Bigg Boss Kannada : ಈ ವಾರ ಡಬಲ್ ಎಲಿಮಿನೇಷನ್ ಪಕ್ಕಾನ ಅನ್ನೋ ಅನುಮಾನವೊಂದು ಪ್ರೇಕ್ಷಕರಿಗೆ ಮೂಡಿದೆ. ಹೌದು, ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಹನ್ನೊಂದರಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಚೈತ್ರ ಕುಂದಾಪುರ ಮತ್ತು ಐಶ್ವರ್ಯ ಇಬ್ಬರೂ ಬಾಟಮ್ ಟು ನಲ್ಲಿ ಇರುವಂತೆ ತೋರಿಸಲಾಗಿತ್ತು. ಅನಂತರ ಇಬ್ಬರನ್ನೂ ಮನೆಯೊಳಗೆ ಕಳಿಸಲಾಗಿತ್ತು.
ಇನ್ನು ಈ ವಾರ ನಾಮಿನೇಷನ್ ಪ್ರಕ್ರಿಯೆ ಸಹಾ ಬಹಳ ವಿಭಿನ್ನವಾಗಿ ನಡೆದಿತ್ತು. ಅದರಲ್ಲಿ ಏಳು ಜನ ಮನೆ ಮಂದಿಯಿಂದ ನಾಮಿನೇಟ್ ಆದರೆ ಮೋಕ್ಷಿತಾ ಮನೆಯ ಕ್ಯಾಪ್ಟನ್ ಗೌತಮಿ (Gouthami) ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದು, ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದಾರೆ.
ಮೋಕ್ಷಿತಾ (Mokshitha) ಸೇರಿದಂತೆ ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ಅವರು ಈ ವಾರ ಮನೆಯಿಂದ ಹೊರಗೆ ಬರಲು ನಾಮಿನೇಟ್ ಆದಂತಹ ಸದಸ್ಯರಾಗಿದ್ದು, ಇವರಲ್ಲಿ ಯಾರು ಮನೆಯಿಂದ ಹೊರಗೆ ಬರ್ತಾರೆ ಕಾದು ನೋಡಬೇಕಾಗಿದೆ.
ಇದೇ ವೇಳೆ ಈ ವಾರ ಸಹಾ ಬಿಗ್ ಬಾಸ್ (Bigg Boss) ಎಲಿಮಿನೇಷನ್ ನಡೆಸ್ತಾರಾ ಇಲ್ಲ ಮತ್ತೇನಾದ್ರು ಹೊಸ ಟ್ವಿಸ್ಟ್ ಕೊಡ್ತಾರಾ ಅನ್ನೋ ಅನುಮಾನ ಕೂಡಾ ಇದೆ. ಈ ವೀಕ್ ಒಬ್ಬರಲ್ಲ ಬದಲಾಗಿ ಇಬ್ಬರು ಎಲಿಮಿನೇಟ್ ಆಗಿ ಡಬಲ್ ಎಲಿಮಿನೇಷನ್ ನಡೆಯುತ್ತಾ ಅನ್ನೋ ಕುತೂಹಲ ಸಹಾ ಇದೆ.