Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಹನ್ನೊಂದರಲ್ಲಿ ಹನುಮಂತ ಎಲ್ಲರ ವಿಶೇಷ ಗಮನವನ್ನು ಸೆಳೆಯುತ್ತಿರುವ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ (BBK 11) ಮನೆಗೆ ಎಂಟ್ರಿ ಕೊಡುತ್ತಲೇ ಬಿಗ್ ಬಾಸ್ ಹನುಮಂತನನ್ನ (Hamumantha) ಮನೆಯ ಕ್ಯಾಪ್ಟನ್ ಆಗಿ ಮಾಡಿದ್ದರು. ಅದಾದ ನಂತರ ಕಳೆದ ವಾರದಲ್ಲಿ ನಡೆದ ಟಾಸ್ಕ್ ನಲ್ಲಿ ಗೆದ್ದ ಹನುಮಂತ ಎರಡನೆಯ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಎರಡು ಸಲ ಮನೆಯ ಕ್ಯಾಪ್ಟನ್ ಆಗಿರುವುದು ಒಂದು ವಿಚಾರವಾದರೆ, ಈ ಸೀಸನ್ ನಲ್ಲಿ ಕಿಚ್ಚನ ಚಪ್ಪಾಳೆಯನ್ನು ಪಡೆದ ಮೊದಲ ಸ್ಪರ್ಧಿ ಕೂಡಾ ಹನುಮಂತನೇ ಆಗಿದ್ದಾನೆ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಈಗ ಇವೆಲ್ಲವುಗಳ ನಡುವೆ ಹನುಮಂತನಿಗೆ ಕ್ಯಾಪ್ಟನ್ಸಿ ಮೇಲೆ ಬೇಸರ ಮತ್ತು ವಿರಕ್ತಿ ಮೂಡಿದಂತೆ ಕಂಡಿದೆ.
ಧನರಾಜ್ (Dhanraj) ಮತ್ತು ತ್ರಿವಿಕ್ರಮ್ (Trivikram) ಜೊತೆ ಕುಳಿತುಕೊಂಡಿದ್ದ ಹನುಮಂತ ಕ್ಯಾಪ್ಟನ್ಸಿ ಕುರಿತಾಗಿ ಮಾತನಾಡಿದ್ದಾರೆ. ಈ ವೇಳೆ ಹನುಮಂತ ಈ ವಾರ ಕ್ಯಾಪ್ಟನ್ ಶಿಪ್ ಆಗಲ್ಲಣ ಅಂದಿದ್ದಾರೆ. ತ್ರಿವಿಕ್ರಮ್ ನೀನೇ ಕಣೋ ಯಾಕೆ ಬೇಜಾರಾಯ್ತಾ, ಚೆನ್ನಾಗೇ ಆಡ್ತಾ ಇದ್ದೀಯಲ್ಲ ಅಂತ ಅಂದಿದ್ದಾರೆ.
ಅದಕ್ಕೆ ಹನುಮಂತ ಬೇರೆ ಅವ್ರಿಗೆ ಅವಕಾಶ ಕೊಡೋಣ ಅಂತ, ಎರಡು ವಾರ ನಾನೇ ಮಾಡ್ಬಿಟ್ರೆ ಹೇಗೆ ಅಂತ ಹೇಳಿದ್ದಾನೆ. ತ್ರಿವಿಕ್ರಮ್ ಅದಕ್ಕೆ ನಿನ್ನ ವಿಶಾಲ ಹೃದಯಕ್ಕೆ ಮೆಚ್ಕೊಂಡು ಬಿಗ್ ಬಾಸ್ ಏನಾದ್ರು ಕೊಟ್ರೆ ಬೇರೆ ಅವರು ಏನಾದ್ರು ಮಾಡ್ತಾರೆ ಸುಮ್ನಿರು ಅಂದಿದ್ದು , ಹನುಮಂತ ಆಗ ಈ ವಾರ ಇನ್ನು ಎಷ್ಟು ದಿನ ಇದೆ ಎಂದಿದ್ದಾರೆ. ಹನುಮಂತನ ಮಾತನಿಂದ ಅವನಿಗೆ ಕ್ಯಾಪ್ಟನ್ ಶಿಪ್ ಬೇಸರ ತರಿಸಿರೋ ಹಾಗೆ ಕಾಣ್ತಿದೆ.
Lawyer Jagadish: ಹೆಂಡ್ತಿ ಮಕ್ಕಳ ವಿಚಾರಕ್ಕೆ ಬಂದ್ರೆ ನನ್ನ ತಾಕತ್ತು ತೋರಿಸ್ತೀನಿ: ದರ್ಶನ್ ಗೆ ಜಗದೀಶ್ ಎಚ್ಚರಿಕೆ