Kichcha Sudeep : ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ನ (Bigg Boss Kannada 11) ವೇದಿಕೆ ಮೇಲೆ ಇರುವಾಗಲೇ ಅವರ ತಾಯಿಯವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 20 ರಂದು ಸರೋಜಮ್ಮನವರು ಇಹಲೋಕವನ್ನು ತ್ಯಜಿಸಿದರು. ತಾಯಿಯ ಅಗಲಿಕೆಯ ನೋವಿನಲ್ಲಿದ್ದ ಕಿಚ್ಚ ಸುದೀಪ್ ಅವರು ವೀಕೆಂಡ್ ಪಂಚಾಯ್ತಿಗೆ ಹಾಜರಾಗಿರಲಿಲ್ಲ. ಆದರೆ ಈಗ ಸುದೀಪ್ ಅವರು ತಮ್ಮ ಮೇಲಿರುವ ಕರ್ತವ್ಯದ ಜವಾಬ್ದಾರಿಯನ್ನು ನಿಭಾಯಿಸಲು ಬಿಗ್ ಬಾಸ್ ವೇದಿಕೆಯಲ್ಲಿ ಹಾಜರಾಗಿದ್ದಾರೆ.
ಬಿಗ್ ಬಾಸ್ ಗೆ ಸುದೀಪ್ ಅವರ ಮರಳಿದ್ದು, ಬಿಗ್ ಬಾಸ್ ಮೂಲಕ ಸುದೀಪ್ ಅವರ ತಾಯಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಗಿದೆ. ಬಿಗ್ ಬಾಸ್ ಧ್ವನಿಯು ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯನಂತ ನಾಯಕನನ್ನು ಕರುನಾಡ ಮಡಿಲಿಕೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ ಎಂದು ಹೇಳಿದೆ.
ಶೋ ನೋಡಲು ಬಂದಿದ್ದ ವೀಕ್ಷಕರು ಬಿಳಿಯ ಬಟ್ಟೆಗಳನ್ನು ತೊಟ್ಟು, ಮೇಣದ ಬತ್ತಿ ಹೊತ್ತಿಸಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಭಾವನಾತ್ಮಕ ಹಾಡೊಂದನ್ನು ಹಾಡುತ್ತಾ ವೇದಿಕೆಗೆ ಬರುತ್ತಿರುವುದು ಸಹಾ ಕಾಣಿಸಿದೆ. ನೋವಿನ ನಡುವೆಯೂ ತಮ್ಮ ಜವಾಬ್ದಾರಿ ನಿರ್ವಹಿಸಲು ಕಿಚ್ಚು ಸುದೀಪ್ ಅವರು ಆಗಮಿಸಿರುವುದನ್ನು ಕಂಡು ಸೋಶಿಯಲ್ ಮೀಡಿಯಾದಲ್ಲಿ ಜನ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.
ಇನ್ನು ಈ ವಾರ ಮನೆಯಲ್ಲಿ ಗೌತಮಿ (Gowthami) ಮತ್ತು ತ್ರಿವಿಕ್ರಮ್ (Trivikram) ಬಿಟ್ಟು ಉಳಿದವರೆಲ್ಲರೂ ಸಹಾ ನಾಮಿನೇಟ್ ಆಗಿದ್ದಾರೆ. ಇದ್ರಲ್ಲಿ ಯಾರೆಲ್ಲಾ ಇವತ್ತು ಸೇವ್ ಆಗ್ತಾರೆ ? ಕಿಚ್ಚ ಸುದೀಪ್ ಅವರು ಯಾವೆಲ್ಲಾ ವಿಚಾರಗಳನ್ನ ಮಾತಾಡ್ತಾರೆ, ಯಾರಿಗೆಲ್ಲಾ ಕ್ಲಾಸ್ ತಗೊಳ್ತಾರೆ ಅನ್ನೋದನ್ನ ನೋಡೋಕೆ ಬಿಗ್ ಬಾಸ್ ವೀಕ್ಷಕರು ಸಹಾ ಬಹಳ ಕಾತರದಿಂದ ಕಾಯ್ತಿದ್ದಾರೆ.
Samantha ನಾಗಚೈತನ್ಯಗೆ ಸಮಂತಾ ಕೊಡ್ತಿದ್ದಾರಾ ಲೀಗಲ್ ನೋಟೀಸ್? ಮಾಜಿ ಪತಿಯಿಂದ ಬೇಸರಗೊಂಡ್ರಾ ಸಮಂತಾ