಡಿ ಈ ವಾರದಿಂದ ಬಿಗ್ ಬಾಸ್ (BBK 11) ಮನೇಲಿ ಅಸಲಿ ಆಟ ಶುರುವಾಗ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.
ಶೋಭಾ ಶೆಟ್ಟಿ ಮನೆಯಲ್ಲಿ ಕೆಲವರು ಸ್ನೇಹದ ನಂಬಿಕೆಗೆ ಅರ್ಹರಲ್ಲ ಎಂದಿದ್ದಾರೆ. ಇನ್ನು ಮಂಜು ಮತ್ತು ಅವರ ಗ್ರೂಪ್ ಬಗ್ಗೆ ಹೇಳಿರೋ ಶೋಭಾ ಅವರು ಫ್ರೆಂಡ್ ಅಂತಾರೆ. ಅವರ ಬಗ್ಗೆ ಇವ್ರೂ ಮಾತಾಡ್ತಿದ್ದಾರೆ, ಇವ್ರ ಬಗ್ಗೆ ಅವ್ರೂ ಮಾತಾಡ್ತಿದ್ದಾರೆ. ಗೌತಮಿ ಅವರು ಇನ್ನೂ ಮುಖವಾಡ ಹಾಕ್ಕೊಂಡೇ ಇದ್ದಾರೆ ಅಂತ ತೆಂಗಿನ ಕಾಯಿ ಒಡೆದಿದ್ದು ಅದು ಒಡೆದಿಲ್ಲ. ಆಗ ಗೌತಮಿ ಅದು ಕ್ರ್ಯಾಕೂ ಆಗಲಿಲ್ವಾ ಅಂತ ಕಿಸ್ಸಕ್ ಅಂತ ನಕ್ಕಿದ್ದಾರೆ.
ಶೋಭಾ ಆಗ ಅದಕ್ಕೆ ಹೇಳಿ ಹೊಡೀತಿನಿ ಅಂತ ಮತ್ತೆ ಒಡೆದು ತೆಂಗಿನ ಕಾಯಿ ಚೂರು ಚೂರು ಮಾಡಿದ್ದಾರೆ. ಇನ್ನು ರಜತ್ ಕ್ಯಾಮರಾ ಮುಂದೆ ತ್ರಿವಿಕ್ರಮ್ ನೀನು ಸ್ಟಾರ್ಟಿಂಗ್ ಇಂದ ಕಿತ್ತು ದಬ್ಬಾಕ್ದೇ ಇರೋದನ್ನ ನಾನು ವೈಲ್ಡ್ ಕಾರ್ಡ್ ಎಂಟ್ರಿಲಿ ಕಿತ್ತು ದಬ್ಬಾಕ್ತೀನಿ ಅಂತ ಕ್ಯಾಮರಾ ಮುಂದೆ ಹೇಳಿದ್ದಾರೆ. ಒಟ್ನಲ್ಲಿ ವೈಲ್ಡ್ ಕಾರ್ಡ್ ಗಳು ಮನೇಲಿ ಏನೆಲ್ಲಾ ಬದಲಾವಣೆಗಳಿಗೆ ಕಾರಣ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.