Bigg Boss Kannada : ಬಿಗ್ ಬಾಸ್ (Bigg Boss Kannada) ಮನೇಲಿ ಮೋಕ್ಷಿತಾ (Mokshitha), ಗೌತಮಿ (Gouthami) ಮತ್ತು ಮಂಜಣ್ಣನ (Manjanna) ಸ್ನೇಹ ಆರಂಭದ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಆದರೆ ಅನಂತರ ಆದ ಬದಲಾವಣೆಗಳಲ್ಲಿ ಮೋಕ್ಷಿತಾ ಗೌತಮಿ ಮತ್ತು ಮಂಜಣ್ಣ ಅವರಿಂದ ದೂರವಾಗಿದ್ದರು. ತಾನು ಸ್ವತಂತ್ರವಾಗಿ ಆಟ ಆಡಲು ಬಯಸಿ ಗೌತಮಿ ಮತ್ತು ಮಂಜಣ್ಣನಿಂದ ದೂರವಾದರು. ಅನಂತರ ಒಂದಷ್ಟು ಮಾತುಗಳ ವಿನಿಮಯ ನಡೆದಿತ್ತು.
ಟಾಸ್ಕ್ ವೊಂದರಲ್ಲಿ ಈ ಮೂವರ ಸ್ನೇಹದಲ್ಲಿ ಬಿರುಕು ಮೂಡಿ, ಮಂಜಣ್ಣ ಮತ್ತು ಮೋಕ್ಷಿತಾ ನಡುವೆ ತೀರಾ ವೈಮನಸ್ಸು ಬೆಳೆದಿತ್ತು. ಈಗ ಇವೆಲ್ಲವುಗಳ ನಡುವೆ ಬಿಗ್ ಬಾಸ್ ಕೊಟ್ಟ ಹೊಸ ಚಟುವಟಿಕೆಯೊಂದರಲ್ಲಿ ಮೋಕ್ಷಿತಾ ಗೌತಮಿ ಮೇಲಿನ ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕಿದಂತೆ ಕಂಡಿದೆ.
ಬಿಗ್ ಬಾಸ್ (BBK 11) ನೀಡಿದ ಚಟುವಟಿಕೆಯಲ್ಲಿ ಮೋಕ್ಷಿತಾ, ಗೌತಮಿ ನಮ್ಮ ಮೂವರ ಫ್ರೆಂಡ್ ಶಿಪ್ ಕಾಪಾಡ್ತೀನಿ ಅಂದಿದ್ರು, ಆದರೆ ಅದು ಹಾಗಾಗಿಲ್ಲ ಅಂತ ಹೇಳಿದ್ದು ಮಾತ್ರವಲ್ಲದೇ, ಮಂಜಣ್ಣನಿಗೆ ಬೇಜಾರಾದಾಗ ಗೌತಮಿಗೆ ಫೀಲ್ ಆಗುತ್ತೆ, ಆದ್ರೆ ಮೋಕ್ಷಿತಾಗೆ ಬೇಜಾರಾದಾಗ ಆ ಗೌತಮಿ ಇರ್ತಾ ಇರ್ಲಿಲ್ಲ ಅಂತ ಹೇಳಿ ಸ್ವಿಮ್ಮಿಂಗ್ ಪೂಲ್ ಗೆ ನೂಕಿದ್ದರು.
ಗೌತಮಿ ಮೋಕ್ಷಿತಾಗೆ ಪ್ರತಿಕ್ರಿಯೆ ಕೊಟ್ಟು, ನೀವು ಹೊರಗೆ ಹೋಗಿ ಬಂದ್ಮೇಲೆ ಆಟದ ವಿಚಾರದಲ್ಲಿ ಬಹಳಷ್ಟು ಬದಲಾದ್ರಿ, ನಾನು ಕೂತ್ರೆ ನನ್ನ ತರ ಮಾತಾಡ್ತೀನಿ, ನಿಮ್ಮ ತರ ಅಲ್ಲ. ಫ್ರೆಂಡ್ ಶಿಪ್ ನ ನಿಭಾಯಿಸ್ತಾ ಇರೋದು ನಾನೇ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವೆ ಸ್ನೇಹ ಮೊದಲಿನಂತೆ ಇಲ್ಲ ಅನ್ನೋದಂತೂ ಗೊತ್ತಾಗಿದೆ.