Bigg Boss Kannnada 11 : ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದರ (Bigg Boss Kannada 11) ಗ್ರಾಂಡ್ ಓಪನಿಂಗ್ ಇವತ್ತು ಆಗ್ತಾ ಇದೆ. ಮತ್ತೊಂದು ಕಡೆ ನಿನ್ನೆ ಈ ಬಾರಿ ಸ್ಪರ್ಧಿಗಳಾಗಿ ಮನೆಗೆ ಹೋಗೋ ನಾಲ್ಕು ಜನ ಕಂಟೆಸ್ಟೆಂಟ್ ಗಳ ಹೆಸರನ್ನ ರಿವೀಲ್ ಮಾಡಲಾಗಿದೆ. ನಟಿ ಗೌತಮಿ ಜಾಧವ್ (Gautami Jadhav), ಅಡ್ವೊಕೇಟ್ ಜಗದೀಶ್ , ಚೈತ್ರಾ ಕುಂದಾಪುರ (Chaithra Kundapura) ಮತ್ತು ಗೋಲ್ಡ್ ಸುರೇಶ್ (Gold Suresh) ಅವರ ಹೆಸರುಗಳು ಈಗಾಗಲೇ ಘೋಷಣೆ ಆಗಿದೆ.
ಆದರೆ ಇಲ್ಲೇ ಇದೆ ಟ್ವಿಸ್ಟ್. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೊಸ ಕಾನ್ಸೆಪ್ಟ್ ನ್ನ ಇಡಲಾಗಿದೆ. ಮನೆಯನ್ನು ಸ್ವರ್ಗ ಮತ್ತು ನರಕ ಅಂತ ಎರಡು ಭಾಗ ಮಾಡಲಾಗಿದೆ. ಸ್ಪರ್ಧಿಗಳಲ್ಲಿ ಯಾರೆಲ್ಲಾ ಸ್ವರ್ಗಕ್ಕೆ ಮತ್ತು ಯಾರೆಲ್ಲಾ ನರಕಕ್ಕೆ ಹೋಗ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಹಿಂದಿ ಬಿಗ್ ಬಾಸ್ ಸೀಸನ್ ಏಳರಲ್ಲಿ (Hindi Bigg Boss Season 7) ಇದೇ ರೀತಿ ಹೆವನ್ ಅಂಡ್ ಹೆಲ್ ಅಂದರೆ ಸ್ವರ್ಗ ಮತ್ತು ನರಕ ಅನ್ನೋ ಕಾನ್ಸೆಪ್ಟ್ ಮಾಡಲಾಗಿತ್ತು. ಸ್ಪರ್ಧಿಗಳಲ್ಲಿ ಅರ್ಧ ಜನ ಸ್ವರ್ಗದಲ್ಲಿ, ಇನ್ನರ್ಧ ಜನ ನರಕದಲ್ಲಿ ಇದ್ರು. ಸ್ವರ್ಗದಲ್ಲಿ ಇದ್ದವರಿಗೆ ಮನೆಯಲ್ಲಿ ಸೋಫಾ, ಬೆಡ್ ರೂಂ, ಒಳ್ಳೆ ಕಿಚನ್, ಟಾಯ್ಲೆಟ್ ಇತರೆ ಸೌಲಭ್ಯ ಇತ್ತು.
ಆದ್ರೆ ನರಕದಲ್ಲಿ ಇರೋರು ನೆಲದ ಮೇಲೆ ಹಾಕಿದ ಬೆಡ್, ಮರದ ಬೆಂಚು ಕುರ್ಚಿಗಳು, ಲೋಕಲ್ ಟಾಯ್ಲೆಟ್ ತರದ ಟಾಯ್ಲೆಟ್ ಬಳಸಬೇಕಾಗಿತ್ತು. ಕೆಲವು ವಾರಗಳು ಕಳೆದ ನಂತರ ಸ್ವರ್ಗ ನರಕ ಎರಡನ್ನೂ ಸೇರಿಸಿ ಎಲ್ಲರಿಗೂ ಎಲ್ಲಾ ಸೌಲಭ್ಯ ನೀಡಲಾಯಿತು. ಅಲ್ಲದೇ ಟಾಸ್ಕ್ ಗಳಲ್ಲಿ ಗೆದ್ದಾಗ, ಸೋತಾಗ ಸ್ಪರ್ಧಿಗಳು ಸ್ವರ್ಗದಿಂದ ನರಕಕ್ಕೆ, ನರಕದಿಂದ ಸ್ವರ್ಗಕ್ಕೆ ಎಕ್ಸ್ ಚೇಂಜ್ ಆಗಿದ್ರು.
ಕನ್ನಡದಲ್ಲೂ ಹಾಗೆ ನಡೆಯುತ್ತಾ? ಸ್ವರ್ಗ ಮತ್ತು ನರಕದ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಕೂಗಾಟ ಜೋರಾಗಿ ಇರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಏಕೆಂದರೆ ಸ್ವರ್ಗದ ಸುಖ ನಮಗೆ ಸಿಗ್ತಿಲ್ಲ ಅನ್ನೋ ವಿಚಾರ ಸಹಜವಾಗಿಯೇ ನರಕದಲ್ಲಿ ಇರೋರಿಗೆ ನೋವು ನೀಡುತ್ತೆ.
Aishwarya Rai ಗೆ ಮಗಳ ಭವಿಷ್ಯದ ಬಗ್ಗೆ ಚಿಂತೆ ಇಲ್ವಾ: ತನ್ನ ಸ್ವಾರ್ಥಕ್ಕಾಗಿ ಮಗಳನ್ನ ಶಾಲೆಯಿಂದ ಬಿಡಿಸಿ ಬಿಟ್ರಾ?