Bigg Boss : ವೈಯಕ್ತಿಕವಾಗಿ ಆಡೋಕೆ ತಾಕತ್ತಿಲ್ವಾ? ಎದುರಾಳಿಗಳಿಗೆ ರಜತ್ ಓಪನ್ ಚಾಲೆಂಜ್

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ಟಾಸ್ಕ್ ಗಳಿಗಾಗಿ ಮನೆ ತ್ರಿವಿಕ್ರಮ್ (Trivikram) ಮತ್ತು ರಜತ್‌ (Rajath) ನಾಯಕತ್ವದಲ್ಲಿ ಎರಡು ತಂಡಗಳಾಗಿವೆ. ಆದರೆ ಈ ವೇಳೆ ಬಿಗ್ ಬಾಸ್ (BBK 11) ಈ ವಾರದ ನಾಮಿನೇಷನ್ ವಿಚಾರವಾಗಿಯೂ ಒಂದು ಹೊಸ ಟ್ವಿಸ್ಟ್ ನೀಡಿದ್ದಾರೆ. ಇದು ಖಂಡಿತ ಎಲ್ಲರಿಗೂ ಶಾಕ್ ನೀಡಿದೆ.

ಏಕೆಂದರೆ ಈ ವಾರ ಪ್ರತಿ ಟಾಸ್ಕ್ ಮುಗಿದ ನಂತರ ಸೋತ ತಂಡದಲ್ಲಿ ಒಬ್ಬ ಸ್ಪರ್ಧಿಯ ಹೆಸರನ್ನು ಗೆದ್ದ ತಂಡದವರು ಚರ್ಚೆ ಮಾಡಿ ನಾಮಿನೇಟ್ ಮಾಡಬೇಕಾಗಿದೆ. ನಿನ್ನೆ ನಡೆದ ಮೊದಲ‌ ಟಾಸ್ಕ್ ನಲ್ಲಿ ತ್ರಿವಿಕ್ರಮ್ ಅವರ ತಂಡ ಗೆಲುವನ್ನು ಪಡೆದುಕೊಂಡಿದೆ.‌

ಈ ವೇಳೆ ಗೆದ್ದ ತಂಡದವರು ರಜತ್ ನ ನಾಮಿನೇಟ್ ಮಾಡಿದ್ದಾರೆ. ತ್ರಿವಿಕ್ರಮ್ ರಜತ್ ಬೇರೆ ಅವ್ರು individual ಆಗಿ ಆಡಿ ಅಂತ ಪ್ರವೋಕ್ ಮಾಡ್ತಾರೆ. ಅವ್ರನ್ನ ಅವ್ರು ಸುಪೀರಿಯಲ್ ಅನ್ಕೊಂಡಿದ್ದಾರೆ ಅಂತ ಕಾರಣವನ್ನು ನೀಡಿ ನಾಮಿನೇಟ್ ಮಾಡಿದ್ದಾರೆ.

ಇದಕ್ಕೆ ರಜತ್ ಹೌದು, individual ಆಗಿ ಆಡಿ, ಯಾಕೆ ತಾಕತ್ತಿಲ್ವ? ನಾನು ಸುಪಿರಿಯರ್ರೇ, ನಾನು ಖರಾಬೇ, ನಾನು ಮಸ್ತೇ, ನಾಮಿನೇಷನ್ ಮಾಡಿಬಿಟ್ರೆ ನಾನು ಚೇಂಜ್ ಆಗಿ ಬಿಡ್ತೀನಾ, ನಾಳೆಯಿಂದ ಬೇರೆ ಅವ್ರನ್ನ ಹೀರೋ ಅಂತೀನಾ?? ನಾನೇ ಹೀರೋ ಅಂತ ಸವಾಲ್ ಅನ್ನು ಹಾಕಿದ್ದಾರೆ.

Leave a Comment