Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ದಿನಸಿ ಟಾಸ್ಕ್ ಅನ್ನು ನೀಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇಟ್ಟಿರುವ ಬಿಗ್ ಬಾಸ್ (BBK 11) ದಿನಸಿ ಟಾಸ್ಕ್ ಆಡೋದಕ್ಕೆ ಆರು ಜನ ಸಮರ್ಥರಾಗಿ ಇರೋರು ಬೇಕು, ಅವರು ಟಾಸ್ಕ್ ಮಾಡಬೇಕು ಅನ್ನೋ ನಿಯಮವನ್ನು ತಿಳಿಸಿದ್ದಾರೆ. ಈ ವಿಷಯವಾಗಿ ಮನೆ ಮಂದಿ ಯಾರು ಆ ಆರು ಜನ ಅಂತ ಚರ್ಚೆಯನ್ನು ನಡೆಸಿದ್ದಾರೆ.
ಇದಾದ ಕೂಡಲೇ ಮಂಜಣ್ಣ (Ugram Manju) ನಾನು ಆಡಲೇಬೇಕು ಎಂದು ಕೈಯನ್ನ ಎತ್ತಿದ್ದಾರೆ. ಚೈತ್ರ ಕುಂದಾಪುರ, ಧನರಾಜ್ ಅವ್ರು ನಾವು ಆಡ್ತೀವಿ ಅಂತ ಹೇಳಿದ್ದಾರೆ. ಯಾರು ಆಡಬೇಕು ಮತ್ತು ಯಾರು ಆಡಬಾರದು ಅಂತ ಡಿಸ್ಕಸ್ ಮಾಡ್ತಾ ವಾದವನ್ನೇ ನಡೆಸಿದ್ದಾರೆ ಮನೆ ಮಂದಿ.
ಆರು ಜನ ಮೂರು ಜೋಡಿಗಳಾಗಿ ಆಡಿರೋ ತರ ಪ್ರೊಮೊದಲ್ಲಿ ಕಾಣ್ತಿದೆ. ಮಂಜಣ್ಣ ತಾನು ಬಹಳ ಬೇಗ ಆಡೋದಾಗಿ ಹೇಳಿದ್ದಾರೆ. ಇದಕ್ಕೆ ತ್ರಿವಿಕ್ರಮ್ ಒಂದು ವೇಳೆ ದಿನಸಿ ನಿಮ್ಮ ಕಡೆಯಿಂದ ಹೋದ್ರೆ ಆಗ ಏನು ಮಾಡಬೇಕು ಅಂತ ಮಂಜಣ್ಣನ್ನ ಪ್ರಶ್ನೆ ಮಾಡಿದ್ದಾರೆ. ಕ್ಯಾಪ್ಟನ್ ಭವ್ಯ ಸೈಲೆಂಟಾಗಿದ್ದು, ತ್ರಿವಿಕ್ರಮ್ (Trivikram) ಕ್ಯಾಪ್ಟನ್ ಕೆಲಸ ಮಾಡ್ತಿದ್ದಾರಾ ಅನಿಸಿದೆ.
ವಾಹಿನಿ ಇವತ್ತಿನ ದಿನಸಿ ಟಾಸ್ಕ್ ನ ಪ್ರೊಮೊನ ಶೇರ್ ಮಾಡಿದೆ. ಮಂಜಣ್ಣ ಬಹಳ ಆತ್ಮ ವಿಶ್ವಾಸದಿಂದ ಟಾಸ್ಕ್ ಮಾಡ್ತೀನಿ ಅಂತ ಹೋಗಿದ್ದು, ಅವರು ಟಾಸ್ಕ್ ನ ಸಕ್ಸಸ್ ಫುಲ್ ಆಗಿ ಪೂರ್ತಿ ಮಾಡಿದ್ರಾ ಇಲ್ವಾ ಅನ್ನೋದನ್ನ ಇಂದಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.