BBK 11 : ಸೇವ್ ಮಾಡಿದ ಶಿಶಿರ್ ನ ಟಾಸ್ಕ್ ನಿಂದ ಹೊರಗಿಟ್ಟ ಚೈತ್ರ; ನಿನ್ನೆ ಕಣ್ಣೀರು ಇವತ್ತು ಮಾಸ್ಟರ್ ಮೈಂಡು, ಸಿಡಿದೆದ್ದ ಶಿಶಿರ್

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಯಾರು ಯಾವಾಗ ಹೇಗೆ ಬದಲಾಗ್ತಾರೆ ಅನ್ನೋದನ್ನು ಊಹೆ ಮಾಡೋಕೆ ಆಗಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಅನ್ನೋ ಹಾಗಿದೆ ವಾಹಿನಿ ಶೇರ್ ಮಾಡಿರೋ ಇವತ್ತಿನ ಎಪಿಸೋಡ್ ನ ಹೊಸ ಪ್ರೊಮೋ. ನಿನ್ನೆಯಷ್ಟೇ ಭಾವನಾತ್ಮಕವಾಗಿ ಮಿಡಿದ ಹೃದಯ ಇಂದು ಅಗ್ನಿಗೋಳದ ಹಾಗೆ ಸಿಡಿದಿದೆ. ಶಿಶಿರ್ (Shishir Shastri) ಮತ್ತು ಚೈತ್ರ (Chaithra Kundapura) ನಡುವೆ ಅಕ್ಷರಶಃ ಒಂದು ವಾಕ್ಸಮರವೇ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ.

ಬಿಗ್ ಬಾಸ್ (BBK 11) ಮನೆ ಸದಸ್ಯರಿಗೆ ತಮ್ಮ ಜೋಡಿಯನ್ನು ಬಿಟ್ಟು ಕ್ಯಾಪ್ಟನ್ ತ್ರಿವಿಕ್ರಮ್ ಜೊತೆ ಜೋಡಿಯಾಗುವ ಆಯ್ಕೆ ಕೊಟ್ಟಿದ್ದಾರೆ. ಈ ಅವಕಾಶವನ್ನು ಚೈತ್ರ ಕುಂದಾಪುರ ಅವರು ಒಪ್ಪಿಕೊಂಡಿದ್ದು, ಶಿಶಿರ್ ನ ಟಾಸ್ಕ್ ನಿಂದ ಹೊರಗೆ ಇಡುವ ನಿರ್ಧಾರ ಮಾಡಿದ್ದಾರೆ. ಅಲ್ಲದೇ ತ್ರಿವಿಕ್ರಮ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾರೆ ಅನ್ನೋ ಮಾತುಗಳನ್ನ ಕೂಡಾ ಹೇಳಿದ್ದಾರೆ.

ಇದನ್ನ ಕೇಳಿ ಶಿಶಿರ್ ಸಿಡಿದಿದ್ದಾರೆ. ನಾಮಿನೇಷನ್ ಬಂದಾಗ ಕಣ್ಣೀರು ಹಾಕಿ ನಾಟಕ ಆಡೋದು ಈಗ ಹೀಗೆ ಮಾಡೋದು. ಮಾನಸಿಕವಾಗಿ ಅನ್ನೋ ಮಾತನ್ನ ಹೇಳೋರು ಇಷ್ಟುದಿನ ಏನ್ ಮಾಡ್ತಿದ್ರು, ಹನ್ನೆರಡು ವರ್ಷಗಳು ಮಣ್ಣೆತ್ತಿರೊ ನಾವುಗಳಲ್ಲ ಆ್ಯಕ್ಟರ್ ಗಳು ಇಲ್ಲಿದ್ದಾರೆ ನೋಡಿ ದೊಡ್ಡ ಆ್ಯಕ್ಟರ್ ಅಂತ ಚೈತ್ರ ಕುಂದಾಪುರ ಮೇಲೆ ತಮ್ಮ‌ ಆಕ್ರೋಶ ವನ್ನು ಹೊರ ಹಾಕಿದ್ದಾರೆ ಶಿಶಿರ್.

ನಿನ್ನೆ ಎಪಿಸೋಡ್ ನಲ್ಲಿ ಜೋಡಿಗಳಲ್ಲಿ ಒಮ್ಮತದಿಂದ ಒಬ್ಬರನ್ನ ನಾಮಿನೇಟ್ ಮಾಡಬೇಕು ಅಂತ ಹೇಳಲಾಗಿತ್ತು. ಆಗ ಶಿಶಿರ್ ಚೈತ್ರ ಅವರ ಕಣ್ಣೀರಿನ ಕಥೆ ಕೇಳಿ ಅವರನ್ನ ಸೇವ್ ಮಾಡಿ ತಾವೇ ನಾಮಿನೇಟ್ ಆಗಿದ್ದರು. ಆದರೆ ಚೈತ್ರ ಈಗ ಅದೇ ಶಿಶಿರ್ ಅವರನ್ನು ಆಟದಿಂದ ಹೊರಗಿಟ್ಟಿರುವುದು ಶಾಕಿಂಗ್ ಎನಿಸಿದೆ.

Oscars 2025 : ಆಸ್ಕರ್ ಗೆ ಎಂಟ್ರಿ ನೀಡುತ್ತಲೇ ಬದಲಾಗಿ ಹೋಯ್ತು ಸಿನಿಮಾ ಟೈಟಲ್; ಲಾಪತಾ ಲೇಡೀಸ್ ಟೈಟಲ್ ಚೇಂಜ್

Leave a Comment