Bigg Boss Kannada : ಬಿಗ್ ಬಾಸ್ ಮನೆಯ (Bigg Boss Kannada) ಈ ವಾರದ ನಾಮಿನೇಷನ್ ಪ್ರಕ್ರಿಯೆ ಮನೆಗೆ ಅತಿಥಿಗಳಾಗಿ ಬಂದಿರುವ ಬಿಗ್ ಬಾಸ್ ನ (BBK 11) ಕಳೆದ ಸೀಸನ್ ಸ್ಪರ್ಧಿಗಳ ಮುಂದೆ ವಿವಿಧ ಟಾಸ್ಕ್ ಗಳ ರೂಪದಲ್ಲಿ ನಡೀತಿದೆ ಅನ್ನೋದು ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೋ ಗಳಿಂದ ಗೊತ್ತಾಗಿದೆ. ವಿಶೇಷವಾಗಿ ನಡೆದ ನಾಮಿನೇಷನ್ ಪ್ರಕ್ರಿಯೆ ವೇಳೆಯಲ್ಲಿ ಒಂದಷ್ಟು ಮಾತಿನ ಕಾಳಗವೂ ನಡೆದಿದೆ.
ಹನುಮಂತ ಮತ್ತು ರಜತ್ ನಡುವೆ ನಡೆದ ಮಾತಿನ ಚಕಮಕಿಯ ನಂತರ ಉಗ್ರಂ ಮಂಜು (Ugram Manju) ಮತ್ತು ಶಿಶಿರ್ (Shishir) ನಡುವೆಯೂ ಕೂಡಾ ನಾಮಿನೇಷನ್ ವಿಚಾರವಾಗಿ ಜೋರು ಜೋರಾಗಿ ಮಾತಿನ ವಿನಿಮಯವಾಗಿದೆ. ಇಷ್ಟಕ್ಕೂ ಆಗಿದ್ದೇನು ಅನ್ನೋದಾದ್ರೆ ಮಂಜು ಶಿಶಿರ್ ನ ನಾಮಿನೇಟ್ ಮಾಡಿದ್ದಾರೆ.
ಶಿಶಿರ್ ಬಹಳಷ್ಟು ವಿಷಯಗಳಲ್ಲಿ ಸ್ಟಾಂಡ್ ತಗೋ ಬಹುದಿತ್ತು ಅಂತ ಮಂಜು ಹೇಳಿದ್ದಾರೆ ಇದಕ್ಕೆ ಶಿಶಿರ್ ಸಿಟ್ಟಿನಿಂದ ನಿಮಗಿಷ್ಟ ಆಗಿರೋ ಸ್ಟ್ಯಾಂಡ್ ಗಳನ್ನ ನಾನ್ಯಾಕೆ ತಗೊಳ್ಳಿ ಎಂದಿದ್ದಾರೆ. ಮಂಜು ಟಾಸ್ಕ್ ವಿಚಾರದಲ್ಲೂ ಶಿಶಿರ್ ಏನೂ ಮಾಡಿಲ್ಲ ಎಂದಿದ್ದಾರೆ. ಶಿಶಿರ್ ಅದಕ್ಕೆ ನೀವೇನು ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ.
ಇದು ಅವರಿಬ್ಬರ ನಡುವೆ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ನನ್ನನ್ನ ಹೋಲಿಕೆ ಮಾಡ್ಕೋಬೇಡ ಅಂತ ಮಂಜಣ್ಣ ಹೇಳಿದ್ದು, ನಿಮ್ಮನ್ನ ಹೋಲಿಕೆ ಮಾಡ್ಕೊಂಡು ಕೂತ್ಕೊಳ್ಳೋಕೆ ನಾನು ಬಂದಿಲ್ಲ ಎಂದಿದ್ದಾರೆ ಶಿಶಿರ್. ಇಬ್ಬರ ಮಾತಿನ ಚಕಮಕಿ ನೋಡಿ ಡ್ರೋನ್ ಪ್ರತಾಪ್ ಮಾತಿನ ಮೇಲೆ ನಿಯಂತ್ರಣ ಇರಬೇಕು ಎಂದಿದ್ದಾರೆ.
BBK 11 : ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಳೇ ಹುಲಿಗಳು, ವಿಶೇಷ ಮನವಿ ಮಾಡಿದ ಬಿಗ್ ಬಾಸ್