Bigg Boss Kannada 11ರ ಸ್ಪರ್ಧಿಗಳ ಹೊಸ ಲಿಸ್ಟ್, ಇವರಲ್ಲಿ ಸ್ವರ್ಗ ಸುಖ, ನರಕದ ಯಾತನೆ ಯಾರಿಗೆ ಸಿಗಲಿದೆ

Written by Soma Shekar

Published on:

---Join Our Channel---

Bigg Boss Kannada 11 : ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ದಿನಗಣನೆ ನಡೀತಿದೆ. ಸೆಪ್ಟೆಂಬರ್‌ 29 ಭಾನುವಾರ ಸಂಜೆ 6 ಗಂಟೆಗೆ ಭರ್ಜರಿಯಾಗಿ ಆರಂಭವಾಗ್ತಿದೆ ಹೊಸ ಸೀಸನ್‌. ವಾಹಿನಿ ಈಗಾಗಲೇ ಶೇರ್ ಮಾಡಿರುವ ಪ್ರೊಮೋಗಳಂತೂ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ ಮತ್ತು ಶೋಗಾಗಿ ಕಾಯುವ ಹಾಗೆ ಮಾಡಿದೆ.

ಈ ಬಾರಿ ಬಿಗ್ ಬಾಸ್ ನಲ್ಲಿ ಸ್ವರ್ಗ ಮತ್ತು ನರಕ ಎನ್ನುವ ಹೊಸ ಕಾನ್ಸೆಪ್ಟ್ ಅನ್ನು ಆರಂಭ ಮಾಡಲಾಗ್ತಿದೆ. ಈಗ ಇವೆಲ್ಲವುಗಳ ನಡುವೆಯೇ ಹೊಸ ಪ್ರೊಮೋವನ್ನು (Bigg Boss Kannada Promo) ವಾಹಿನಿ ಶೇರ್ ಮಾಡಿದ್ದು ಅದರಲ್ಲಿ ಕಂಟೆಸ್ಟಂಟ್ ಗಳ ಬಗ್ಗೆ ಸುಳಿವನ್ನು ನೀಡಲಾಗಿದೆ. ಇದನ್ನ ಗಮನಿಸಿದ ಪ್ರೇಕ್ಷಕರು ಮತ್ತು ನೆಟ್ಟಿಗರು ಸ್ಪರ್ಧಿಗಳು ಯಾರೆಂಬುದನ್ನ ಊಹೆ ಮಾಡೋದಕ್ಕೆ ಮುಂದಾಗಿದ್ದಾರೆ.

ವಾಹಿನಿ ಶೇರ್ ಮಾಡಿರೋ ಪ್ರೊಮೋ ವನ್ನು ಗಮಿಸಿದ ನೋಡಿದವರು ಒಂದಷ್ಟು ಸ್ಪರ್ಧಿಗಳ ಹೆಸರಗಳನ್ನು ಗುರ್ತಿಸಿದ್ದಾರೆ. ಅದರಲ್ಲಿ ಹರಿಪ್ರಿಯಾ (Haripriya) ,‌ಕಿರಣ್ ರಾಜ್, ಗೌತಮಿ ಜಾದವ್ (Gautami Jadhav), ಭಾವನಾ ಮೆನನ್, ಭೂಮಿಕಾ ಬಸವರಾಜ್, ಪ್ರೇಮಾ, ಪಂಕಜ್ ಅವರ ಹೆಸರುಗಳು ಈಗ ಹರಿದಾಡುತ್ತಿವೆ.

ಎಲ್ಲರ ಊಹೆಯೇ ನಿಜವಾಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಇದೇ ವೇಳೆ ಪ್ರೊಮೊದಲ್ಲಿ ರಾಜಾ ರಾಣಿ ಶೋ ನ ಗ್ರಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಕಂಟೆಸ್ಟೆಂಟ್ ಗಳ ಹೆಸರುಗಳನ್ನ ರಿವೀಲ್ ಮಾಡಲಾಗುತ್ತೆ ಅವರು ಸ್ವರ್ಗಕ್ಕೆ ಹೋಗಬೇಕಾ, ನರಕಕ್ಕೆ ಹೋಗಬೇಕಾ ನೀವೇ ಹೇಳಿ ಅನ್ನೋ ಮಾತನ್ನ ಸಹಾ ಹೇಳಲಾಗಿದೆ.

Kannada Actress ಐದು ಜನ ಇದ್ದೀವಿ ಕರೆದಾಗ ಬರ್ತೀಯಾ? ಸ್ಟಾರ್ ನಟಿ ಬಾಯಿ ಬಿಟ್ಟ ಶಾಕಿಂಗ್ ವಿಚಾರ

Leave a Comment