Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಹನುಮಂತ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ನೀಡಿದ ಮೇಲೆ ಅವನ ಆಟ ಪ್ರೇಕ್ಷಕರಿಗೆ ಮಾತ್ರವೇ ಅಲ್ಲ, ಕಿಚ್ಚ ಸುದೀಪ್ (Kichcha Sudeep) ಅವರಿಗೂ ಇಷ್ಟ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಈಗ ರಜತ್ (Rajath) ಹನುಮಂತನ ಬಗ್ಗೆ ಆಡಿದ ಮಾತು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಮುಂದೆ ರಜತ್ ಸುರೇಶ್ ಮತ್ತು ಹನುಮಂತನ ಬಗ್ಗೆ ಮಾತನಾಡಿದ್ದಾರೆ.
ಸೂಪರ್ ಸಂಡೇ ಎಪಿಸೋಡ್ ನ ಪ್ರೊಮೊದಲ್ಲಿ ಗೋಲ್ಡ್ ಸುರೇಶ್ (Gold Suresh) ಹಾಗೂ ರಜತ್ ನಡುವೆ ಮಾತಿನ ಸಮರ ನಡೆದಿದೆ. ಹನುಮಂತನ (Hanumantha) ಬಗ್ಗೆ ಮಾತನಾಡಿದ ರಜತ್ ಅದಾದ ಮೇಲೆ ಗೋಲ್ಡ್ ಸುರೇಶ್ ತನ್ನ ಬಗ್ಗೆ ಹೇಳಿದ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ. ಸುರೇಶ್ ಬಿಗ್ ಬಾಸ್ ಮನೆಯಲ್ಲಿ ರಜತ್ ಕಾಂಟ್ರಿಬ್ಯೂಷನ್ ಕಂಡಿಲ್ಲ ಎಂದಿದ್ದಾರೆ.
ಇದಕ್ಕೆ ರಜತ್ ಉತ್ತರ ಕೊಟ್ಟು, ಸುರೇಶ್ ಫಸ್ಟ್ ಟಾಸ್ಕ್ ನಲ್ಲೇ ಗಾಬರಿ ಬಿದ್ದು ಡೋರ್ ಒಡೆದವ್ರು ಟಾಸ್ಕ್ ಬಿಟ್ರೆ ಏನೂ ಕಾಣಿಸ್ಲೇ ಇಲ್ಲ, ಅವರು ಹೆಂಗೆ ಕೊಡ್ತಾರೋ ನಾವು ಹಂಗೇ ಕೊಡ್ತೀವಿ, ನಾವು ಒಳ್ಳೆ ಮನುಷ್ಯರಲ್ಲ ನಾವು ಕೆಟ್ಟೋರೆ ಅಂತ ಹೇಳಿದ್ದಾರೆ.
ಇನ್ನು ರಜತ್ ಅವರು ಹನುಮಂತನ ಬಗ್ಗೆ ಮಾತನಾಡ್ತಾ, ಹನುಮಂತು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎನ್ನುವಂತೆ ಇರುತ್ತಾರೆ ಅನ್ನೋ ಮಾತನ್ನ ಹೇಳಿದ್ದಾರೆ. ಒಟ್ಟಿನಲ್ಲಿ ಈ ವಾರ (BBK 11) ಮನೆಯಲ್ಲಿ ಯಾರದ್ದು ಎಷ್ಟು ಕಾಂಟ್ರಿಬ್ಯೂಷನ್ ಅನ್ನೋ ವಿಚಾರ ಒಂದಷ್ಟು ಚರ್ಚೆಗೆ ಕಾರಣವಾಗಿದೆ.