Bigg Boss : ಅಕ್ಕನನ್ನ ಗುರುತು ಹಿಡಿಯದ ತಮ್ಮ; ಬಿಕ್ಕಿ ಬಿಕ್ಕಿ ಅತ್ತು ಭಾವುಕರಾದ ಮೋಕ್ಷಿತಾ

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಫ್ಯಾಮಿಲಿ ವೀಕ್ ನಿನ್ನೆ ಶುರುವಾಗಿದೆ. ನಿನ್ನೆ ಬಿಗ್ ಬಾಸ್ (Bigg Boss) ಮನೆಗೆ ಭವ್ಯ ಗೌಡ ಅವರ ಅಮ್ಮ, ಅಕ್ಕ ಎಲ್ಲಾ ಬಂದು ತುಂಬಾ ಹೊತ್ತು ಕಾಲ ಕಳೆದಿದ್ದಾರೆ. ಇವರಲ್ಲದೇ ತ್ರಿವಿಕ್ರಮ್ ಅವರ ತಾಯಿ, ರಜತ್ ಅವರ ಪತ್ನಿ ಮತ್ತು ಮಕ್ಕಳು ಸಹಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ತಮ್ಮವರ ಜೊತೆಗೆ ಒಂದಷ್ಟು ಸಮಯವನ್ನು ಕಳೆದು ಹೋಗಿದ್ದಾರೆ.‌

ಈಗ ಇವೆಲ್ಲವುಗಳ ನಡುವೆ ಬಿಗ್ ಬಾಸ್ ಮನೆಗೆ ಮೋಕ್ಷಿತಾ (Mokshitha) ಅವರ ಸಹೋದರ, ಅವರ ತಂದೆ ತಾಯಿ ಎಂಟ್ರಿ ಕೊಟ್ಟಿದ್ದು ವಾಹಿನಿ ಈ ಹೊಸ ಪ್ರೊಮೊವನ್ನು ಶೇರ್ ಮಾಡಿಕೊಂಡಿದೆ. ಪ್ರೊಮೊ ನೋಡಿ ಅನೇಕರು ಭಾವುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕಾಮೆಂಟ್ ಮಾಡಿದ್ದಾರೆ.

ಒಳಗೆ ಮನೆ ಮಂದಿಯೊಂದಿಗೆ ಖುಷಿಯಿಂದ ಡಾನ್ಸ್ ಮಾಡ್ತಿದ್ದ ಮೋಕ್ಷಿತಾ ಅವರಿಗೆ ಬಿಗ್ ಬಾಸ್ ಮೋಕ್ಷಿತಾ ತಮ್ಮನ ಭೇಟಿ ಮಾಡುವ ಸಮಯ ಎನ್ನುವ ಸುಳಿವನ್ನು ನೀಡಿದ್ದಾರೆ. ಕೂಡಲೇ ಮೋಕ್ಷಿತಾ ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ. ಮೋಕ್ಷಿತಾ ತಮ್ಮ ಅಮ್ಮನಿಗಿಂತ ಮೊದಲು ತಮ್ಮನ ಬಳಿ ಓಡಿ ಬಂದಿದ್ದಾರೆ.

ಆದರೆ ವೀಲ್ ಚೇರ್ ಮೇಲಿದ್ದ ಮೋಕ್ಷಿತಾ ಅವರ ತಮ್ಮ ತನ್ನ ಅಕ್ಕನನ್ನು ಗುರ್ತಿಸಿಲ್ಲ. ಇಷ್ಟು ದಿನ ಮನೇಲಿ ಇರದಿದ್ದಕ್ಕೆ ನನ್ನನ್ನ ಮರೆತು ಹೋಗಿದ್ದಾನೆ ಅಂತ ಮೋಕ್ಷಿತಾ ತಮ್ಮನನ್ನು ತಬ್ಬಿ ಕಣ್ದೀರು ಹಾಕಿದ್ದು ಇದನ್ನು ನೋಡಿ ಮನೆ ಮಂದಿ ಮಾತ್ರವೇ ಅಲ್ಲದೇ ನೋಡುಗರನ್ನು ಕೂಡಾ ಭಾವುಕರನ್ನಾಗಿಸಿದೆ.

Leave a Comment