Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನಿನ್ನೆ ನಡೆದಂತಹ ಒಂದು ಬೆಳವಣಿಗೆ ಎಲ್ಲರಿಗೂ ಸಹಾ ಅಚ್ಚರಿಯನ್ನು ಮೂಡಿಸಿದೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ (BBK 11) ಮನೆಗೆ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ (Shobha Shetty) ಅವರು ತಾನು ಶೋನಲ್ಲಿ ಮುಂದುವರೆಯೋಕೆ ಆಗಲ್ಲ ಎಂದು ಭಾವುಕರಾಗಿದ್ದರು. ಆದರೆ ಅದಾದ ನಂತರ ಅವರು ಸೇಫ್ ಅಗಿದ್ದಾರೆ ಅಂತ ಕಿಚ್ಚ ಸುದೀಪ್ ಅವರು ಹೇಳಿದ್ದು ಮಾತ್ರವೇ ಅಲ್ಲದೇ ಶೋಭಾ ಅವರ ಮನವೊಲಿಸುವ ಪ್ರಯತ್ನ ಮಾಡಿದರು.
ಸುದೀಪ್ (Sudeep) ಅವರ ಮಾತನ್ನ ಕೇಳಿದ ನಂತರ ಶೋಭಾ ಕೂಡಾ ತಾನು ಮನೆಯಲ್ಲಿ ಇರುತ್ತೇನೆ, ಪ್ರೂವ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಅನಂತರ ಶೋಭಾ ಮತ್ತೆ ಭಾವುಕರಾಗಿದ್ದಾರೆ. ಸುದೀಪ್ ಅವರ ಜೊತೆಗೆ ತಾನು ಮಾತನಾಡಬೇಕೆಂದು ಕೈ ಮುಗಿದು ಮನವಿಯನ್ನು ಮಾಡಿಕೊಂಡು ತಾನು ಮನೆಯಿಂದ ಹೋಗ್ತೀನಿ ಎಂದು ಹೇಳಿದ್ದಾರೆ. ಇದ್ಸಕ್ಕಿದ್ದ ಹಾಗೆ ಶೋಭಾ ಹೀಗೆ ನಿರ್ಧಾರ ಬದಲಿಸಿದ್ದರಿಂದ ಸುದೀಪ್ ಅವರು ಗರಂ ಆಗಿದ್ದಾರೆ.
ವೋಟ್ ಮಾಡೋ ಜನರಿಗೆ ನೀವೆಲ್ಲಾ ಏನು ಮರ್ಯಾದೆ ಕೊಡ್ತಿದ್ದೀರಾ? ಮೊದಲು ಇರ್ತೀನಿ ಅಂತ ಹೇಳಿದ್ರೀ, ಈಗ ಏನು ಡ್ರಾಮಾ ಮಾಡ್ತಾ ಇದ್ದೀರಾ? ಹೊರಗಡೆ ಹೋಗ್ಬೇಕಾ ಹೋಗ್ಬೇಕಾ? ಜನಗಳ ವೋಟಿಗೆ ಮರ್ಯಾದೆ ಕೊಡಲ್ವಾ. ಇದೆಲ್ಲಾ ದೊಡ್ಡ ಡ್ರಾಮಾ ಅನ್ನಿಸುತ್ತೆ, ಈ ತರ ಯಾವತ್ತೂ ನಡೆದಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಇವಾಗ ಇಲ್ಲ ಅನ್ನಬೇಡಿ. 11 ವರ್ಷದಿಂದ ಶೋ ನಡೆಸುತ್ತಿದ್ದೇನೆ.
ನನಗೆ ಇವೆಲ್ಲಾ ಗೊತ್ತಾಗಲ್ವಾ? ನಾನು ಮೂರ್ಖ ಅಂಥ ಅನ್ಕೊಂಡಿದ್ದೀರಾ? ನಿಮ್ಮ ಮಾತಿಗೆ ಬೆಲೆ ಕೊಟ್ಟು ನಿಮ್ಮನ್ನು ಮನೆಗೆ ಕಳುಹಿಸುತ್ತಿದ್ದೇನೆ, ನೀವು ಜನಗಳ ವೋಟಿಗೆ ಮರ್ಯಾದೆ ಕೊಟ್ಟಿಲ್ಲ. ನಿಮಗೆ ಯಾರೆಲ್ಲ ವೋಟ್ ಹಾಕಿದ್ರು ಅವರಿಗೆಲ್ಲಾ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಕಿಚ್ಚ. ಈ ವೇಳೆ ಶೋಭಾ, ನಾನು ಹೋಗ್ತೀನಿ, ನನ್ನ ಹೆಲ್ತ್ ನಿಂದ ಆಗ್ತಿಲ್ಲ ಎಂದಿದ್ದು, ಸುದೀಪ್ ಅವರು ಇದಕ್ಕೆ ನನಗೆ ಯಾರಿಗೂ ನೋವು ಮಾಡೋ ಉದ್ದೇಶ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಇರಲಿ ಎಂದಿದ್ದಾರೆ.