Bigg Boss : ಚೈತ್ರ ಮೇಲೆ ರೊಚ್ಚಿಗೆದ್ದ ಹನುಮಂತ; ಶಾಂತನಾಗಿದ್ದ ಹನುಮಂತನ ಕೆರಳಿಸಿ ಬಿಟ್ರಾ ಚೈತ್ರ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸದಾ ಶಾಂತವಾಗಿರೋ ಸ್ಪರ್ಧಿ ಅಂದ್ರೆ ಹನುಮಂತ (Hanumantha) ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮನೆಗೆ ಎಂಟ್ರಿ ಕೊಟ್ಟಾಗಿ‌ನಿಂದಲೂ ಹನುಮಂತ ಅನಾವಶ್ಯಕ ಮಾತು, ಜಗಳ ಇಂತದ್ದನ್ನು ಮಾಡಿಲ್ಲ. ತಾನು, ತನ್ನ ಆಟ ಎಂದು ತೊಡಗಿಸಿಕೊಂಡಿದ್ದ ಹನುಮ ಅನೇಕರ ಮನಸ್ಸನ್ನು ಗೆದ್ದಿದ್ದಾನೆ. ಆದರೆ ಮೊದಲ ಬಾರಿಗೆ ಹನುಮಂತ ಕೂಡಾ ಸಿಟ್ಟಾಗಿದ್ದಾನೆ.‌

ಹೌದು, ಇದೇ ಮೊದಲ ಬಾರಿಗೆ ಬಿಗ್ ಬಾಸ್ (Bigg Boss) ಮನೇಲಿ ಟಾಸ್ಕ್ ನಲ್ಲಿ ರೊಚ್ಚಿಗೆದ್ದ ಹನುಮಂತ ಚೈತ್ರಾ ಅವರ ಜೊತೆಗೆ ವಾದಕ್ಕೆ ಇಳಿದಿದ್ದಾರೆ. ಬಿಗ್ ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಚೈತ್ರ ಕುಂದಾಪುರ ಅವರು ಉಸ್ತುವಾರಿಯಾಗಿದ್ದರು. ಆದರೆ ಉಸ್ತುವಾರಿಯಾಗಿ ಚೈತ್ರ ತಗೊಂಡ ನಿರ್ಧಾರಗಳು ಹನುಮಂತನಿಗೆ ಅಸಮಾಧಾನ ಉಂಟು ಮಾಡಿದೆ.

ಚೈತ್ರಾ ಕುಂದಾಪುರ ಅವರ ನಿರ್ಣಯ ಗಳಿಂದ ಹನುಮಂತ ಬೇಸರಗೊಂಡಿದ್ದು ಮಾತ್ರವೇ ಅಲ್ಲದೇ ಕೋಪದಿಂದ ಮಾತನಾಡಿ, ನನ್ನ ತಲೆ ಆಫ್ ಆದ್ರೆ, ನಾನು ಮೊದಲೇ ಸರಿ ಇಲ್ಲ, ಯಾರಾದ್ರು ಗಂಡು ಮಕ್ಕಳಾದ್ರೆ ಇತ್ತಾ? ಅಂತ ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಅಂತೂ ಇಂತೂ ಚೈತ್ರ ಅವರ ಉಸ್ತುವಾರಿಯ ಕಾರಣದಿಂದಾಗಿ ಹನುಮಂತ ಕೂಡಾ ಸಿಟ್ಟಾಗಿದ್ದಾರೆ.

ಹನುಮಂತನ ಈ ಸಿಟ್ಟು ವೀಕ್ಷಕರಿಗೆ ಸಹಾ ಅಚ್ಚರಿ ಮೂಡಿಸಿದೆ. ಇದೇ ವೇಳೆ ಕೆಲವರು ಚೈತ್ರ ಹನುಮಂತನ ಮುಖವಾಡ ಕಳಚಿದ್ದಾರೆ ಅಂತ ಕಾಮೆಂಟ್ ಮಾಡಿದ್ರೆ ಇನ್ನೂ ಕೆಲವರು ಚೈತ್ರ (Chaithra Kundapura) ಹೀಗೆ ಬೇರೆ ಅವರು ತಾಳ್ಮೆ ಕಳೆದುಕೊಳ್ಳುವ ಹಾಗೆ ಆಡಬಾರದು ಅಂತ ಕಾಮೆಂಟ್ ಗಳನ್ನು ಮಾಡಿದ್ದಾರೆ.

Bigg Boss : ಉಸ್ತುವಾರಿಯಲ್ಲಿ ಅಬ್ಬರಿಸಿ ಟಾಸ್ಕ್ ನಲ್ಲಿ ಮುಗ್ಗರಿಸಿದ ಚೈತ್ರ: ಟಾಸ್ಕ್ ಮಾಡೋಕೆ ಆಗ್ತಿಲ್ಲ ಅಂತ ಕಣ್ಣೀರು

Leave a Comment