BBK 11: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 (BBK 11) ಭರ್ಜರಿ ನಾಲ್ಕನೇ ವಾರದಲ್ಲಿ ಇದ್ದು, ನಾಲ್ಕನೇ ವಾರದಲ್ಲಿ ದೊಡ್ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಮನೆ ಮಂದಿಗೆ ಮಾತ್ರವೇ ಅಲ್ಲದೇ ವೀಕ್ಷಕರಿಗೆ ಸಹಾ ಶಾಕ್ ನೀಡಿದೆ. ಹೌದು, ಬಿಗ್ ಬಾಸ್ ಮನೆಗೆ ಕನ್ನಡದ ಜನಪ್ರಿಯ ನಿರೂಪಕಿ ರಾಧಾ ಹಿರೇಗೌಡರ್ ಅವರು ಎಂಟ್ರಿ ನೀಡಿದ್ದಾರೆ.
ಮೂರನೇ ವಾರಾಂತ್ಯದಲ್ಲಿ ಮನೆಗೆ ಗಾಯಕ ಹನುಮಂತನ (Hanumanta) ವೈಲ್ಡ್ ಕಾರ್ಡ್ ಎಂಟ್ರಿ ಆಗಿತ್ತು. ಈಗ ಎರಡೇ ದಿನದ ಅಂತರದಲ್ಲಿ ನಿರೂಪಕಿ ರಾಧಾ ಹಿರೇಗೌಡರ್ (Radha Hiregoudar) ಅವರು ಬಹಳ ಖಡಕ್ ಆಗೇ ಮನೆಗೆ ಎಂಟ್ರಿ ನೀಡಿದ್ದು, ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ರಾಜಕೀಯ ಟಾಸ್ಕ್ ಗೆ ಎಂಟ್ರಿ ನೀಡಿದ್ದಾರೆ.
ರಾಧಾ ಹಿರೇಗೌಡರ್ ಎಂಟ್ರಿ ಗೆ ಬಿಗ್ ಬಾಸ್ (Bigg Boss Kannada) ಸಕತ್ ಹಾಡನ್ನು ಸಹಾ ಹಾಕಿದ್ದಾರೆ. ಕನ್ನಡ ಹೆಣ್ಣು ನಾನು ಸಿಡಿದೆದ್ದರೆ ಮಿಷನ್ ಗನ್ನು ಎನ್ನುವ ಹಾಡನ್ನ ಹಾಕಲಾಗಿದೆ. ಮನೆಗೆ ಬಂದ ರಾಧಾ ಹಿರೇಗೌಡರ್ ಅವರನ್ನ ನೋಡಿ ಮನೆ ಮಂದಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಕೆಲವರ ಮುಖದಲ್ಲಿ ಆತಂಕ ಕಂಡಿದೆ.
ರಾಧಾ ಹಿರೇಗೌಡರ್ ಅವರು ಮನೆ ಮಂದಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಮನೆ ಮಂದಿ ಅಕ್ಷರಶಃ ಕಕ್ಕಾಬಿಕ್ಕಿಯಾಗಿದ್ದಾರೆ. ರಾಧಾ ಹಿರೇಗೌಡರ್ ಸ್ಪರ್ಧಿಯಾಗಿ ಬಂದಿದ್ದಾರಾ ಅಥವಾ ಅತಿಧಿಯಾಗಿ ಮಾತ್ರವೇ ಎಂಟ್ರಿ ಕೊಟ್ಟಿದ್ದಾರಾ ಎನ್ನುವುದಕ್ಕೆ ಇಂದಿನ ಎಪಿಸೋಡ್ ನೋಡಬೇಕಾಗಿದೆ.