Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮಾತಿನ ಚಕಮಕಿಯೊಂದಿಗೆ ಮುಗಿದಿದೆ. ಮನೆಯಲ್ಲಿ ಹನುಮಂತ ಚೈತ್ರ ಅವರನ್ನ, ಗೌತಮಿ ಅವರು ತ್ರಿವಿಕ್ರಮ್ ನ ಮತ್ತು ಭವ್ಯ ಐಶ್ವರ್ಯನ ನಾಮಿನೇಟ್ ಮಾಡಿರೋದು ಹೊಸ ಪ್ರೊಮೊದಲ್ಲಿ ಕಾಣಿಸಿಕೊಂಡಿದೆ. ಆದರೆ ಇದೇ ನಾಮಿನೇಷನ್ ನಲ್ಲಿ ಒಂದು ಸರ್ಪ್ರೈಸ್ ಕೂಡಾ ವೀಕ್ಷಕರಿಗೆ ಕಾಣಿಸಿದೆ.
ಹೌದು, ಏನದು ಸರ್ಪ್ರೈಸ್ ಅಂದ್ರೆ ಮೋಕ್ಷಿತಾ (Mokshitha) ಮಂಜಣ್ಣನ (Ugram Manju) ನಾಮಿನೇಟ್ ಮಾಡಿ, ಅವರು ಮನೆಗಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ ಅಂತ ಹೇಳಿದ್ದಾರೆ. ಇದಕ್ಕೆ ಮಂಜಣ್ಣ ನಾಳೆಯಿಂದ ನಿಮ್ಮ ಹತ್ರ ಟ್ಯೂಷನ್ ಗೆ ಬರ್ತೀನಿ ಅಂತ ಟಾಂಗ್ ನೀಡಿದ್ದು, ನಿಮಗೆ ಕಾಣಿಸಿಕೊಳ್ಳೋಕೆ ಏನಾದ್ರು ತಂದು ಕೊಡಬೇಕಾ ಅಂತ ಮೋಕ್ಷಿತಾನ ಕೇಳಿದ್ದಾರೆ.
ಮೋಕ್ಷಿತಾ ಆಗ ಹಾಗಾದ್ರೆ ಮನೇಲಿ ಒಬ್ಬರಿಗೆ ತಗೊಂಡು ಹೋಗಿ ಕೊಟ್ಟಾಗ್ಲೇ ಕಾಣಿಸಿಕೊಳ್ತೀರಾ ಅಂತ ಮಂಜಣ್ಣನಿಗೆ ಶಾಕಿಂಗ್ ರಿಪ್ಲೈ ಕೊಟ್ಟಿದ್ದು, ಇದು ಪರೋಕ್ಷವಾಗಿ ಗೌತಮಿಗೆ ಹೇಳಿದ ಹಾಗೆ ಕಂಡಿದೆ ಮತ್ತು ಇದು ಗೌತಮಿಗೂ ಶಾಕ್ ಆಗಿದೆ. ಮಂಜಣ್ಣ ನಾನು ಈ ನಾಮಿನೇಷನ್ ಒಪ್ಪಲ್ಲ ಅಂದ ಕೂಗಾಗಿದ್ದಾರೆ.
ಮಂಜಣ್ಣನ ಮಾತಿಗೆ ಮೋಕ್ಷಿತಾ ನನಗೂ ಗಟ್ಟಿಯಾಗಿ ಮಾತನಾಡೋಕೆ ಬರುತ್ತೆ ಅಂತ ಹೇಳಿದ್ದು ಮಾತ್ರವೇ ಅಲ್ಲದೇ ಇದು ನನ್ನ ನಾಮಿನೇಷನ್ ನನ್ನ ಇಷ್ಟ ಅಂತ ಉತ್ತರ ಕೊಟ್ಟಿದ್ದಾರೆ. ಸುದೀಪ್ ಅವ್ರು ಪ್ರತಿ ವಾರ ಏನೇ ಹೇಳಿದ್ರು, ಎಷ್ಟೇ ಹೇಳಿದ್ರು ಎಚ್ಚೆತ್ತುಕೊಳ್ಳದ ಮಂಜಣ್ಣ ಈಗಲಾದ್ರು ಬದಲಾಗ್ತಾರಾ??