Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ಟಾಸ್ಕ್ ಗಾಗಿ ಬಿಗ್ ಬಾಸ್ (BBK 11) ಮನೆ ಒಂದು ಐಶಾರಾಮಿ ರೆಸಾರ್ಟ್ ಆಗಿ ಬದಲಾಗಿದೆ. ಎರಡು ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ರೆಸಾರ್ಟ್ ಸಿಬ್ಬಂದಿಯಾದ್ರೆ, ಮತ್ತೊಂದು ತಂಡ ಗೆಸ್ಟ್ ಗಳಾಗಿದ್ದಾರೆ. ಗೆಸ್ಟ್ ಗಳು ಕೇಳುವ ಎಲ್ಲಾ ಸೌಲಭ್ಯವನ್ನು ಇಲ್ಲ ಎನ್ನದೇ ತಾಳ್ಮೆಯಿಂದ ನೀಡಿದರೆ ಸಿಬ್ಬಂದಿ ಪಾತ್ರದ ತಂಡಕ್ಕೆ ಗೆಲುವು ಸಿಕ್ಕ ಹಾಗೆ.
ಒಂದು ತಂಡಕ್ಕೆ ಚೈತ್ರ ಮತ್ತೊಂದು ತಂಡಕ್ಕೆ ಭವ್ಯ ನಾಯಕಿಯರಾಗಿದ್ದು, ಭವ್ಯ ಅವರ ತಂಡ ಸಿಬ್ಬಂದಿ ಮತ್ತು ಚೈತ್ರ ಅವರ ತಂಡ ಗೆಸ್ಟ್ ಆಗಿದೆ. ಈ ವೇಳೆ ಮನೆಯಲ್ಲಿ ರಂಪಾಟ ಜೋರಾಗಿಯೇ ನಡೆದಿದೆ. ಅತಿಥಿಗಳ ಬೇಡಿಕೆ ತೀರಿಸಲು ಸಿಬ್ಬಂದಿ ಹರಸಾಹಸವನ್ನು ಪಟ್ಟಿದೆ. ಮನೆಯಲ್ಲಿ ಲೈಟ್ ಆಫ್ ಆದ್ಮೇಲೂ ಅತಿಥಿಗಳ ಡಿಮ್ಯಾಂಡ್ ಗಳನ್ನು ಇಟ್ಟಿದ್ದಾರೆ.
ರೆಸಾರ್ಟ್ ಟಾಸ್ಕ್ ನಲ್ಲಿ ಚೈತ್ರ ಅವರ ತಂಡದವರು ಮಾಡ್ತಿರೋ ಬೇಡಿಕೆಗಳನ್ನ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಬಹಳ ತಾಳ್ಮೆಯಿಂದ ಹ್ಯಾಂಡಲ್ ಮಾಡ್ತಾ ಇದ್ದಾರೆ. ಆದರೆ ಇನ್ನೊಂದು ಕಡೆ ರಜತ್ (Rajath) ಸಿಟ್ಟಾಗಿದ್ದು ತಮ್ಮ ಟೈಮ್ ಬರಲಿ ಅಂತ ಕಾಯ್ತಾ ಇದ್ದಾರೆ.
ಇದೇ ವೇಳೆ ಟೀಂ ಲೀಡರ್ ಭವ್ಯ (Bhavya Gowda) ಕನ್ಫೆಷನ್ ರೂಮ್ ಗೆ ಹೋಗಿ ಬಿಗ್ ಬಾಸ್ ಮುಂದೆ ಅತಿಥಿಗಳ ಡಿಮ್ಯಾಂಡ್ ಬಗ್ಗೆ ಹೇಳ್ಕೊಂಡು ಕಣ್ಣೀರು ಹಾಕಿದ್ದಾರೆ. ಆದ್ರೆ ಈ ಟಾಸ್ಕ್ ಇರೋದೇ ಹಾಗೆ ಅನ್ನೋದು ಭವ್ಯ ಅವರಿಗೆ ಅರ್ಥ ಆದ ಹಾಗೆ ಕಾಣ್ತಿಲ್ಲ.