Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಚೈತ್ರ ಕುಂದಾಪುರ (Chaithra Kundapura) ಮತ್ತು ರಜತ್ (Rajath) ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಕ್ಯಾಪ್ಟನ್ಸಿ ಟಾಸ್ಕ್ ವೇಳೆಯಲ್ಲಂತೂ ಇಬ್ಬರ ನಡುವಿನ ಮಾತಿನ ಕಾಳಗ ನೋಡಿ ಮನೆ ಮಂದಿ ಕೂಡಾ ರೋಸಿ ಹೋಗಿದ್ದರು. ಈಗ ರಜತ್ ಚೈತ್ರ ಕುಂದಾಪುರ ಅವರಿಗೆ ಹೊಸ ಚಾಲೆಂಜ್ ಅನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮನೆಯಲ್ಲಿ ಕೆಲಸ ಮಾಡುವ ವಿಚಾರವಾಗಿ ಚೈತ್ರ ಮತ್ತು ರಜತ್ ನಡುವೆ ಚರ್ಚೆ ಆಗಿದೆ. ಕ್ಯಾಪ್ಟನ್ ಗೌತಮಿ ಸಹಾ ಅವರ ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದ್ದಾರೆ. ಆದರೆ ಚೈತ್ರ ನಾನು ಟೀ ಮಾಡಿದ್ದೀನಿ ಕೆಲಸ ಮಾಡಲ್ಲ ಅಂದ್ರೆ ರಜತ್ ನಾನು ಪಾತ್ರೆ ತೊಳಿದಿದ್ದೀನಿ ಕೆಲಸ ಮಾಡಲ್ಲ ಅಂದಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ರಜತ್ ಚೈತ್ರ ಮೇಲಿನ ಜಿದ್ದಿಗಾದ್ರೂ ನಾನು ಕೆಲಸ ಮಾಡಲ್ಲ ಅಂತ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾನು ಪಾತ್ರೆ ತೊಳೆಯಲ್ಲ ಅಂತ ಹೇಳಿರೋ ರಜತ್, ಒಂದು ವೇಳೆ ನಾನು ಪಾತ್ರೆ ತೊಳೆದ್ರೆ ನಾನು ಗಂಡಸೇ ಅಲ್ಲ ಅನ್ನೋ ಮಾತನ್ನು ಸಹಾ ಹೇಳಿದ್ದಾರೆ.
ರಜತ್ ಎಲ್ಲರ ಎದುರು ಚೈತ್ರಾಗೆ ಹಾಕಿರೋ ಈ ಸವಾಲ್ ನಲ್ಲಿ ಗೆಲ್ತಾರಾ? ಅಥವಾ ಸೋಲ್ತಾರಾ? ಅನ್ನೋದನ್ನ ಕಾದು ನೋಡಬೇಕಾಗಿದೆ. ಚೈತ್ರ ರಜತ್ ಕೈಯಲ್ಲಿ ಪಾತ್ರೆ ತೊಳೆಸೋದ್ರಲ್ಲಿ ಯಶಸ್ಸನ್ನ ಪಡೆದುಕೊಳ್ತಾರಾ ಅನ್ನೋ ಕುತೂಹಲ ಸಹಾ ಈಗ ಮೂಡಿದೆ.
Bigg Boss : ನಾಮಿನೇಷನ್ ಕಿಚ್ಚು, ಕೈ ಕೈ ಮಿಲಾಯಿಸಿದ ಧನರಾಜ್ ಮತ್ತು ರಜತ್ ; ರಜತ್ ಮಾತಿಗೆ ಧನರಾಜ್ ತಿರುಗೇಟು