Bigg Boss : ಬಿಗ್ ಬಾಸ್ (Bigg Boss) ಮನೆಯ ಜಗಳದ ವಿಷಯ ಈಗ ಚರ್ಚೆಯ ವಿಷಯವಾಗಿ ಬದಲಾಗಿದೆ. ಅಲ್ಲದೇ ಲಾಯರ್ ಜಗದೀಶ್ (Lawyer Jagadish) ಮತ್ತು ರಂಜಿತ್ ಇಬ್ಬರೂ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿಗಳು ಆಗಿವೆ. ಇವೆಲ್ಲವುಗಳ ನಡುವೆ ನಿನ್ನೆಯ ಎಪಿಸೋಡ್ ಬಗ್ಗೆ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಗೆ ಈ ಸಲ ತುಕಾಲಿ ಸಂತೋಷ್ ಪತ್ನಿ ಮಾನಸ ಬರ್ತಿದ್ದಾರೆ ಅಂತ ಗೊತ್ತಾದ ಕೂಡಲೇ ಜನ ಟೀಕೆಗಳನ್ನು ಮಾಡಿದ್ದರು.
ನಿನ್ನೆ ಜಗದೀಶ್ ಅವರು ಕ್ಯಾಪ್ಟನ್ ಜೊತೆ ಮಾತಾಡುವಾಗ ಮಾನಸ ಮಾತನಾಡಿ ಅದು ಜಗಳಕ್ಕೆ ಕಾರಣವಾದಾಗ ಮಾನಸ (Manasa) ಜಗದೀಶ್ ಅವರಿಗೆ ಬಿಗ್ ಬಾಸ್ ಎಕ್ಕಡ ತಿಂದು ಅವರಿಗೆ ಮೋಸ ಮಾಡ್ತೀಯಾ ಅಂದಿದ್ದಾರೆ. ಅದಕ್ಕೆ ಜಗದೀಶ್ ಅವರು ಗಂಡಸರ ಜೊತೆ ಹೀಗೆ ಮಾತಾಡೋದು ಸರಿ ಅಲ್ಲ ಎನ್ನುವ ಮಾತನ್ನು ಹೇಳಿದ್ದರು. ಈಗ ಮಾನಸ ಅವರ ಹಳೆ ಸಂದರ್ಶನದ ವೀಡಿಯೋ ಒಂದು ಮುನ್ನೆಲೆಗೆ ಬಂದಿದೆ.
ಮಾನಸ ತಮ್ಮ ಸಂದರ್ಶನದಲ್ಲಿ, ಮದುವೆಯಾದ ಒಂದು ವಾರ ಮಾತ್ರ ರೀ ಸಂತು ಸಂತೋಷ್ ಬನ್ನಿ ಎಂದು ಗೌರವದಿಂದ ಮಾತನಾಡುತ್ತಿದ್ದೆ. ಆದರೆ ಅಡ್ಜಸ್ಟ್ ಆಗ್ತಾ ಇದ್ದ ಹಾಗೆ ಹೋಗೋ ಬಾರೋ ಅಂತ ಮಾತನಾಡೋಕೆ ಶುರು ಮಾಡಿದೆ. ಗೌರವ ಕೊಟ್ಟ ಮಾತನಾಡಿದರೆ ಏನ್ ಆಯ್ತು, ನಂದು ಏನು ತಪ್ಪಾಗಿದೆ ಎಂದು ಸಂತು ಗಾಬರಿ ಆಗುತ್ತಾನೆ.
ಹೋಗೋ ಬಾರೋ ಅಂತಲೇ ನಾವು ಮಾತನಾಡುವುದು ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗ್ತಿದೆ. ಹೀಗಾಗಿ ಪತಿ ಸಂತೋಷ್ ಗೆ ಗೌರವ ಕೊಡದ ಹೆಣ್ಣು ಇನ್ನಿತ್ತರ ಗಂಡಸರಿಗೆ ಗೌರವ ಕೊಡುತ್ತಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.